ಎಲ್ಲರ ಅಭಿಪ್ರಾಯ ತೆಗೆದುಕೊಂಡು ಒಳ್ಳೆಯ ಮುಖ್ಯಮಂತ್ರಿಯನ್ನು ನೇಮಕ ಮಾಡಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಈಗಾಗಲೇ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಬೆಳಗಾವಿ (ಜೂ.29): ನಮ್ಮ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಒಳ್ಳೆಯ ಮುಖ್ಯಮಂತ್ರಿಯನ್ನು ನೇಮಕ ಮಾಡಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಈಗಾಗಲೇ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆ ಈಡೇರಿಸಿ ಮುಂದೆ ಹೋಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆ ಮಾಡಿದ್ದಾರೆ. ಸಿದ್ದರಾಮಯ್ಯನವರು ಸಂಘಟನೆ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ. ನಾನು ತಳಮಟ್ಟದಿಂದ ಬಂದ ಕಾರ್ಯಕರ್ತೆ. ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಹಾರ ಎಲ್ಲಿದೆ ಎಂದು ಕಾಯುತ್ತಿದ್ದೇನೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರ ಸೊಕ್ಕಿನಿಂದ ಏನಾಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಇಡೀ ರಾಜ್ಯದಲ್ಲಿ ಹೆಚ್ಚಿನ ಮತಗಳಿಂದ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದರು. ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲಿ ಶತಾಯಗತಾಯ ನನ್ನ ಸೋಲಿಸಬೇಕು ಎಂದು ಬಂದಿದ್ದರು. ಅದಕ್ಕೆ ಜನ ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದು ಗೊತ್ತು. ದೊಡ್ಡ ಹಾರವನ್ನು ತಂದು ಲಕ್ಷ್ಮೀ ಹೆಬ್ಬಾಳಕರ ಕೊರಳಿಗೆ ಹಾಕುತ್ತೇನೆ. 2018ರಲ್ಲಿ ನಾನೇ ಗೆಲ್ಲಿಸಿದ್ದು, ನಾನೇ ಸೋಲಿಸುತ್ತೇನೆ ಎಂದಿದ್ದರು. ನಾನು, ಇನ್ನೂ ಹಾರ ಎಲ್ಲಿದೆ ಎಂದು ಕಾಯುತ್ತಿದ್ದೇನೆ. ಗೆದ್ದ ಮೇಲೂ ನಾನೂ ಉತ್ತರ ಕೊಡಲಿಲ್ಲ. ಈಗಲೂ ಉತ್ತರ ಕೊಡಲ್ಲ, ಕಾಲಾಯ ತಸ್ಮೈ ನಮಃ. ಯಾರಿಗೆ ಸೊಕ್ಕು ಬಂದಿದೆ. ಉತ್ತರ ಬರಲಿದೆ ಎಂದು ಹೇಳಿದ್ದಾರೆ.
undefined
ನಾನೇನು ತಪ್ಪು ಮಾಡಿಲ್ಲ, ಆದರೂ ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದಾರಂತೆ ಪವಿತ್ರಾ ಗೌಡ: ವಕೀಲ ನಾರಾಯಣಸ್ವಾಮಿ
ಸೋಲಿನಿಂದ ಎದೆಗುಂದಿಲ್ಲ, ಸಂಘಟನೆಯಲ್ಲಿ ತೊಡಗೋಣ: ಲೋಕಸಭಾ ಚುನಾವಣೆ ಸೋಲಿನಿಂದ ಯಾರೂ ಧೈರ್ಯಗೆಡುವ ಅಗತ್ಯ ಇಲ್ಲ. ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ. ಅದು ತಾತ್ಕಾಲಿಕ ಅಷ್ಟೇ. ಸಂಘಟನೆ ಮತ್ತು ಹೋರಾಟ ನಿರಂತರವಾಗಿರಲಿದೆ. ಅದರ ಮೂಲಕ ನಮ್ಮ ಶಕ್ತಿಯನ್ನು ಮರಳಿ ಪಡೆದುಕೊಳ್ಳೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕರ್ತರಿಗೆ ಕರೆ ನೀಡಿದರು. ಬೆಳಗಾವಿ ತಾಲೂಕಿನ ಹಲಗಾದ ಸುವರ್ಣ ಗಾರ್ಡನ್ ಕಾರ್ಯಾಲಯದಲ್ಲಿ ಹಲಗಾ ಮತ್ತು ಹಿರೇಬಾಗೇವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾರಿಗೂ ಹಿಂಜರಿಕೆ ಬೇಡ. ನಾವು ಯಾರಿಗೂ ಮೋಸ ಮಾಡಿಲ್ಲ. ಯಾರ ಆಸ್ತಿ ಕಬಳಿಸಿಲ್ಲ, ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ. ಎಲ್ಲ ಊರಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಜನರನ್ನು ಹೃದಯದಿಂದ ಪ್ರೀತಿಸಿದ್ದೇನೆ. ಹಾಗಾಗಿ ಇಂತಹ ಸೋಲಿನಿಂದ ಎದೆಗುಂದುವುದಿಲ್ಲ. ಪ್ರತಿ ದಿನ ಸಂಘಟನೆಯಲ್ಲಿ ತೊಡಗಿಕೊಳ್ಳೋಣ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ. ಎಲ್ಲರನ್ನೂ ಜೋಡಿಸಿಕೊಂಡು ಹೋಗೋಣ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗೋಣ ಎಂದು ಕರೆ ನೀಡಿದರು.
ಸಿಎಂ ಬದಲಾವಣೆ ಸದ್ಯಕ್ಕಿಲ್ಲ, ಹಾದಿ ಬೀದಿಲಿ ಮಾತಾಡುವುದು ಸರಿಯಲ್ಲ: ಶಾಸಕ ದೇಶಪಾಂಡೆ
ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಸಾಕಷ್ಟು ಅಭಿವೃದ್ಧಿ ಮಾಡಿದರೂ ಜನರು ಯಾವ ಕಾರಣದಿಂದ ಕೈ ಹಿಡಿಯಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಗ್ಯಾರಂಟಿ ಯೋಜನೆಗಳನ್ನು ತಂದರೂ, ಪ್ರತಿ ಊರಿಗೆ ಸಾಕಷ್ಟು ಸಹಾಯ ಮಾಡಿದರೂ ಏಕೆ ಹಿನ್ನಡೆಯಾಯಿತು ಎಂದು ತಿಳಿದುಕೊಳ್ಳಬೇಕಿದೆ. ಇಂತಹ ಶಾಸಕರು, ಇಂತಹ ಸಚಿವರನ್ನು ಎಂದೂ ಕಳೆದುಕೊಳ್ಳಬಾರದು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ನಮ್ಮ ಶಕ್ತಿ ಇಮ್ಮಡಿಯಾಗುತ್ತಿತ್ತು ಎಂದರು.