'ಕೈ' ನಾಯಕರು ಬ್ಯಾರಿಕೇಡ್, ಮನೆ ಹಾರಲು ಪ್ರಾಕ್ಟೀಸ್ ಮಾಡ್ತಿದ್ದಾರೆ: ಶಾಸಕ ರಾಜೂಗೌಡ ಲೇವಡಿ

By Girish GoudarFirst Published Jun 17, 2022, 3:31 AM IST
Highlights

*  ಕಾಂಗ್ರೆಸ್‌ನ ನಾಯಕರು ಮಾಧ್ಯಮದ ಮುಂದೆ ಹುಲಿ, ಹಿರೋ ಅಗಲು ಹುಚ್ಚುಚ್ಚು ಮಾಡ್ತಿದ್ದಾರೆ 
*  ಕಾಂಗ್ರೆಸ್‌ನವ್ರಿಗೆ ಮನೆ ಕಂಪೌಂಡ್ ಏರುವ ಚಟ
*  ಘನತೆ ಇರುವ ಸಂಸ್ಥೆಗಳ ಹೆಸರು ಡ್ಯಾಮೇಜ್ ಮಾಡಬೇಡಿ
 

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಜೂ.17): ಕಳೆದ ಮೂರ ದಿನಗಳಿಂದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯನ್ನು ಇಡಿ ವಿಚಾರಣೆ ಮಾಡುತ್ತಿರುವುದು ಈಗ ರಾಜಕೀಯ ಬಡಿದಾಟಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿಯನ್ನು ಇ.ಡಿ ವಿಚಾರಣೆಗೆ ಒಳಪಡಿಸಿರುವುದರಿಂದ ಹಿಂದೆ ರಾಜಕೀಯ ದ್ವೇಷವಿದೆ. ಇಡಿ, ಐಟಿ ಯಂತಹ ಸ್ವತಂತ್ರ ಸಂಸ್ಥೆಗಳಿಂದ ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಕೇಂದ್ರದ ವಿರುದ್ಧ ಶಾಸಕ ರಾಜೂಗೌಡ ಅಬ್ಬರಿಸಿ, ಬೊಬ್ಬರಿಯುತ್ತಿದ್ದಾರೆ. 

'ಕೈ' ನಾಯಕರ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನೆಗೆ ಸುರಪುರ ಶಾಸಕ ರಾಜೂಗೌಡ ಲೇವಡಿ ಮಾಡಿದ್ದಾರೆ. 'ಕೈ' ನಾಯಕರು ಬ್ಯಾರಿಕೇಡ್ ಹಾರುವುದು, ಕಂಪೌಂಡ್ ಹಾರುವುದು ಬೇಡ, ಅದಕ್ಕಾಗಿಯೇ ಕಾಂಗ್ರೆಸ್‌ನ ಎಲ್ಲರೂ ಪ್ರಾಕ್ಟೀಸ್ ಮಾಡ್ತಿದ್ದಾರೆ ಎಂದು ವ್ಯಂಗ ಮಾಡಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು: ಗುರು ಹಿರಿಯರ ಸಮಕ್ಷಮದಲ್ಲಿ ನಡೆದ ಅದ್ದೂರಿ ಮದುವೆ

ಅಧ್ಯಕ್ಷರಂತೆ ಅವರ ಹಿಂಬಾಲಕರು ಮಾಡಲೇಬೇಕು: 

ಪರೋಕ್ಷವಾಗಿ ಡಿಕೆಶಿಗೆ ರಾಜೂಗೌಡ ಡಿಚ್ಚಿ ಕಾಂಗ್ರೇಸ್ ನಾಯಕರು ಇಂದು ದೇಶಾದ್ಯಂತ ಪ್ರತಿಭಟನೆಗೆ ವಿರುದ್ದ ಶಾಸಕ ಆಕ್ರೋಶ ವ್ಯಕ್ತಪಡಿಸಿದರು. ಇದು ಪ್ರತಿಭಟನೆಯೋ? ಬ್ಯಾರಿಕೇಡ್ ಜಂಪಿಂಗ್ ಸ್ಪರ್ಧೆಯೋ..? ಎಂದು ಪ್ರಶ್ನಿಸಿದ ಅವರು, ವಯಸ್ಸಿನವರು, ವಯಸ್ಸಾದವರು ಬ್ಯಾರಿಕೇಡ್ ಹಾರ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ರಾಜೂಗೌಡ, ಅವರ ಅಧ್ಯಕ್ಷರು ವರ್ತಿಸಿದಂತೆ, ಅವರ ಹಿಂಬಾಲಕರು ಮಾಡಲೇಬೇಕು, ಬ್ಯಾರಿಕೇಡ್ ಜಂಪ್ ಮಾಡುವಾಗ ಏನಾದ್ರು ಅನಾಹುತ ಆದ್ರೆ ಅದಕ್ಕೆ ಬಿಜೆಪಿಯವ್ರೆ ಕಾರಣ ಅಂತೀರಿ, ಬ್ಯಾರಿಕೇಡ್ ಹಾರುವ ಪ್ರೊಟೆಸ್ಟ್, ಮಾಡಬೇಡಿ. ಪ್ರತಿಭಟನೆ ಹಿಂಸಾಚಾರ, ಪೋಲಿಸರ ಮೇಲೆ ದಬ್ಬಾಳಿಕೆ ಮಾಡುವ ರೀತಿ ಇರಬಾರದು, ನಾವು ಹಣೆಯ ಮೇಲೆ ಎಂಪಿ, ಎಂಎಲ್ಎ ಅಂತ ಬರೆದುಕೊಂಡಿರ್ತಿವಾ.? ಸುಮ್ನೆ ಹುಚ್ಚರಂತೆ ವರ್ತನೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೇಸ್ ನಾಯಕರ ಪ್ರತಿಭಟನೆ ಆಕ್ರೋಶ ಹೊರಹಾಕಿದರು.
ಕಾಂಗ್ರೇಸ್ ನವ್ರು ಕೋವಿಡ್ ನ್ನೆ ಸುಳ್ಳು ಮಾಡ್ತಾರೆ

ದೇಶದಲ್ಲಿ ಕೋವಿಡ್ ಮಾಹಾಮಾರಿ ನಿಧಾನಗತಿಯಲ್ಲಿ ಏರುಗತಿಯಲ್ಲಿ ಸಾಗ್ತಾ ಇದೆ, ಇದನ್ನು ಕಟ್ಟಿ ಹಾಕಲು ಆಯಾ ಆಯಾ ರಾಜ್ಯಗಳು ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿವೆ, ಈ ವಿಚಾರವಾಗಿ ಆರೋಗ್ಯ ಸಚಿವ ಕೆ.ಸುಧಾಕರ್ ಇವತ್ತು ಪ್ರತಿಕ್ರಿಯಿಸಿದ್ದು, ಕೋವಿಡ್ ಹೆಚ್ಚಾದ್ರೆ ಅದಕ್ಕೆ ಕಾಂಗ್ರೇಸ್ ನವ್ರೇ ಹೊಣೆ, ಪ್ರತಿಭಟನೆ ಮಾಡೋದಿದ್ರೆ ಪ್ರೀಡಂ ಪಾರ್ಕ್ ನಲ್ಲಿ ಮಾಡಿ ಎಂದು ಹೇಳಿದರು, ಈ ಹೇಳಿಕೆ ವಿಪಕ್ಷ ನಾಯಕ ಸಿದ್ದರಾಮಯ್ಯರ ಸಿಟ್ಟು ನೆತ್ತಗೇರುವಂತೆ ಮಾಡಿತ್ತು. ಸಚಿವ ಕೆ.ಸುಧಾಕರ್ ಅವರ ಹೇಳಿಕೆಯನ್ನು ಶಾಸಕ ರಾಜೂಗೌಡ ಸಮರ್ಥಿಸಿಕೊಂಡರು. ಕೋವಿಡ್ ಪೀಕ್ ನಲ್ಲಿರುವಾಗಲೇ ಕಾಂಗ್ರೇಸ್ ನವ್ರು ಯಾರ ಮಾತು ಕೇಳಲಿಲ್ಲ, ಈಗ ಕಡಿಮೆ ಇದ್ದಾಗ ಕೇಳ್ತಾರ ಎಂದರು. ಅವರಿಗೆ ಕೋವಿಡ್ ಬಗ್ಗೆ ಹೇಳಬಾರದು, ಸುಧಾಕರ್ ಅವ್ರೆ ಕಾಂಗ್ರೇಸ್ ನವ್ರು ಪ್ರತಿಭಟನೆ ಮಾಡುವಾಗ ಏನು ಮಾತಾಡಬೇಡಿ, ಸಲಹೆ ನೀಡ್ಬೇಡಿ. ನೀವು ಏನೇ ಸಲಹೆ ನೀಡಿದ್ರು ಅದು ಬೇರೆ ತರ ಅರ್ಥ ಮಾಡಿಕೊಳ್ತಾರೆ. ಸುಧಾಕರ್ ಮೇಲೆ ಕಾಂಗ್ರೇಸ್ ನವ್ರಿಗೆ  ಬಹಳ ಪ್ರೀತಿ, ಸುಧಾಕರ್ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆದನ್ನು ಹೇಳಿದ್ದಾರೆ, ಕಾಂಗ್ರೇಸ್ ನವ್ರು ಕೋವಿಡ್ ನ್ನೆ ಸುಳ್ಳು ಮಾಡಲು ಹೊತಡುತ್ತಾರೆ ಎಂದು ಕೈ ನಾಯಕರ ವಿರುದ್ಧ ಶಾಸಕ ರಾಜೂಗೌಡ ತೀವ್ರ ವಾಗ್ದಾಳಿ ನಡೆಸಿದರು.

Yadgir; ಕಾರ ಹುಣ್ಣಿಮೆ ಸಡಗರವೋ ಸಡಗರ!

ಘನತೆ ಇರುವ ಸಂಸ್ಥೆಗಳ ಹೆಸರು ಡ್ಯಾಮೇಜ್ ಮಾಡಬೇಡಿ

ಬಿಜೆಪಿಯವ್ರು ಇ.ಡಿ ಯನ್ನು ದುರ್ಬಳಕೆ ಮಾಡಿಕೋಳ್ತಿದ್ದಾರೆ ಎಂಬ ಕಾಂಗ್ರೇಸ್ ನಾಯಕರ ಆರೋಪವನ್ನು ತಳ್ಳಿ ಹಾಕಿದ ಶಾಸಕ ರಾಜೂಗೌಡ, ಘನತೆ ಇರುವ ಸಂಸ್ಥೆಗಳ ಹೆಸರು ಡ್ಯಾಮೇಜ್ ಮಾಡ್ಬೇಡಿ, ಇ.ಡಿ, ಸಿಬಿಐ ನಂತಹ ಸಂಸ್ಥೆಗಳು ಸ್ವಂತತ್ರವಾಗಿ ಕಾರ್ಯನಿರ್ವಹಿಸುತ್ತವೆ, ಇವುಗಳನ್ನು ಬಳಕೆ-ದುರ್ಬಳಕೆ ಮಾಡಿಕೊಳ್ಲಲು ಬರುವುದಿಲ್ಲ. ಅವರಿಗೆ ಹೋಗಿ ಈ ರೀತಿ ಮಾಡಿ ಅಂತ ಹೇಳಕಾಗಲ್ಲ, ಇವತ್ತು ನಾವು ಅಧಿಕಾರದಲ್ಲಿದ್ದೀವಿ, ನಾಳೆ ನೀವು ಬರಬಹುದು ಅವಾಗ ಏನು ಹೇಳ್ತಿರಿ ಎಂದು ಪ್ರಶ್ನಿಸಿದರು. ಕಾಂಗ್ರೇಸ್ ನ ಕೆಲವರು ತಮ್ಮ ನಾಯಕರನ್ನು ಮೆಚ್ಚಿಸಲು, ಟಿಕೆಟ್ ಆಸೆಗಾಗಿ ಹುಚ್ಚುಚ್ಚು ಮಾಡುವುದು ಸರಿಯಲ್ಲ. ಕಾಂಗ್ರೇಸ್ ನವ್ರಿಗೆ ಅವರ ಅವರ ನಾಯಕರ ಬಗ್ಗೆ ಪ್ರೀತಿ ಇರಲಿ, ಅದೇ ರೀತ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆಯೂ ತಿಳಿದುಕೊಳ್ಳಲಿ, ಸಂವಿಧಾನಕ್ಕಿಂತ ಯಾರು ದೊಡ್ಡವರಲ್ಲ, ನಮ್ಮ ರಾಜಕೀಯ ತೇವಲಿಗಾಗಿ ಸಂಸ್ಥೆಗಳ ಹೆಸರು ಕೆಡಿಸುವುದು ಶೋಭೆ ತರಲ್ಲ, ನಿಮ್ಮ ನಾಯಕ ನಿರಪರಾಧಿ ಇದ್ರೆ ಹೊರ ಬರ್ತಾರೆ ಎಂದರು.

ಕಾಂಗ್ರೆಸ್‌ನವ್ರಿಗೆ ಮನೆ ಕಂಪೌಂಡ್ ಏರುವ ಚಟ: ರಾಜೂಗೌಡ ವ್ಯಂಗ್ಯ

ದೇಶದ ನಾನಾ ಕಡೆಗಳಲ್ಲಿ ಕಾಂಗ್ರೇಸ್ ಪ್ರತಿಭಟನೆ ಮಾಡುತ್ತಿದ್ದು, ಪ್ರತಿಭಟನೆ ಹಿಂಸಾಚಾರ ಸ್ವರೂಪ ನಡೆಯುತ್ತಿದೆ, ಪೋಲಿಸರ ಮೇಲೆ ಕೆಲ ಕಾಂಗ್ರೇಸ್ ನಾಯಕರು ಹಲ್ಲೆ ಮಾಡಿದನ್ನು ಶಾಸಕ ರಾಜೂಗೌಡ ಖಂಡಿಸಿದರು. ಪ್ರತಿಭಟನೆ ಮಾಡುವಾಗ ಪೋಲಿಸರ ಮೇಲೆ ಹಲ್ಲೆ ಮಾಡಿದ್ದಾರೆ, ಪ್ರತಿಭಟನೆ ಗಲಭೆಯಾದಾಗ ಪೋಲಿಸರು ಆಗ ಅವರ ಕೆಲಸ ಮಾಡಬೇಕಾಗುತ್ತದೆ. ಪ್ರತಿಭಟನೆ ಮಾಡುವಾಗ ಬ್ಯಾರಿಕೇಡ್ ಕೆಡುವುದು, ಈಗ ಕಾಂಗ್ರೆಸ್‌ ನವ್ರು ಹೊಸ ಚಟ ಕಲಿತಿದ್ದಾರೆ, ಎಲ್ಲರೂ ಬ್ಯಾರಿಕೇಡ್ ಮೇಲೆ ನಿಲ್ತಿದ್ದಾರೆ. ಇವರಿಗೆ ಮನೆ ಕಂಪೌಂಡ್ ಹಾರುವ ಚಟ ಆಗಿದೇನಾ? ಬ್ಯಾರಿಕೇಡ್ ಏರಿ ಕೈ, ಕಾಲು ಮುರ್ಕೊಂಡ್ರೆ ಪೋಲಿಸರು ಹಲ್ಲೆ ಮಾಡಿದ್ದಾರೆ ಅಂತಾರೆ, ಕಾಂಗ್ರೆಸ್‌ನ ನಾಯಕರು ಮಾಧ್ಯಮದ ಮುಂದೆ ಹುಲಿ, ಹಿರೋ ಅಗಲು ಹುಚ್ಚುಚ್ಚು ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.
 

click me!