ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ರೇಣುಕಾಚಾರ್ಯ, ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ

Published : Apr 26, 2022, 07:08 PM IST
ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ರೇಣುಕಾಚಾರ್ಯ,  ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ

ಸಾರಾಂಶ

* ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಶಾಸಕ ರೇಣುಕಾಚಾರ್ಯ * ವೋಟು ಬ್ಯಾಂಕ್ , ಡ್ಯಾಮೇಜ್ ಕಂಟ್ರೋಲ್ ಗೆ ರೇಣುಕಾಚಾರ್ಯ ಕಸರತ್ತು  * ಬೇಡ ಜಂಗಮ ಮೀಸಲಾತಿ ಪ್ರಮಾಣ ಪತ್ರದ ಡ್ಯಾಮೇಜ್ ಕಂಟ್ರೋಲ್ ಮುಂದಾದ ರೇಣುಕಾಚಾರ್ಯ

ವರದಿ - ವರದರಾಜ್ 

ದಾವಣಗೆರೆ (ಏ.26) : ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯರಿಗೆ   ಬೇಡ ಜಂಗಮ ಮೀಸಲಾತಿ ಪ್ರಮಾಣ ಪತ್ರ  ಪಡೆದ ವಿಚಾರ ಬಿಸಿ ತುಪ್ಪವಾಗಿ ಪರಿಣಮಿಸಿತ್ತು..  ತೀವ್ರ ಇರಿಸುಮುರಿಸು ಅನುಭವಿಸಿದ ರೇಣುಕಾಚಾರ್ಯ ಇದೀಗ ಹೊನ್ನಾಳಿ ಕ್ಷೇತ್ರದಲ್ಲಿ ಎಸ್ಟಿ ಎಸ್ಟಿಗಳ ಓಲೈಕೆಗೆ ಮುಂದಾಗಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಹೊನ್ನಾಳಿ ಪಟ್ಟಣದಲ್ಲಿ ದಲಿತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ ನಂತರ ರೇಣುಕಾಚಾರ್ಯ  ದಲಿತ ಕೇರಿಗಳಲ್ಲಿ ಈ ಬಾರಿ ಆಚರಿಸಿದ ಅಂಬೇಡ್ಕರ್ ಜಯಂತಿಗಳಲ್ಲಿ ಖುದ್ದು ಹಾಜರಿದ್ದು,  ಬೇಡ ಜಂಗಮ ಮೀಸಲಾತಿ ಪ್ರಮಾಣ ಪತ್ರ ಪಡೆದಿದ್ದು ನಿಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುವುದಕ್ಕಲ್ಲ ಎಂದು ಪರಿಪರಿಯಾಗಿ ಮನವಿ ಮಾಡುತ್ತಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮ ಬೀರದಂತೆ ಎಚ್ಚರವಹಿಸುತ್ತಿರುವ ರೇಣುಕಾಚಾರ್ಯ ಎಸ್ಸಿ ಎಸ್ಟಿ ಕಾಲೋನಿಗಳಲ್ಲಿ ತಮ್ಮದೇನು ತಪ್ಪಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.  ಎಲ್ಲಾ ಜನಾಂಗವನ್ನು ಒಪ್ಪಿ , ಅಪ್ಪಿಕೊಳ್ಳುವ  ಗುಣ ನನ್ನದು.. ನಾನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಸೇವಕ.. ನಾನು ನಕಲಿ‌ ಜಾತಿ ಪ್ರಮಾಣ ಪತ್ರ ಪಡೆದಿಲ್ಲಾ. ಅದನ್ನು ಅಧಿವೇಶನದಲ್ಲೂ ಹೇಳಿದ್ದೇನೆ ಎಂದಿದ್ದಾರೆ.

ರೇಣುಕಾಚಾರ್ಯ ಸಹೋದರನಿಗೆ ಘೇರಾವ್.. ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡ್ರಾ?

ನನ್ನ ಮಗಳಿಗೆ ನನ್ನ ಸಹೋದರ ಕೊಡಿಸಿದ್ದು, ನಾನು ಅದನ್ನು ವಾಪಸ್ಸು ಕೊಡಲು ಹೇಳಿದ್ದೇನೆ. ವಿನಾಃ ಕಾರಣ ಮಾಜಿ ಶಾಸಕರು ಕೆಲವರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿದ್ದಾರೆ. ಇದು ಮಾಜಿ ಶಾಸಕರ ಕೃಪಾ ಪೋಷಿತ ಪ್ರತಿಭಟನೆ‌. ಪ್ರತಿ  ಚುನಾವಣೆ ಬಂದಾಗ ನನ್ನ ವಿರುದ್ದ ಅಪಪ್ರಚಾರ ಮಾಡುತ್ತಾರೆ. ಇದಕ್ಕೆ ಸೊಪ್ಪು ಹಾಕುವ ಮನುಷ್ಯನಾನಲ್ಲಾ  ಕಾಂಗ್ರೇಸ್ ನವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದಾರೆ‌ ಭಾಷಣ ಬಿಗಿಯುತ್ತಿದ್ದಾರೆ. 

ಎಲೆಕ್ಷನ್ ಗೆ ವೇದಿಕೆ ಸಜ್ಜುಗೊಳಿಸುತ್ತಿರುವ  ರೇಣುಕಾಚಾರ್ಯ
ಹೊನ್ನಾಳಿ ನ್ಯಾಮತಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಒಂದೊಂದು ನಿಮಿಷಗಳನ್ನು ಬಂಗಾರದಂತೆ ಸದುಪಯೋಗಪಡಿಸಿಕೊಳ್ಳುತ್ತಿರುವ ರೇಣುಕಾಚಾರ್ಯ ಮಹಿಳೆಯರು ಮಕ್ಕಳು   ಯುವಕರು ವೃದ್ಧರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಾಗುತ್ತಿದ್ದಾರೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಸಂಜೀವಿನಿ ಹಾಗೂ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಾಯಧನ ಹಾಗೂ ಸುತ್ತು ನಿಧಿ ಚೆಕ್ ವಿತರಿಸುತ್ತಿರುವ ರೇಣುಕಾಚಾರ್ಯ ಮಹಿಳಾ ಮತಗಳನ್ನು ಒಂದೆಡೆ ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. 

  64 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಕಿರು ಉದ್ಯಮ ಪ್ರಾರಂಭಿಸಲು ತಲಾ 1ಲಕ್ಷ ರೂಪಾಯಿಗಳು ಹಾಗೂ 95 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ತಲಾ 15 ಸಾವಿರ ರೂಪಾಯಿಗಳ ಸುತ್ತು ನಿಧಿ ಪ್ರೋತ್ಸಾಹಧನ ಚೆಕ್ ಗಳನ್ನು ವಿತರಿಸಿದ ರೇಣುಕಾಚಾರ್ಯ ನೂರಾರು ಮಹಿಳೆಯರ ಜೊತೆ ಸೆಲ್ಪಿ ತೆಗೆಸಿಕೊಂಡು ಸೆಲ್ಪಿ ಸ್ಟಾರ್ ಆಗಿದ್ದಾರೆ.  ಹಬ್ಬ ಜಾತ್ರೆ, ಮದುವೆ, ನಾಮಕರಣಗದಂತಹ ಶುಭ ಸಮಾರಂಭವಲ್ಲದೇ ಸಾವಿನ ಮನೆಗಳಲ್ಲು  ಕಾಣಿಸಿಕೊಳ್ಳುತ್ತಿರುವ ರೇಣುಕಾಚಾರ್ಯ  ಹಣಕಾಸು ಸೇರಿದಂತೆ ಕೂತಲ್ಲೇ ಸಮಸ್ಯೆ ಪರಿಹರಿಸಿ ಜನರ ಮನಸು ಗೆಲ್ಲಲು ಅವಿರತ ಯತ್ನ ನಡೆಸಿದ್ದಾರೆ.  ಹಳ್ಳಿ ಹಳ್ಳಿಗೆ  ಅಧಿಕಾರಿಗಳ ಪಡೆಯನ್ನು ಕಟ್ಟಿಕೊಂಡು ನಿಮ್ಮ ಸೇವಕ ನಾನು ಎಂದು ಪುಂಕಾನುಪುಂಕವಾಗಿ ಭಾಷಣ ಬಿಗಿಯುತ್ತಿದ್ದಾರೆ.   

ರೇಣುಕಾರ್ಯರಿಂದ ಖಡಕ್ ರಿಯಾಕ್ಷನ್ 
ರೇಣುಕಾಚಾರ್ಯ ಇದೀಗ  ಹೋದಲ್ಲಿ ಬಂದಲ್ಲಿ  ರಾಜ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಟ್ವೀಟ್ , ವಿಡಿಯೋ ವಾರ್ ಮಾಡುತ್ತಿರುವ ರೇಣುಕಾಚಾರ್ಯ  ರಾಜ್ಯ ಮತ್ತು ಕೇಂದ್ರ ಬಿಜೆಪಿ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಪ್ರತಿದಿನ ರಾಜ್ಯದ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿಕೆಶಿ  ಜೆಡಿಎಸ್ ಮುಖಂಡರಾದ ಹೆಚ್ ಡಿಕೆ ಬಗ್ಗೆ ಒಂದಿಲ್ಲೊಂದು ಸ್ಟೇಟ್ಮೆಂಟ್ ಕೊಡುತ್ತಾ ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂದುವರಿದು ಧರ್ಮ ದಂಗಲ್ ನಲ್ಲಿ  ನಡೆಯುತ್ತಿರುವ  ದಿನಕ್ಕೊಂದು ಬೆಳವಣಿಗೆಗಳನ್ನು ಸಮರ್ಥಿಸಿಕೊಳ್ಳುತ್ತಾ   ಇಸ್ಲಾಂ ಧರ್ಮ,  ಮೌಲ್ವಿಗಳು, ಮದರಸಗಳ ಬಗ್ಗೆ ಕಿಡಿಕಾರುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ