ಮಠಗಳ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ರಾಜಣ್ಣನವರು ಹೇಳಿಕೆ ಕೊಟ್ಟಿರೋದು ಸರಿಯಲ್ಲಾ. ಅವರಿಗೆ ಅರಿವಿನ ಕೊರತೆಯಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಬೆಂಗಳೂರು (ಜೂ.29): ಮಠಗಳ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ರಾಜಣ್ಣನವರು ಹೇಳಿಕೆ ಕೊಟ್ಟಿರೋದು ಸರಿಯಲ್ಲಾ. ಅವರಿಗೆ ಅರಿವಿನ ಕೊರತೆಯಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಸ್ವಾಮಿಜಿಗಳು ಬೆವರು ಸುರಿಸಲ್ಲ ಎಂದಿರೋದು ಅವರ ಅರಿವಿನ ಕೊರತೆಯಿಂದ. ಪಕ್ಕದಲ್ಲಿ ಇರುವ ಮಠಗಳ ಕಾರ್ಯದ ಅರಿವಿಲ್ಲದೆ ಮಾತನಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಬಗ್ಗೆಯೂ ಅವರಿಗೆ ಗೊತ್ತಿಲ್ಲ ಅನ್ಸುತ್ತೆ. ರಾಜಣ್ಣನವರು ಸ್ವಾಮೀಜಿಗಳ ಬಗ್ಗೆ ಮಾತನಾದಿರೋದನ್ನ ಹಿಂಪಡೆಯಬೇಕು. ರಾಜಕೀಯವಾಗಿ ಟೀಕಿಸುವ ನೆಪದಲ್ಲಿ ಸ್ವಾಮೀಜಿಗಳ ಬಗೆಗೆ ತಪ್ಪು ಅಭಿಪ್ರಾಯ ಬರೋ ಹಾಗೆ ಮಾತನಾಡಿದ್ದಾರೆ.
ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಅಸಾಧ್ಯ: ಮಠಗಳು ಅಭಿವೃದ್ಧಿ ಹಾಗೂ ಶಿಕ್ಷಣ ನೀಡುವಲ್ಲಿ ಮುಂದಿವೆ. ರಾಜಕೀಯದವರು ಮಾಡದ ಕೆಲಸಗಳನ್ನು ಮಠಗಳು ಮಾಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಎಲ್ಲರ ಮತ ಪಡೆದು ಗೆಲ್ಲೋದು. ಒಂದು ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಅಸಾಧ್ಯ. ಜಾತಿಯವರು ನಿಂತಾಗ ಜಾತಿಯವರು ಹೆಚ್ಚು ಬೆಂಬಲ ನೀಡಿರಬಹುದೆ ಹೊರತು ಒಂದೇ ಜಾತಿಯಿಂದ ಮುಖ್ಯಮಂತ್ರಿ ಆಗಲು ಅಸಾಧ್ಯ, ಕರ್ಮದಿಂದ ಕಾಯಕ, ಯೋಗ್ಯತೆ, ವ್ಯಕ್ತಿತ್ವ ನಿರ್ಮಾಣವಾಗುತ್ತೆ ಎಂದರು.
ಸಿದ್ದು, ಡಿಕೆಶಿ ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ
ಬಿಜೆಪಿ ಮೇಲೆ 40% ಆರೋಪ ಮಾಡಿದ್ದವರು 100% ಲೂಟಿಗಿಳಿದಿದ್ದಾರೆ: ಯಾವುದೇ ಜಾತಿಯಲ್ಲಿ ಹುಟ್ಟಿದ್ರು ಜಾತಿಯ ಕಾರಣಕ್ಕೆ ಶ್ರೇಷ್ಠನಾಗಲು ಸಾಧ್ಯವಿಲ್ಲ. ಈ ಚರ್ಚೆಯ ಬೆಳವಣಿಗೆ ಆಡಳಿತದ ಮೇಲೆ ಉತ್ತಮ ಪರಿಣಾಮ ಬಿರೋದಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಮೇಲೆ 40% ಆರೋಪ ಮಾಡಿದ್ದವರು 100% ಲೂಟಿಗಿಳಿದಿದ್ದಾರೆ. ಜನರಿಗೆ ಬೇಕಾದ ಸಂಗತಿ ಬಿಟ್ಟು ಬೇರೆಲ್ಲ ಬೆಳವಣಿಗೆ ಒಳ್ಳೆಯದಲ್ಲಾ. ಸದಾನಂದಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ. ನಾನು ಜಾತಿಗಿಂತ ಸಿದ್ಧಾಂತಕ್ಕೆ ಜಾಸ್ತಿ ಒತ್ತು ಕೊಡ್ತೇನೆ ಎಂದು ಸಿ.ಟಿ.ರವಿ ಹೇಳಿದರು.