ಕಳೆದೊಂದು ವಾರದಿಂದ ರಾಜಯ ಬಿಜೆಪಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಇದರ ಮಧ್ಯೆ ಸಿಎಂ ಬಿಎಸ್‌ವೈ ನಡೆಗೆ ಬಿಜೆಪಿ ನಾಯಕರೊಬ್ಬರು ಅಸಮಾಧಾನಗೊಂಡಿದ್ದಾರೆ.
ಬೆಂಗಳೂರು, (ನ.27): ನಮ್ಮನ್ನು ನೋಡಿದಾಗಲೆಲ್ಲ ಕೂಡಲೇ ಮಂತ್ರಿ ಮಾಡುವುದಾಗಿ ಸಿಎಂ ಹೇಳುತ್ತಾರೆ. ಆದರೆ ಇನ್ನೂ ಕೂಡ ನಮ್ಮನ್ನು ಮಂತ್ರಿ ಮಾಡಲು ನಿರ್ಧಾರ ಮಾಡಿಲ್ಲ ಎಂದು ಎಂಟಿಬಿ ನಾಗರಾಜ್ ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಬಿಜೆಪಿ ಪಕ್ಷದಲ್ಲಿ ಯಾರನ್ನು ಬೇಕಾದರೂ ಮಂತ್ರಿ ಮಾಡಿಕೊಳ್ಳಲಿ ಆದರೆ ನಾವು ತ್ಯಾಗ ಮಾಡಿ ಬಂದಿರುವವರಿಗೆ ಮೊದಲು ಮಂತ್ರಿ ಮಾಡಬೇಕು ಎಂದು ಎಂಟಿಬಿ ಈ ಮೂಲಕ ಒತ್ತಾಹಿಸಿದರು.
undefined
ಸಂಪುಟ ಸರ್ಕಸ್‌ಗೆ ಟ್ವಿಸ್ಟ್; ಬಿಎಸ್‌ವೈಗೆ ಹೈಕಮಾಂಡ್‌ನಿಂದ ಬಂತು ಸ್ಪಷ್ಟ ಸಂದೇಶ
ನಾವು ಅವರನ್ನು ಭೇಟಿ ಮಾಡಿದಗಲೆಲ್ಲ ಮಂತ್ರಿ ಮಾಡ್ತೀನಿ ಅಂತಾರೆ. ಆದರೆ ನಮ್ಮನ್ನು ಮಂತ್ರಿ ಮಾಡಲು ಸಿಎಂ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದರು ಪರೋಕ್ಷವಾಗಿ ಎಂಟಿಬಿ ತಮಗೆ ಸಚಿವ ಸ್ಥಾನ ಸಿಗುವುದು ಅನುಮಾನ ವ್ಯಕ್ತಪಡಿಸಿದಂತಿದೆ.
ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗಲು ಇನ್ನೂ ಎರಡ್ಮೂರು ದಿನ ಕಾಯಬೇಕಿದೆ. ಶುಕ್ರವಾರ ಬೆಳಗ್ಗೆ ಸಿಎಂ ಬಿಎಸ್‌ವೈಗೆ ಕರೆ ಮಾಡಿದ್ದ ಅಮಿತ್ ಷಾ, ಎರಡ್ಮೂರು ದಿನದಲ್ಲಿ ಸಂಪುಟ ವಿಚಾರದಲ್ಲಿ ಗ್ರೀನ್ ಸಿಗ್ನಲ್ ಕೊಡ್ತೀವಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಎಂ ಅವರೇ ಮಾಹಿತಿ ನೀಡಿದ್ದು, ಸಚಿವ ಸಂಪುಟ ವಿಸ್ತರಣೆಗೆ ಇನ್ನೆರಡು ದಿನದಲ್ಲಿ ಪಟ್ಟಿ ಬರಲಿದೆ ಎಂದಿದ್ದಾರೆ. ಅಂದು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಬಹಿರಂಗ ಆಗಲಿದೆ ಎಂದು ಸ್ಪಷ್ಟಪಡಿಸಿದರು.