ಸಿಎಂ ಸಿದ್ದುಗೆ ಉಳಿದಿರೋದು ಗಾಳಿಗೆ, ಸತ್ತವರ ಮೇಲೆ ಟ್ಯಾಕ್ಸ್ ಹಾಕೋದು: ಸಿ.ಟಿ.ರವಿ ಆಕ್ರೋಶ

By Govindaraj S  |  First Published Jul 22, 2024, 4:22 PM IST

ಸಿಎಂ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯಲ್ಲಿ ಜನ ಮತ ಹಾಕಿಲ್ಲ ಅಂತ ಜನರ ಮೇಲೆ ಬೆಲೆ ಏರಿಕೆ ಬರೆ ಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. 


ಬೆಂಗಳೂರು (ಜು.22): ಸಿಎಂ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯಲ್ಲಿ ಜನ ಮತ ಹಾಕಿಲ್ಲ ಅಂತ ಜನರ ಮೇಲೆ ಬೆಲೆ ಏರಿಕೆ ಬರೆ ಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಐದು ಗ್ಯಾರಂಟಿ ಕೊಟ್ಟು ಐವತ್ತು ಕಡೆ ಕಿತ್ತುಕೊಂಡಿದ್ದಾರೆ. ಹಾಲು ಮತ್ತು ಆಲ್ಕೋಹಾಲ್ ಗೂ ದರ ಏರಿಕೆ ಮಾಡಿದ್ದಾರೆ. ಪಹಣಿ, ಬರ್ತ್ ಸರ್ಟಿಫಿಕೇಟ್, ಡೆತ್ ಸರ್ಟಿಫಿಕೇಟ್, ಪೆಟ್ರೋಲ್, ಡೀಸಲ್‌ ದರ ಏರಿಕೆ ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚು ಮಾಡಿದ್ದಾರೆ. ದಿನ ಬೆಳಗಾಗೋದ್ರೊಳಗೆ ವಸ್ತುಗಳ ಎಲ್ಲಾ ಬೆಲೆ ಏರಿಕೆ ಆಗಿದೆ. ಹಣ ದುಬ್ಬರದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.

ಈಗ ಬಸ್ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇನ್ನು ಅವರಿಗೆ ಉಳಿದಿರೋದು ಗಾಳಿಗೆ ಟ್ಯಾಕ್ಸ್ ಹಾಕಬೇಕು, ಸತ್ತವರ ಮೇಲೆ ಟ್ಯಾಕ್ಸ್ ಹಾಕಬೇಕು ಕಾಂಗ್ರೆಸ್ ಸರ್ಕಾರ ಬಂದ‌ ಮೇಲೆ ಭ್ರಷ್ಟಾಚಾರ ಜಾಸ್ತಿಯಾಗಿದೆ. ಹಗರಣ ಮುಚ್ಚಿ ಹಾಕಲು ಶಾಸಕರನ್ನ ಜೊತೆ ನಿಲ್ಲಲು ಒತ್ತಡ ಹಾಕುತ್ತಿದ್ದಾರೆ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸರ್ಪೋಟ್ ಇಲ್ಲದೆ  ಇಷ್ಟು ಅವ್ಯವಹಾರ ನಡೆಯುತ್ತಾ, ಇದಕ್ಕೆಲ್ಲಾ ಸಿಎಂ ನೇರ ಹೊಣೆ ಇದ್ದಾರೆ ಎಂದು ಸಿ.ಟಿ.ರವಿ ಆಕ್ರೋಶವನ್ನು ವ್ಯಕ್ತಪಡಿಸಿದರು.

Tap to resize

Latest Videos

ಚುನಾವಣೆಯಲ್ಲಿ ನಮಗೆ ಸೋಲೇ ಹೊರತು ರಾಷ್ಟ್ರೀಯ ಸಿದ್ಧಾಂತದ ಸೋಲಲ್ಲ: ಸಿ.ಟಿ.ರವಿ

ಪಾರದರ್ಶಕ ಭ್ರಷ್ಟ ಆಡಳಿತ ಜಾರಿಗೊಳಿಸಿದ ಸಿದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಪಾರದರ್ಶಕ ಭ್ರಷ್ಟ ಆಡಳಿತವನ್ನು ಜಾರಿ ಮಾಡಿದ್ದಾರೆ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಅಧಿವೇಶನದ ಕಲಾಪ ಆರಂಭಕ್ಕೂ ಮೊದಲು ಪರಿಷತ್ತಿನ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರವಿ, ಪಾರದರ್ಶಕ ಪ್ರಾಮಾಣಿಕ ಆಡಳಿತ ಅಲ್ಲ. ಪಾರದರ್ಶಕ ಭ್ರಷ್ಟ ಆಡಳಿತ ಇದು. 

ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ. ಆದರೆ, ಆಡಳಿತದಲ್ಲಿ ಪೂರ್ಣ ಇರುವುದು ಭ್ರಷ್ಟಾಚಾರ ಮಾತ್ರ ಎಂದು ವ್ಯಂಗ್ಯವಾಡಿದರು. ನೀವು ಯಾರು ಬೇಕಿದ್ದರೂ ಇದನ್ನು ಪರಿಶೀಲಿಸಬಹುದು. ಇದು ಶೇ.100 ರಷ್ಟು ಪಕ್ಕಾ ಇರುವ ಕಾಂಗ್ರೆಸ್ ರೇಟ್ ಕಾರ್ಡ್‌. ಜಾತಿ ಬಲ ಇದ್ದರೆ ನೀವು ಶೇ.10ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಇಲ್ಲದೇ ಇದ್ದರೆ ಇನ್ನೂ ಶೇ.10ರಷ್ಟು ಜಾಸ್ತಿ ಕೊಡಬೇಕಾಗಿ ಬರಬಹುದು. ಆದರೆ, ಈ ರೇಟ್ ಕಾರ್ಡ್ ಫಿಕ್ಸ್ ಮಾಡಿರುವುದು ಪಕ್ಕಾ ಎಂದರು.

ಸಿಎಂ ಸಿದ್ದರಾಮಯ್ಯ ಜಾತಿ ಗುರಾಣಿ ಬಳಸಿಕೊಳ್ಳಲು ಮುಂದಾಗಿದ್ದಾರೆ: ಸಿ.ಟಿ.ರವಿ ಆಕ್ರೋಶ

ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ರೇಟ್ ಕಾರ್ಡ್ ಅನುಗುಣವಾಗಿ ಎಫ್‍ಎಆರ್ (ಫ್ಲೋರ್ ಏರಿಯ ರೇಷಿಯೋ) ಒಂದು ಚದರಡಿಗೆ 100 ರೂ, ಸಿಎಲ್‍ಯು (ಚೇಂಜ್ ಆಫ್ ಲ್ಯಾಂಡ್ ಯೂಸ್- ಭೂ ಪರಿವರ್ತನೆಗೆ) ಒಂದು ಎಕರೆಗೆ 27 ಲಕ್ಷ ರು. ಫಿಕ್ಸ್ ಆಗಿದೆ. ಗೃಹ ಇಲಾಖೆಯಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್‌ಗೆ 50 ಲಕ್ಷದಿಂದ ಒಂದು ಕೋಟಿ ರು. ಇದ್ದು, ಅದು ಜಾಗದ ಮೇಲೆ ಕಿಮ್ಮತ್ತು ಹೆಚ್ಚು ಕಡಿಮೆ ಆಗುತ್ತದೆ. ಕನಿಷ್ಠ 50 ಲಕ್ಷದಿಂದ ಗರಿಷ್ಠ ಒಂದು ಕೋಟಿ ರು.ಗೂ ಹೆಚ್ಚು ಎಂದು ವಿವರಿಸಿದರು.

click me!