Karnataka Politics: 'ಕಾಂಗ್ರೆಸ್ಸಿಗರು ಉಗ್ರಗಾಮಿ ಸಂತಾನ'

By Kannadaprabha NewsFirst Published Jun 3, 2022, 9:51 AM IST
Highlights

*  ನಾವು ಖಂಡಿತವಾಗಿ ಸಂಘದ ಸಂತಾನವೇ ಆಗಿದ್ದೇವೆ
*  ಪಾಕಿಸ್ತಾನ ಹಾಗೂ ಅಪಘಾನಿಸ್ತಾನ ಪ್ರೀತಿಸುವ ಕೈ ಕಾರ್ಯಕರ್ತರು ಉಗ್ರಗಾಮಿಗಳ ಸಂತಾನವಾಗಿದ್ದಾರೆ 
*  ಮೋದಿ ಸಾಧನೆ ಬಿಜೆಪಿಗೆ ಗೆಲುವಿಗೆ ಶ್ರೀರಕ್ಷೆ
 

ರಬಕವಿ-ಬನಹಟ್ಟಿ(ಜೂ.03): ಪಾಕಿಸ್ತಾನ ಹಾಗೂ ಅಪಘಾನಿಸ್ತಾನವನ್ನು ಪ್ರೀತಿಸುವ ಕಾಂಗ್ರೆಸ್‌ ಕಾರ್ಯಕರ್ತರು ಉಗ್ರಗಾಮಿಗಳ ಸಂತಾನವಾಗಿದ್ದಾರೆ ಎಂದು ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಸಂಘದ ಸಂತಾನ ಎಂದು ಕಾಂಗ್ರೆಸ್‌ ಹೇಳಿದೆ. ಹೌದು, ನಾವು ಖಂಡಿತವಾಗಿ ಸಂಘದ ಸಂತಾನವೇ ಆಗಿದ್ದೇವೆ. ಆದರೆ, ಪಾಕಿಸ್ತಾನ ಹಾಗೂ ಅಪಘಾನಿಸ್ತಾನವನ್ನು ಪ್ರೀತಿಸುವ ಕಾಂಗ್ರೆಸ್‌ ಕಾರ್ಯಕರ್ತರು ಉಗ್ರಗಾಮಿಗಳ ಸಂತಾನವಾಗಿದ್ದಾರೆ ಎಂದು ಟೀಕಿಸಿದ್ದಾರೆ.

Latest Videos

Karnataka Politics: ದೇವೇಗೌಡ ಬಿಟ್ಟ ದಾಳದಿಂದ ಸಿದ್ದು, ಡಿಕೆಶಿ ದಿಢೀರ್‌ ಒಗ್ಗಟ್ಟು!

ಮೋದಿ ಸಾಧನೆ ಬಿಜೆಪಿಗೆ ಗೆಲುವಿಗೆ ಶ್ರೀರಕ್ಷೆ

ಬಾಗಲಕೋಟೆ: ಕಳೆದ 8 ವರ್ಷಗಳ ಕಾಲದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಅಭಿವೃದ್ಧಿ ಪರ ಅಲೆ ಆರಂಭವಾಗಿದ್ದು ಕುಟುಂಬದ ವಂಶಾಡಳಿತ ಹಾಗೂ ಅವಕಾಶವಾದಿ ರಾಜಕಾರಣದಿಂದ ನರಳುತ್ತಿದ್ದ ಭಾರತವನ್ನು ಮುಕ್ತ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ ಬಣ್ಣಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೈಕ್ಷಣಿಕ ರಂಗ, ಆರ್ಥಿಕ ರಂಗ, ಆರೋಗ್ಯ ಕ್ಷೇತ್ರ, ರಕ್ಷಣಾಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರವನ್ನು ಬಲಿಷ್ಠಗೊಳಿಸಿರುವ ಪ್ರಧಾನಿ ಮೋದಿಯವರ ಐತಿಹಾಸಿಕ ನಿರ್ಣಯಗಳು ಇಂದು ಜಗತ್ತಿನ ನೇತಾರರನ್ನಾಗಿ ಮಾಡಿವೆ ಎಂದು ಬಣ್ಣಿಸಿದರು.

ತ್ರಿವಳಿ ತಲಾಕ್‌ ರದ್ದು, 370ನೇ ವಿ​ಧಿ ಹಾಗೂ 35ಎ ವಿಧಿಯೆಡೆಯ ಕಾನೂನು ರದ್ದು, ರಕ್ಷಣಾ ವಿಭಾಗದಲ್ಲಿ ಸಿಡಿಎಸ್‌ ನೇಮಕ, ನೂತನ ಪಾರ್ಲಿಮೆಂಟ್‌ ಸೆಂಟ್ರಲ್‌ ವಿಸ್ಟಾ, ಶತಶತಮಾನಗಳ ಹೋರಾಟದ ನಂತರ ರಾಮಮಂದಿರ ನಿರ್ಮಾಣ, ಕಾಶಿಯನ್ನು ಭವ್ಯಕಾಶಿ ದಿವ್ಯಕಾಶಿ ಮಾಡಿ ಗತವೈಭವದ ಪುನರ್‌ನಿರ್ಮಾಣ ಮಾಡಿರುವುದು ಮೋದಿಯವರ ಕ್ರಾಂತಿಕಾರಕ ಹೆಜ್ಜೆಗಳಾಗಿವೆ ಎಂದು ಹೇಳಿದರು.

ಕೋವಿಡ್‌ ಎಂಬ ಮಹಾಮಾರಿಯ ವಿಪತ್ತನ್ನು ಪರಿವರ್ತಿಸಿ ಆತ್ಮನಿರ್ಭರ ಭಾರತ, ಸ್ವಯಂನಿರ್ಭರ ಭಾರತ, ಸ್ವಾವಲಂಬಿ ಭಾರತ ಮಾಡಿ ತೋರಿಸಿದ ಮಹಾನ್‌ ನಾಯಕ ಮೋದಿಯವರಾಗಿದ್ದು ಜಗತ್ತಿನಲ್ಲಿ ಹೀಗೆಯೂ ಬ್ಯಾಂಕಿಂಗ್‌ ಕೂಡ ಮಾಡಬಹುದು ಎಂದು ಸುಮಾರು 40 ಕೋಟಿ ಹತ್ತಿರ ಬಡಜನರ ಮುಖಾಂತರ ಜನಧನ ಖಾತೆಯನ್ನು ಮಾಡಿಸಿ ತೋರಿಸಿಕೊಟ್ಟ​ಧೀಮಂತ ನಾಯಕ ಅವರಾಗಿದ್ದಾರೆ ಎಂದರು.

ಉಜ್ವಲ್‌ ಯೋಜನೆಯಡಿ ಸುಮಾರು 10 ಕೋಟಿ ಭಾರತೀಯ ಮಹಿಳೆಯರಿಗೆ ಅನುಕೂಲ ಕಲ್ಪಿಸಿದವರು ಮೋದಿ. 100 ಕೋಟಿಗೂ ಹೆಚ್ಚು ಭಾರತೀಯರಿಗೆ ಕೋವಿಡ್‌ ಲಸಿಕೆ ಪೂರೈಸಿದ ಹಿರಿಮೆ ಹೊಂದಿದ್ದೂ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಯನ್ನು ಪೂರೈಸಿದ ಕೀರ್ತಿ ಹೊಂದಿದ್ದಾರೆ ಎಂದರು.

ಉರಿ ಸೇನಾನೆಲೆ ಹಾಗೂ ಪುಲ್ವಾಮಾದಲ್ಲಿ ನಡೆದ ದಾಳಿಗೆ ವಿರುದ್ಧವಾಗಿ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್‌ ಸ್ಟೆ್ರೖಕ್‌, ಏರ್‌ಸ್ಟೆ್ರೖಕ್‌ ಮುಖಾಂತರ ತಕ್ಕ ಉತ್ತರ ನೀಡಿದ ಪ್ರಧಾನಿ ಮೋದಿ ನಿಜಕ್ಕೂ ಜಗಮೆಚ್ಚಿದ ನಾಯಕ ಎಂದು ತಿಳಿಸಿದರು.

ಜಲಜೀವನ ಮಿಷನ್‌ ಯೋಜನೆಯ ಮುಖಾಂತರ ದೇಶದ ಪ್ರತಿಯೊಂದು ಮನೆಮನೆಗೆ ಶುದ್ದ ಕುಡಿಯುವ ನೀರನ್ನು ನಲ್ಲಿ ಮುಖಾಂತರ ಪೂರೈಕೆ ಮಾಡಿರುವುದು, ಪಂಡಿತ್‌ ದೀನದಯಾಳ್‌ ವಿದ್ಯುಚ್ಚಕ್ತಿ ಯೋಜನೆ ಅಡಿ ದೇಶಾದ್ಯಂತ ಪ್ರತಿಯೊಂದು ಮನೆಗೆ ಬೆಳಕು ನೀಡುವ ಯೋಜನೆ, ಜಗತ್ತಿನ ವ್ಯಾಪಾರ ಸೂಚ್ಯಂಕದಲ್ಲಿ 2015ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ ಇಂದು 63ನೇ ಸ್ಥಾನದಲ್ಲಿರುವುದು, ರೈತರ ಕಲ್ಯಾಣಕ್ಕಾಗಿ ಕಿಸಾನ್‌ ಸಮ್ಮಾನ್‌ ಯೋಜನೆ ಇವೆಲ್ಲವುಗಳು ಮೋದಿಜಿ ಸಾಧನೆಗೆ ಸಾಕ್ಷಿಯಾಗಿವೆ ಎಂದರು.

Rajya Sabha Elections: ಕೈ 2ನೇ ಅಭ್ಯರ್ಥಿ ವಾಪಸಿಗೆ ಖರ್ಗೆ ಮೂಲಕ ದೇವೇಗೌಡ ಯತ್ನ

ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ 2014ರಿಂದ 2022ರ ಅವ​ಧಿಯಲ್ಲಿ .1,29,776.74 ಕೋಟಿ ಜಿಎಸ್‌ಟಿ ಪರಿಹಾರವನ್ನು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮೋದಿಯವರು ಪೂರಕವಾಗಿದ್ದಾರೆ ಎಂದು ಹೇಳಿದರು.

ಗೆಲವು ನಿಶ್ಚಿತ:

ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಹನಮಂತ ನಿರಾಣಿ ಹಾಗೂ ಅರುಣ ಶಹಾಪೂರ ಗೆಲುವು ನಿಶ್ಚಿತ ಎಂದ ಸಚಿವ ಗೋವಿಂದ ಕಾರಜೋಳ ಅಭ್ಯರ್ಥಿಗಳ ಚುನಾವಣಾ ಪ್ರಚಾರಾರ್ಥ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಾಂತಗೌಡ ಪಾಟೀಲ, ಮಾಜಿ ವಿಪ ಸದಸ್ಯ ನಾರಾಯಣ ಸಾ ಭಾಂಡಗೆ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

click me!