ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ: ದೇವೇಗೌಡ್ರಿಗೆ ಸಲಹೆ ಕೊಟ್ಟ ಕಾಂಗ್ರೆಸ್ ಹಿರಿಯ ನಾಯಕ

By Suvarna NewsFirst Published Feb 3, 2021, 2:22 PM IST
Highlights

ವಿಧಾನಪರಿಷತ್ ಸಭಾಪತಿ ಹುದ್ದೆಗೆ ಬಿಜೆಪಿ ಜೊತೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಳ್ಳುವುದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ್ರಿಗೆ ಕಾಂಗ್ರೆಸ್ ಹಿರಿಯ ನಾಯಕ ಸಲಹೆ ಕೊಟ್ಟಿದ್ದಾರೆ.

ಬೆಂಗಳೂರು, (ಫೆ.03): ಮೊದಲಿನಿಂದಲೂ ಜಾತ್ಯತೀತ ನಿಲುವಿನಲ್ಲಿ ನಂಬಿಕೆಯಿಟ್ಟಿರುವ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಸಭಾಪತಿ ಸ್ಥಾನ ಹೊಂದಾಣಿಕೆಗೆ ಬಿಜೆಪಿ ಜೊತೆ ಹೋಗದಿರುವುದೇ ಸೂಕ್ತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಮೊನ್ನೆಯಷ್ಟೇ ಉಪಸಭಾಪತಿ ಚುನಾವಣೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದ್ದಾರೆ. ಈ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಆಗಲಿದೆ ಎಂದರು.

ಬಿಜೆಪಿ ಜೊತೆ ಜೆಡಿಎಸ್ ಹೋಗುತ್ತಿರುವುದಕ್ಕೆ ಕೊನೆಗೂ ಕಾರಣ ಬಿಚ್ಚಿಟ್ಟ ಕುಮಾರಣ್ಣ

ಮೊದಲಿನಿಂದಲೂ ದೇವೇಗೌಡರು ಜಾತ್ಯತೀತ ನಿಲುವಿನಲ್ಲಿ ನಂಬಿಕೆ ಇಟ್ಟವರು. ಸಭಾಪತಿ ಸ್ಥಾನ ಹೊಂದಾಣಿಕೆಗೆ ಅವರು ಬಿಜೆಪಿ ಜೊತೆ ಹೋಗದಿರುವುದು ಸೂಕ್ತ ಎಂದು ಹೇಳದರು.

 ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕೆಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ರೈತರು ಅನ್ನ ದಾತರು, ದೇಶದ ಬೆನ್ನೆಲುಬು ಎಂದು ಹೇಳುವ ಬಿಜೆಪಿಯವರ ಹೇಳಿಕೆಯಲ್ಲೊಂದು ಮನಸಿನಲ್ಲೊಂದು ಇಟ್ಟುಕೊಂಡಿರುತ್ತಾರೆ. ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. 

ಕಾರ್ಯಕರ್ತರ ಹೆಸರಲ್ಲಿ ಬಿಜೆಪಿಯವರು ವೇಷ ಮರೆಸಿಕೊಂಡು ಬಂದು ರಸ್ತೆಯಲ್ಲಿ ಮೊಳೆ ಹೊಡೆದಿದ್ದಾರೆ. ಕಾಂಕ್ರೀಟ್ ದಿಬ್ಬ ಹಾಕಿ ಅಡ್ಡಗಟ್ಟಿದ್ದಾರೆ. ರೈತರ ಹೆಸರಲ್ಲಿ ಅವರ ಮುಖವಾಡ ಹೊರ ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಯವರು ಅನುಭವಿಸುತ್ತಾರೆ ಎಂದು ತಿಳಿಸಿದರು.

click me!