ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿ ಎಲ್ಲರ ಹುಬ್ಬೇರುವಂತೆ ಮಾಡಿದ ಬಿಜೆಪಿ ನಾಯಕ

By Suvarna NewsFirst Published Aug 26, 2020, 6:30 PM IST
Highlights

ಟಿಪ್ಪು ಸುಲ್ತಾನ್‌ ಒಬ್ಬ ಕ್ರೂರಿ, ಮತಾಂಧ ಅಂತೆಲ್ಲಾ ಬಿಜೆಪಿ ನಾಯಕರು ಕಿಡಿಕರಿದ್ದುಂಟು. ಅಲ್ಲದೇ ಟಿಪ್ಪು ಜಯಂತಿ ಮತ್ತು ಟಿಪ್ಪು ಸುಲ್ತಾನ್ ಅಧ್ಯಾಯನವನ್ನು ಶಾಲಾ ಪಠ್ಯದಿಂದ ಕೈಬಿಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಆದ್ರೆ, ಇತ್ತ ಬಿಜೆಪಿ ನಾಯಕರೊಬ್ಬರು ಇದೇ ಟಿಪ್ಪುವನ್ನು ಕೊಂಡಾಡಿದ್ದಾರೆ.

ಬೆಂಗಳೂರು, (ಆ.26): ಟಿಪ್ಪು ಅಂದ್ರೆ  ಬಿಜೆಪಿ ನಾಯಕರು ಸಿಡಿದು ಬೀಳುತ್ತಾರೆ. ಇದರ ಮಧ್ಯೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್‌ರನ್ನ ಹಾಡಿ ಹೊಗಳಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

"

ಹೌದು..ಟಿಪ್ಪು ಈ ನೆಲದ ಮಗ ವೀರ ಹೋರಾಟಗಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಪ್ರಶಂಸಿಸಿದ್ದಾರೆ. 

‘ದೇವಸ್ಥಾನ ಒಡೆದ ಧರ್ಮಭ್ರಷ್ಟನನ್ನು ಯಾಕೆ ಪಠ್ಯದಲ್ಲಿ ಇಟ್ಟುಕೊಳ್ಳಬೇಕು’

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಮಾಡುವ ಬಗ್ಗೆ ಹೋರಾಟದ ಬಗ್ಗೆ ಮಾತನಾಡುವಾಗ ಟಿಪ್ಪುವನ್ನು ಹೊಗಳಿದ್ದಾರೆ. ಸಂಗ್ಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರು ಟಿಪ್ಪು ವಿರುದ್ಧ ಹೇಳಿಕೆ ನೀಡುತ್ತಿದ್ದರೆ ಈಗ ಅವರದ್ದೇ ಪಕ್ಷದ ಮುಖಂಡ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೊಗಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ವಿಶ್ವನಾಥ್ ಅವರ ಹೇಳಿಕೆಗೆ ಬಿಜೆಪಿ ನಾಯಕರು ಯಾವ ರೀತಿ ಹೇಳಿಕೆ ಕೊಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.

ಟಿಪ್ಪು ಪ್ರಶಂಸೆ: ಬಿಜೆಪಿಗೆ ದಿನೇಶ್ ಗುಂಡೂರಾವ್ ಟಾಂಗ್

"

click me!