ಇತ್ತೀಚೆಗೆ ಸಿಎಂ ಬಿಎಸ್ ಯಡಿಯೂರಪ್ಪನವರ ನಾಗಾಲೋಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ದಲ್ಲದೇ, ಬಿಗ್ ಶಾಕ್ ಕೊಟ್ಟಿದೆ.
ಬೆಂಗಳೂರು, (ನ.27): ಮರಾಠ ಹಾಗೂ ವೀರಶೈವ-ಲಿಂಗಾಯತ ಅಭಿವೃದ್ಧಿ ಮಾಡಿ ಫುಲ್ ಫಾಸ್ಟ್ ಹೊರಟ್ಟಿದ್ದ ಸಿಎಂ ಬಿಎಸ್ ಯಡಿಯೂರಪ್ಪಗೆ ಕೊನೆಗೂ ಹೈಕಮಾಂಡ್ ಮೂಗುದಾರ ಹಾಕಿದೆ.
ಹೌದು...ಪುತ್ರ ವಿಜಯೇಂದ್ರ ಸಭೆಯಲ್ಲಿ ಭರವಸೆ ನೀಡಿದ 24 ಗಂಟೆಯೊಳಗೆ ಸಿಎಂ ಮರಾಠ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದ್ರು, ಬಳಿಕ ಅನಿರ್ವಾಯವಾಗಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಬೇಕಾಗಿ ಬಂತು.
ಅಲ್ಲದೇ ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಮುಂದಾಗಿದ್ದ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿದ್ದ ವಿಷಯವನ್ನು ಮುಂದೂಡಲಾಗಿದೆ. ಆದ ಕಾರಣ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಬೇಕಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರದ್ದುಪಡಿಸಿದರು.
ಶಾ ಫೋನ್ ಕಾಲ್
ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚಿಸಿದಕ್ಕೆ ಹೈಕಮಾಂಡ್ ಕಣ್ಣು ಕೆಂಪಾಗಿಸಿತ್ತು. ಇದರ ಬೆನ್ನಲ್ಲೇ ಒಬಿಸಿ ಮಾತು ಕೇಳಿತ್ತಿದ್ದಂತೆಯೇ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಮೂಲಕ ಯಡಿಯೂರಪ್ಪಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸದ್ಯಕ್ಕೆ ಇವೆಲ್ಲಾವುಗಳನ್ನು ಕೈಬಿಡಿಬೇಕು ಅಂತೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ. ಲಿಂಗಾಯತ ಸಮುದಾಯ ವಿಷಯವನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿ, ಲಿಂಗಾಯತರಲ್ಲಿ ಕೆಲವು ಉಪಜಾತಿಗಳಲ್ಲದೆ, ಒಕ್ಕಲಿಗರಲ್ಲೂ ಕೆಲವು ಜಾತಿಗಳು ಸೇರಿಸಬೇಕಾಗಿದೆ. ಹೀಗಾಗಿ ಸಮಗ್ರವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ವಿಷಯ ಮುಂದೂಡಲಾಗಿದೆ ಎಂದು ಹೇಳಿದರು.
ಇದರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವಿರಗೆ ಹಿನ್ನಡೆಯಾಗಿದ್ದು, ಮೀಸಲಾತಿಯ ನಿರೀಕ್ಷೆಯಲ್ಲಿದ್ದ ಸಮುದಾಯಕ್ಕೆ ಶಾಕ್.