ಕಾರುಗಳ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ರಾಜೂಗೌಡ ಭಾವಚಿತ್ರ ಅಂಟಿಸಿದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಯಾದಗಿರಿ (ಜು.29): ಕಾರುಗಳ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ರಾಜೂಗೌಡ ಭಾವಚಿತ್ರ ಅಂಟಿಸಿದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಹೌದು! ಆ.3 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹೋಗುವ ಅಭಿಮಾನಿಗಳಿಂದ ಕಾರಿನ ಮೇಲೆ ರಾಜೂಗೌಡ ಫೋಟೋ ಬಳಕೆ ಮಾಡಲಾಗಿದೆ. ಕಾರಿನ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ರಾಜೂಗೌಡ ಬ್ಯಾನರ್‌ನ್ನು ಅಭಿಮಾನಿ ಅಂಟಿಸಿದ್ದು, ಕಾಂಗ್ರೆಸ್‌ನ ಸಿದ್ದರಾಮಯ್ಯರ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ರಾಜೂಗೌಡ ಪೋಟೋವನ್ನು ಸುರಪುರದ ಅಭಿಮಾನಿಗಳು ಬಳಕೆ ಮಾಡಿದ್ದಾರೆ.
ಈ ವಿಚಾರವಾಗಿ ಬಿಜೆಪಿ ಶಾಸಕ ರಾಜೂಗೌಡ, ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗುವವರು ನನ್ನ ಪೊಟೋ ಬಳಸಬೇಡಿ. ಪಕ್ಷಕ್ಕೂ ಹಾಗೂ ನನಗೆ ಮುಜುಗರವಾಗುತ್ತದೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಯಾರಾದರೂ ಹೋಗಿ ಅದಕ್ಕೆ ಅಭ್ಯಂತರವಿಲ್ಲ. ನಾನು ಕೂಡ ಸಿದ್ದರಾಮಯ್ಯ ನವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತೇನೆ. ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷದಡೀ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು, ಕಾಂಗ್ರೇಸ್ ಕಾರ್ಯಕ್ರಮಕ್ಕೆ ನಮ್ಮ ಫೋಟೋ ಬಳಸುವುದರಿಂದ ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ. ಬಿಜೆಪಿ ಪಕ್ಷ ನನಗೆ ತಾಯಿ ಇದ್ದಂತೆ. ಪಕ್ಷ ನನ್ನನ್ನು ಮಂತ್ರಿ, ನಿಗಮ-ಮಂಡಳಿ ಅಧ್ಯಕ್ಷ ಹಾಗೂ ಹಲವಾರು ಅವಕಾಶ ಕೊಟ್ಟಿದೆ. ದಯವಿಟ್ಟು ಅಭಿಮಾನಿಗಳು ಕಾಂಗ್ರೆಸ್ ಪಕ್ಷದಡೀ ನಡೆಯುವ ಕಾರ್ಯಕ್ರಮದಲ್ಲಿ ನನ್ನ ಫೋಟೋ ಬಳಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
undefined
ಸಿದ್ದರಾಮೋತ್ಸವದ ಬದಲು ಕಾಂಗ್ರೆಸ್ ಪಕ್ಷದ ಉತ್ಸವ ಆಗಬೇಕಿತ್ತು: ವಿಶ್ವನಾಥ್
ಸಿದ್ದರಾಮೋತ್ಸವಕ್ಕೆ ಲಕ್ಷ ಕುರಿಗಾಹಿಗಳು: ದಾವಣಗೆರೆಯಲ್ಲಿ ಆ. 3ರಂದು ನಡೆಯಲಿರುವ ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ರಾಜ್ಯದ ಒಂದು ಲಕ್ಷ ಕುರಿಗಾರರು ದಾವಣಗೆರೆ ಚಲೋ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಕುರಿಗಾರರ ಶ್ರೇಯೋಭಿವೃದ್ಧಿಗೆ ಹೆಚ್ಚೆಚ್ಚು ಅನುದಾನ ನೀಡಿ ಶ್ರಮಿಸಿದ್ದಾರೆ. ಕುರಿಗಳು ಸತ್ತರೆ 5 ಸಾವಿರ ಪರಿಹಾರ ನೀಡಿದ್ದಾರೆ. ದೇಶದ ಯಾವ ರಾಜ್ಯದಲ್ಲೂ ಇಂತಹ ಯೋಜನೆ ಜಾರಿಯಲ್ಲಿಲ್ಲ. ಈ ಯೋಜನೆಯು ಈಗಲೂ ಸಹ ಮುಂದುವರಿಯುತ್ತಿದೆ. ಇದರಿಂದ ಲಕ್ಷಾಂತರ ಕುರಿಗಾರರ ಬದುಕು ಆಸರೆಯಾಗಿದೆ.
ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮೋತ್ಸವ: ಸಚಿವ ಹಾಲಪ್ಪ ಆಚಾರ್
ಅವರ ಅಧಿಕಾರವಧಿಯಲ್ಲಿ ಕುರಿಗಾರರ ಮಹಾ ಮಂಡಳ ಸ್ಥಾಪನೆ ಮಾಡಿದೆ. ಅದಕ್ಕೆ ಅನುದಾನವನ್ನೂ ಕೊಟ್ಟಿದ್ದಾರೆ. ರಾಜ್ಯದಲ್ಲಿ ನೂರಾರು ಕುರಿ ಸಾಕಾಣಿಕೆ ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಕುರಿ ನಿಗಮ ಸ್ಥಾಪನೆಯಾಗಿವೆ. ಅವುಗಳ ಮೂಲಕ ಕುರಿಗಾರರಿಗೆ ಸೌಲಭ್ಯಗಳು ದೊರೆಯುತ್ತಿವೆ ಎಂದರು. ದಾವಣಗೆರೆಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕುರಿಗಾರ ಮಹಾ ಮಂಡಳಿಯ 1 ಲಕ್ಷ ಸದಸ್ಯರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ. ಕೊಪ್ಪಳ ಜಿಲ್ಲೆಯಿಂದ 3- 4 ಸಾವಿರ ಜನ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಕ್ಷೇತ್ರದಿಂದ ವಾಹನಗಳ ಮೂಲಕ ತೆರಳುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರಿಯಣ್ಣ ಸಂಗಟಿ, ಹನುಮಂತಪ್ಪ, ಹನುಮೇಶ ಸೇರಿ ಇತರರಿದ್ದರು.