ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಬದುಕು ಸಂಕಷ್ಟ: ವೇದವ್ಯಾಸ್‌ ಕಾಮತ್‌

By Kannadaprabha News  |  First Published Aug 7, 2023, 12:30 AM IST

ಕಳೆದ ಎರಡು ತಿಂಗಳ ಅವಧಿಯಲ್ಲಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ಶ್ರೀ ಸಾಮಾನ್ಯನ ಕುರಿತು ಕಾಳಜಿಯಿಲ್ಲದ ಸರ್ಕಾರ ಜನರನ್ನು ಲೂಟಿ ಮಾಡುವುದರಲ್ಲೇ ನಿರತವಾಗಿದೆ: ಶಾಸಕ ವೇದವ್ಯಾಸ್‌ ಕಾಮತ್‌ 


ಮಂಗಳೂರು(ಆ.07):  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ದಿನದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಆರೋಪಿಸಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ಶ್ರೀ ಸಾಮಾನ್ಯನ ಕುರಿತು ಕಾಳಜಿಯಿಲ್ಲದ ಸರ್ಕಾರ ಜನರನ್ನು ಲೂಟಿ ಮಾಡುವುದರಲ್ಲೇ ನಿರತವಾಗಿದೆ ಎಂದಿದ್ದಾರೆ.

ಗೃಹಜ್ಯೋತಿ ಗ್ಯಾರೆಂಟಿ ಘೋಷಿಸಿದ್ದ ರಾಜ್ಯ ಸರ್ಕಾರ ಜನತೆಗೆ ವಿದ್ಯುತ್‌ ದರ ಏರಿಕೆಯ ಬರೆ ಹಾಕಿದೆ. ವಿದ್ಯುತ್‌ ದರದಲ್ಲಿ ಗರಿಷ್ಟ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಸರ್ಕಾರ ಜನರಿಗೆ ಮಂಕುಬೂದಿ ಎರಚಿದೆ. 175 ರು. ಅಕ್ಕಿ ಉಚಿತ ನೀಡುವುದಾಗಿ ಬೆನ್ನು ತಟ್ಟಿಕೊಳ್ಳುವ ಸರ್ಕಾರ ಹಾಲಿನ ದರ 3 ರು. ಹೆಚ್ಚಿಸಿ ಪ್ರತಿ ಮನೆಯಿಂದ ತಿಂಗಳಿಗೆ ಕನಿಷ್ಠ 1 ಸಾವಿರ ರು.ಗೂ ಅಧಿಕ ಮೊತ್ತವನ್ನು ಕೊಳ್ಳೆ ಹೊಡೆಯುತ್ತಿದೆ. ಮೂರು ತಿಂಗಳ ಹಿಂದೆ ಕೆ.ಜಿಗೆ 38-40 ರು.ಗಳಷ್ಟಿದ್ದ ಅಕ್ಕಿ ಬೆಲೆ ಈಗ 50 ರು. ಅಸುಪಾಸಿನಲ್ಲಿದೆ ಎಂದು ಅವರು ಹೇಳಿದ್ದಾರೆ.

Tap to resize

Latest Videos

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು: ನಳಿನ್‌ ಕುಮಾರ್‌ ಕಟೀಲ್‌

ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಹೊಂದಿಸುವುದು ಕಷ್ಟಎಂಬರ್ಥದಲ್ಲಿ ನೀಡಿರುವ ಹೇಳಿಕೆಯು ಇದಕ್ಕೆ ಪೂರಕವಾಗಿದೆ. ಜನಸಾಮಾನ್ಯರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣ ಕಡೆಗಣಿಸಿ ಆಡಳಿತ ನಡೆಸುತ್ತಿದೆ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಕಿಡಿಕಾರಿದ್ದಾರೆ.

click me!