
ಬೆಂಗಳೂರು, (ನ.27): ಈಗಾಗಲೇ ತರಾತುರಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ಬೆನ್ನಲ್ಲೇ ವೀರಶೈವ ಲಿಂಗಾಯತ ನಿಗಮ ಸ್ಥಾಪನೆ ಮಾಡಬೇಕಾದ ಅನಿರ್ವಾವಾಯ್ತು.
ಇದೀಗ ವಿಜಯನಗರ ನೂತನ ಜಿಲ್ಲೆ ರಚನೆ ಬೆನ್ನಲ್ಲೇ ಹುಣಸೂರು ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಆರಂಭವಾಗಿದ್ದು, ದೇವರಾಜ್ ಅರಸ್ ಹೆಸರಿನಲ್ಲಿ ಹುಣಸೂರನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಹುಣಸೂರು ಜಿಲ್ಲೆ ಮಾಡಿ ಎಂದು ಬೇಡಿಕೆ ಇಟ್ಟಿದ್ದೆವು. 6 ತಾಲ್ಲೂಕು ಸೇರಿ ದೇವರಾಜ್ ಅರಸ್ ಹೆಸರಿನಲ್ಲಿ ಜಿಲ್ಲೆ ಮಾಡಿ ಎಂದು ಬೇಡಿಕೆ ಇರಿಸಿದ್ದೆವು ಎಂದರು.
ದಿಲ್ಲಿಯಿಂದ ಅಮಿತ್ ಶಾ ಫೋನ್ ಕಾಲ್: ಸಿಎಂ ಬಿಎಸ್‌ವೈ ಫುಲ್ ಶಾಕ್...!
ಮೈಸೂರು ನಗರದ ಒತ್ತಡ ಕಾರಣದಿಂದ ಜಿಲ್ಲಾಧಿಕಾರಿ ಹುಣಸೂರು ಭಾಗಕ್ಕೆ ಅಪರೂಪಕ್ಕೆ ಬರುತ್ತಾರೆ. ಹೀಗಾಗಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ವಿಶ್ವನಾಥ್ ಒತ್ತಾಯಿಸಿದರು.
ಹುಣಸೂರು ಜಿಲ್ಲೆ ಮಾಡಬೇಕು ಎಂಬುದು ಬಹಳ ಹಿಂದಿನ ಬೇಡಿಕೆ ಇದೆ. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಇದು ಈಡೇರಬೇಕು. ಈ ಬಗ್ಗೆ ನಾನು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.