'ಡಿಸಿ ಜತೆ ಮೋದಿ ಮಾತು: ಪ್ರಧಾನಿಗೆ ಬಿಜೆಪಿ ನಾಯಕರ ಮೇಲೆ ನಂಬಿಕೆ ಇಲ್ಲ'

By Suvarna NewsFirst Published May 18, 2021, 5:24 PM IST
Highlights

* ಜಿಲ್ಲಾಧಿಕಾರಿಗಳ ಜತೆ  ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ 
* ಪ್ರತಿ ಜಿಲ್ಲೆಯ ಡಿಸಿ ಫೀಲ್ಡ್ ಕಮಾಂಡರ್​ನಂತೆ ಕೆಲಸ ಮಾಡಬೇಕು ಎಂದ ಮೋದಿ
*ಇತ್ತ ಬಿಜೆಪಿ ನಾಯಕರುಗಳಿಗೆ ಟಾಂಗ್ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 

ಬೆಂಗಳೂರು, (ಮೇ.18):  ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಕೊರೋನಾ ನಿಯಂತ್ರಣ ಮಾಡಲು ಜಿಲ್ಲಾಧಿಕಾರಿಗಳಿಗೆ ಫುಲ್​ ಪವರ್​ ನೀಡಿದ್ದಾರೆ. ಪ್ರತಿ ಜಿಲ್ಲೆಯ ಡಿಸಿ ಫೀಲ್ಡ್ ಕಮಾಂಡರ್​ನಂತೆ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

"

ಪ್ರಧಾನಿ ಮೋದಿಯ ಈ ಭಾಷಣದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,​ ಪ್ರಧಾನಿ ಮೋದಿಗೆ ಬಿಜೆಪಿ ನಾಯಕರು ಕೊರೋನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗ್ತಾರೆ ಎಂಬ ನಂಬಿಕೆ ಇಲ್ಲ. ಹೀಗಾಗಿಯೇ ಡಿಸಿಗಳ ಜೊತೆ ಸಭೆ ನಡೆಸಿ ಅವರಿಗೆ ಅಧಿಕಾರ ನೀಡಿದ್ದಾರೆ ಎಂದು ಟಾಂಗ್ ಕೊಟ್ಟರು.

ಕೋವಿಡ್ ನಿಯಂತ್ರಣಕ್ಕೆ ಡೀಸಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ಹೀಗೆ

ಅಲ್ಲದೇ ಕೊರೊನಾ ವಿಶೇಷ ಪ್ಯಾಕೇಜ್​ ಸಂಬಂಧವೂ ಮಾತನಾಡಿದ ಅವರು. ಕಳೆದ ವರ್ಷ ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್​ ಇನ್ನೂ ಹಲವರ ಕೈಗೆ ಸಿಕ್ಕಿಲ್ಲ. ನೇಕಾರರು, ಮಡಿವಾಳರು ಸೇರಿದಂತೆ ಹಲವರಿಗೆ ಇನ್ನೂ ಪ್ಯಾಕೇಜ್​​ನ ಅನುದಾನ ಹಂಚಿಕೆಯಾಗಿಲ್ಲ ಎಂದು ಆರೋಪಿಸಿದರು.

ಕೊರೊನಾ ಸೋಂಕು ಇಡೀ ದೇಶವ್ಯಾಪಿಯಾಗಿ ಕಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ನಾನಾ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ರಾಜ್ಯದ 17 ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಕೊರೊನಾ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡಿ. ಸ್ಥಳೀಯವಾಗಿ ಅರ್ಥವಾದರೆ ಅವರಿಗೆ ಧೈರ್ಯ ಬರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ. 
 

click me!