ಸಿದ್ಧರಾಮಯ್ಯ ಈ ಬಾರಿ ಕುಗ್ಗಿಹೋಗೋಕೆ ಡಿಕೆಶಿ ಅವರೇ ಕಾರಣ, ಯತ್ನಾಳ್‌ ನೇರ ಮಾತು

By Santosh Naik  |  First Published Sep 27, 2023, 8:11 PM IST

ಸಿಎಂ ಆಗಿ ಸಿದ್ಧರಾಮಯ್ಯ ಅವರ ಆಡಳಿತದಲ್ಲಿ ಈ ಬಾರಿ ಹಿಂದಿನ ಚಾರ್ಮ್‌ ಕಾಣುತ್ತಿಲ್ಲ ಎಂದು ಹಲವು ರಾಜಕೀಯ ವಿಶ್ಲೇಷಕರು ಚರ್ಚೆ ಮಾಡಿದ್ದಾರೆ. ಇದಕ್ಕೆ ತಕ್ಕಂತೆ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಸಿದ್ಧರಾಮಯ್ಯ ಅವರ ಚಾರ್ಮ್‌ ಕುಗ್ಗಿಹೋಗೋಕೆ ಡಿಕೆಶಿ ಅವರೇ ಕಾರಣ ಎಂದಿದ್ದಾರೆ.
 


ಬೆಂಗಳೂರು (ಸೆ.27): ಸಿದ್ಧರಾಮಯ್ಯ ಅವರು ಹಿಂದಿನ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತದಲ್ಲಿ ಒಂದು ಖದರ್‌ ಇತ್ತು. ಯಾವುದೇ ಯೋಜನೆಗಳಲ್ಲಾಗಲಿ, ಅದರ ಅನುಷ್ಠಾನದಲ್ಲಾಗಲಿ, ವಿವಾದವಾಗುವ ವಿಚಾರವಾಗಲು ಎಲ್ಲವನ್ನೂ ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದಾರೆ. ಆದರೆ, ಈ ಬಾರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದಲ್ಲಾ ಒಂದು ವಿವಾದಗಳು ಸರ್ಕಾರದ ಮೇಲೆ ಬರುತ್ತಿವೆ. ಅದರ ನಡುವೆ ಈಗ ಕಾವೇರಿ ವಿವಾದ ದೊಡ್ಡ ತಲೆನೋವನ್ನು ಸರ್ಕಾರಕ್ಕೆ ನೀಡಿದೆ. ಸಿದ್ಧರಾಮಯ್ಯ ಸಿಎಂ ಆಗಿದ್ದರೂ, ಅವರ ಆಡಳಿತದಲ್ಲಿ ಹಿಂದಿನ ವರ್ಚಸ್ಸು ಕಾಣುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಈ ಬಾರಿ ಸಿದ್ಧರಾಮಯ್ಯ ಕುಗ್ಗಿ ಹೋಗೋಕೆ ಡಿಕೆ ಶಿವಕುಮಾರ್‌ ಅವರೇ ಕಾರಣ ಎಂದು ಹೇಳಿದ್ದಾರೆ.  ಡಿಕೆ ಶಿವಕುಮಾರ್ ಪಕ್ಷನಿಷ್ಠ ಅಲ್ಲ. ಅವರೊಬ್ಬ ಅಡ್ಜೆಸ್ಟ್ ಮೆಂಟ್ ರಾಜಕಾರಣಿ. ಸಿದ್ದರಾಮಯ್ಯ ಈ ಮಟ್ಟಕ್ಕೆ ಕುಗ್ಗೋಕೆ ಡಿಕೆ ಶಿವಕುಮಾರ್ ಕಾರಣ. ಇದನ್ನು ಸ್ವತಃ ಸಿದ್ದರಾಮಯ್ಯ ಒಮ್ಮೆ ನನಗೆ ಹೇಳಿದ್ದರು. ಏನ್ ಮಾಡೋದು ಯತ್ನಾಳ್ ಎಲ್ಲಾ ಮುಗಿತು ಇನ್ನೇನಿದೆ. ಆರಾಮಾಗಿ ಇರುತ್ತೇನೆ ಎಂದಿದ್ದರು' ಎಂದು ಯತ್ನಾಳ್‌ ಏಷ್ಯಾನೆಟ್‌ ಸುವರ್ಣನ್ಯೂಸ್‌ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ.

ಡಿಕೆ ಶಿವಕುಮಾರ್‌,  ಸ್ಟ್ಯಾಲಿನ್‌ ಮೂಲಕ ಮುಖ್ಯಮಂತ್ರಿ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ. ಹೇಗಿದ್ದರೂ, ಸ್ಟ್ಯಾಲಿನ್‌ ಮತ್ತು ಅಂಟೋನಿಯೋ ಮೈನೊ (ಸೋನಿಯಾ ಗಾಂಧಿ) ಎಲ್ಲಾ ಒಂದೇ ಅಲ್ವಾ? ಅದು ನಮ್ಮ ದೇಶದ ಹೆಸರಲ್ಲ. ಹಾಗಾಗಿ ಸ್ಟ್ಯಾಲಿನ್‌ ಮೂಲಕ ಮುಖ್ಯಮಂತ್ರಿ ಆಗೋಕೆ ಮುಂದಾಗಿದ್ದಾರೆ ಎಂದು ಹೇಳಿದರು.

Tap to resize

Latest Videos

ಡಿಕೆ ಶಿವಕುಮಾರ್‌ ತಮಿಳುನಾಡಿಗೆ ಸಂತೋಷದಿಂದ ನೀರು ಬಿಡುತ್ತೇವೆ ಎನ್ನುತ್ತಾರೆ. ಇದು ಕಾನೂನು ಹೋರಾಟಕ್ಕೆ ಹಿನ್ನಡೆ ಆಗಲಿದೆ. ಹಿಂದೆ ಒಮ್ಮೆ ಹೀಗೆ ಆದ ಉದಾಹರಣೆ ಇದೆ ಎಂದು ಯತ್ನಾಳ್‌ ಹೇಳಿದ್ದಾರೆ. ಡಿಕೆ ಶಿವಕುಮಾರ್ ಹರಿಪ್ರಸಾದ್ ಮೂಲಕ ಮಾತನಾಡಿಸುತ್ತಿದ್ದಾರೆ. ಅವರ ಹಿಂದೆ ಇರೋದು ಡಿಕೆಶಿ. ಇಲ್ಲ ಎನ್ನೋದಾದರೆ ಯಾಕೆ ಶಿಸ್ತು ಕ್ರಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ. ತಾಕತ್ತು ಶಕ್ತಿ ಧಮ್ಮು ಯಾವುದು ಉಳಿದಿಲ್ವಾ ಡಿಕೆಶಿ ಅವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ.

 

ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದವರಿಗೆ ಬೆಂಬಲ ಕೊಡಿ ಅಂತೀರಿ, ಕೃಷ್ಣೆಗೆ ಬಂದಾಗ ಯಾಕೆ ಮಲಗಿಕೊಳ್ತಿರಿ?: ಯತ್ನಾಳ್‌

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮೈತ್ರಿ ಆಗಿದೆ. ರಾಜ್ಯ ನಾಯಕರ ಜೊತೆ ಕೂಡ ದೆಹಲಿಯಲ್ಲಿ ಅಮಿತ್ ಶಾ ಕೂರಿಸಿ ಮಾತಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಕೂಡ ಪಡೆದಿದ್ದಾರೆ. ಒಟ್ಟಾಗಿ ಒಂದು ಸಭೆ ಆಗಿಲ್ಲ ಅಷ್ಟೇ .  ಈ ಮೈತ್ರಿಗೆ ನಾವು ಬದ್ಧ ನಾನೂ ಬದ್ಧ ಎಂದು ಹೇಳಿದ್ದಾರೆ. ವಿಪಕ್ಷ ನಾಯಕ ಯಾವಾಗ ಎನ್ನುವ ಪ್ರಶ್ನೆಗೆ,  ವಿಪಕ್ಷ ನಾಯಕ ಆಯ್ಕೆ ಬಗ್ಗೆ ನಾನು ಮಾತಾಡೋದೆ ಬಿಟ್ಟಿದ್ದೇನೆ. ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಭವಿಷ್ಯ ಸುಳ್ಳಾಯ್ತು. ಮಾಧ್ಯಮದವರ ಭವಿಷ್ಯ ಕೂಡ ಸುಳ್ಳಾಯಿತು. ಹೀಗಾಗಿ ನಾನು ಈಗ ಮಾತಾಡಲ್ಲ. ನಾವು ನೀವೆಲ್ಲಾ ಸೈಲೆಂಟ್ ಇದ್ದಾಗ ಒಮ್ಮೆ ಘೋಷಣೆ ಮಾಡ್ತಾರೆ ನೋಡಿ ಎಂದು ಯತ್ನಾಳ್‌ ನಗು ಬೀರಿದ್ದಾರೆ.

ಕಾವೇರಿ ಹೋರಾಟಕ್ಕೆ ಬಾರದ ನಟ-ನಟಿಯರ ಚಿತ್ರಗಳನ್ನು ಬಹಿಷ್ಕರಿಸಿ: ಶಾಸಕ ಯತ್ನಾಳ್‌ ಒತ್ತಾಯ

click me!