ಬಿಎಸ್‌ವೈ ಔತಣಕೂಟಕ್ಕೆ ಗೈರು: ಸ್ಪಷ್ಟ ಕಾರಣ ಕೊಟ್ಟ ಸಿ.ಟಿ.ರವಿ...!

By Suvarna NewsFirst Published Feb 3, 2021, 3:27 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕರೆದಿದ್ದ ಔತಣಕೂಟಕ್ಕೆ ಸಿಟಿ ರವಿ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇದಕ್ಕೆ ಸಿಟಿ ರವಿ ಅವರು ಕಾರಣ ನೀಡಿದ್ದಾರೆ.

ಬೆಂಗಳೂರು, (ಫೆ.03): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳವಾರ ರಾತ್ರಿ ಕರೆದ ಔತಣಕೂಟಕ್ಕೆ ಸುಮಾರು 28 ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದಾರೆ. ಈ ಮೂಲಕ ಸಿಎಂ ಬಿಎಸ್ ವೈಗೆ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

ಸಂಪುಟ ಪುನಾರಚನೆ ಬಳಿಕ ಅಸಮಾಧಾಗೊಂಡಿರುವ ಶಾಸಕರನ್ನು ಸಮಾಧಾನ ಮಾಡುವ ಉದ್ದೇಶದಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಮಂಗಳವಾರ ರಾತ್ರಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಔತಣಕೂಟ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ, ಸಚಿವರಿಗೆ ಆಹ್ವಾನ ಕೊಟ್ಟಿದ್ದರು. ಆದರೆ ಸಚಿವ ಸ್ಥಾನ ಅಸಮಾಧಾನಗೊಂಡಿದ್ದ ಕೆಲ ಶಾಸಕರುಗಳು ಈ ಔತಣಕೂಟ ಪಾಲ್ಗೊಂಡಿಲ್ಲ.  

ಸ್ವಪಕ್ಷೀಯ ಶಾಸಕರಿಗೆ ಸಿಎಂ ಬಿಎಸ್‌ವೈ ಔತಣ : ಗೈರಾದರು ಆ 20 ಮಂದಿ

ಸ್ಪಷ್ಟನೆ ಕೊಟ್ಟ ಸಿಟಿ ರವಿ
ಇನ್ನು ಔತಣಕೂಟಕ್ಕೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಗೈರಾಗಿರುವುದಕ್ಕೆ ಪ್ರತಿಕ್ರಿಯಿಸಿದ್ದು, ಅನ್ಯ ಕೆಲಸದ ನಿಮಿತ್ತ ಬೇರೆಡೆ ಹೋಗಬೇಕಾಗಿದ್ದರಿಂದ ಔತಣಕೂಟಕ್ಕೆ ಭಾಗಿಯಾಗಲು ಸಾಧ್ಯವಾಗುವುದಿಲ್ಲ ಎಂದು ಸಿಎಂಗೆ ತಿಳಿಸಿ ಹೋಗಿದ್ದೆ. ಔತಣಕೂಟಕ್ಕೆ ಗೈರಾಗಿದ್ದಕ್ಕೆ ಅನ್ಯ ಕಾರಣ ಹುಡುಕಬೇಕಾಗಿಲ್ಲ. ನನ್ನ ಹಾಗೂ ಸಿಎಂ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.

ಗೈರಾದ ಶಾಸಕರು
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಎಚ್. ನಾಗೇಶ್, ಡಿ.ಎಸ್. ಸುರೇಶ್, ಎಸ್.ಎ.ರಾಮದಾಸ್, ಪೂರ್ಣಿಮಾ ಶ್ರೀನಿವಾಸ್, ಮಹಾಂತೇಶ್ ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ಕಳಕಪ್ಪ ಬಂಡಿ, ದಿನಕರ್ ಶೆಟ್ಟಿ, ಸುನೀಲ್ ನಾಯ್ಕ್, ಸಿ.ಎಂ. ಉದಾಸಿ, ಅರುಣ್ ಕುಮಾರ್, ಆನಂದ್ ಸಿಂಗ್, ಸೋಮೇಶರ್ ರೆಡ್ಡಿ, ತಿಪ್ಪಾರೆಡ್ಡಿ, ಕರುಣಾಕರರೆಡ್ಡಿ, ಗೂಳಿಹಟ್ಟಿ ಶೇಖರ್, ಸತೀಶ್ ರೆಡ್ಡಿ ಸೇರಿದಂತೆ 28 ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದರು ಎಂದು ತಿಳಿದುಬಂದಿದೆ.

click me!