ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ; ಶಾಸಕಾಂಗ ಸಭೆ ಮುಗಿದ ಬೆನ್ನಲ್ಲೇ ಬೆಳವಣಿಗೆ; ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ
ಬೆಂಗಳೂರು[ಜ.18] ರಾಜ್ಯ ರಾಜಕಾರಣ ಮತ್ತೊಮ್ಮೆ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿದ ಬೆನ್ನಲ್ಲೇ, ಕೈ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ.
ಶುಕ್ರವಾರ ಸಂಜೆ ನಡೆದ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿದ್ದ 76 ಶಾಸಕರನ್ನು ದಿಢೀರ್ ಆಗಿ ರೆಸಾರ್ಟ್‌ಗೆ ಸ್ಥಳಾಂತರಿಸುವ ಕಾರ್ಯವನ್ನು ಕಾಂಗ್ರೆಸ್ ಆರಂಭಿಸಿದೆ. ಶಾಸಕರನ್ನು 2 ಬಸ್ಸುಗಳಲ್ಲಿ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ.
ಗೈರಾದ ನಾಲ್ವರ ಶಾಸಕ ಸ್ಥಾನಕ್ಕೆ ಕುತ್ತು! ಕೈ ಮುಂದಿನ ಹೆಜ್ಜೆ ಏನು?
ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಅಂತಿಮವಾಗಿ 4 ಜನ ಶಾಸಕರು ಗೈರಾಗಿದ್ದರು.
ಕಾಂಗ್ರೆಸ್ ಬಳಿ ಇರುವ 80 ಶಾಸಕರ ಲೆಕ್ಕದಲ್ಲಿ ಗೋಕಾಕ್ ಶಾಸಕ, ಶಾಸಕ ಮಹೇಶ್ ಕುಮಟಳ್ಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ ಸಭೆಗೆ ಬಂದಿರಲಿಲ್ಲ. ಉಮೇಶ್ ಜಾಧವ್ ಪತ್ರವೊಂದನ್ನು ಕಳಿಸಿದ್ದರು. ಈಗ ಕಾಂಗ್ರೆಸ್ ಶಾಸಕರನ್ನು ಸಹ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದ್ದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೈಡ್ರಾಮಾ ಶುರುವಾಗಿದೆ. ಡಿಕೆ ಸುರೇಶ್ ಮತ್ತು ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ 2 ಬಸ್‌ಗಳಲ್ಲಿ ಶಾಸಕರನ್ನು ಕರೆದೊಯ್ಯಲಾಗಿದೆ.