*ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ
* ವ್ಯಾಕ್ಸಿನ್ ಪಡೆಯದಂತೆ ಅಪಪ್ರಚಾರ ಮಾಡಿದ್ದೇ ಕಾಂಗ್ರೆಸ್ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು
* ಮೋದಿ ಮೊದಲು ವ್ಯಾಕ್ಸಿನ್ ಪಡೆಯಲಿಲ್ಲ ಎಂಂದು ಆರೋಪಿಸಿದ ಕೃಷ್ಣಬೈರೇಗೌಡ
ಬೆಂಗಳೂರು, (ಮೇ.18): ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಪ್ರಧಾನಿಯೇ ಮೊದಲು ವ್ಯಾಕ್ಸಿನ್ ಪಡೆದರು. ಆದರೆ ನಮ್ಮ ದೇಶದಲ್ಲಿ ಪ್ರಧಾನಿ ಆ ಕೆಲಸ ಮೊದಲು ಮಾಡಲಿಲ್ಲ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಗಂಭೀರ ಆರೋಪ ಮಾಡಿದರು.
ವ್ಯಾಕ್ಸಿನ್ ಪಡೆಯದಂತೆ ಅಪಪ್ರಚಾರ ಮಾಡಿದ್ದೇ ಕಾಂಗ್ರೆಸ್ ಎನ್ನುವ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಇಂದು (ಮಂಗಳವಾರ) ಪತ್ರಿಕಾಗೋಷ್ಠಿ ನಡೆಸಿದರು.
undefined
ಈ ವೇಳೆ ಮಾತನಾಡಿದ ಕೃಷ್ಣಬೈರೇಗೌಡ, ವ್ಯಾಕ್ಸಿನ್ ಪಡೆಯದಂತೆ ಅಪಪ್ರಚಾರ ಮಾಡಿದ್ದೇ ಕಾಂಗ್ರೆಸ್ ನಾಯಕರು ಎಂಬ ಬಿಜೆಪಿ ನಾಯಕರ ಆರೋಪ ಹಾಸ್ಯಾಸ್ಪದ ವ್ಯಾಕ್ಸಿನ್ ಹಾಕಿಸಲು ಕಾಂಗ್ರೆಸ್ ನಾಯಕರು ಅಡ್ಡಿಯಾಗಿದ್ದು ಹೇಗೆ..? ಎಂದು ಪ್ರಶ್ನಿಸಿದರು.
'ಡಿಸಿ ಜತೆ ಮೋದಿ ಮಾತು: ಪ್ರಧಾನಿಗೆ ಬಿಜೆಪಿ ನಾಯಕರ ಮೇಲೆ ನಂಬಿಕೆ ಇಲ್ಲ'
ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋದು ಬಿಡಿ. 7ಕೋಟಿ ವ್ಯಾಕ್ಸಿನ್ ರಫ್ತು ಮಾಡಿದ್ದೇವೆ ಅಂತ ಹೇಳಿಕೊಳ್ತಾರೆ. ಫೆಬ್ರುವರಿಯಲ್ಲಿ ಎಷ್ಟು ವ್ಯಾಕ್ಸಿನ್ ಗೆ ಆರ್ಡರ್ ಕೊಟ್ಟಿದ್ರಿ ತೋರಿಸಿ..? ಅವರು ಮೈಮರೆತಿದ್ದಷ್ಟೇ ಅಲ್ಲ, ಜಗತ್ತನ್ನೇ ಗೆದ್ದಿದ್ದೇವೆ ಎಂಬ ಸಂಭ್ರಮದಲ್ಲಿದ್ರಿ.ವ್ಯಾಕ್ಸಿನ್ ಅಭಿಯಾನವನ್ನೇ ಮಾಡಲಿಲ್ಲ. ಸಂಭ್ರಮಾಚರಣೆ ಮಾಡಿದಿರಿ. ಈಗ ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈಗ ಕೈ ನಾಯಕರತ್ತ ಕೈ ತೋರಿಸ್ತಿದ್ದಾರೆ. ಈ ಗುಣ ಬಿಜೆಪಿಯವರಿಗೆ ರಕ್ತಗತವಾಗಿ ಬಂದಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿಯವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆಯೇ ವಿನಃ ಜನರ ಜೀವದ ಬಗ್ಗೆ ಇಲ್ಲ. ಗೋಮೂತ್ರ ಕುಡಿಯಿರಿ, ಸಗಣಿ ಮೈಗೆ ಹಚ್ಕೊಳ್ಳಿ ಅಂತ ಬಿಜೆಪಿ ಸಂಸದರು ಹೇಳ್ತಾರೆ. ವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್‌ಗೆ ಅಪನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.