ಮಂತ್ರಿ ಸ್ಥಾನ ಸಿಗದಿದ್ದಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಮಾತ್ರವಲ್ಲ ಮಠಾಧೀಶರ ವಿರುದ್ಧ ಕಿಡಿಕಾರಿದ್ದಾರೆ.
ವಿಜಯಪುರ, (ಜ.13): ಮಂತ್ರಿ ಸ್ಥಾನ ಕೃತಪ್ಪಿದ್ದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳೆ ನಡೆಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪನವರ ನಾಯಕತ್ವದ ಬದಲಾವಣೆ ಎದ್ದಿದ್ದ ಕೂಗಿನ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಯಡಿಯೂರಪ್ಪರನ್ನ ಕೆಳಗಿಳಿಸಿದ್ರೆ ಕೇಂದ್ರ, ಅಮೀತ್ ಶಾ, ಪ್ರಧಾನಿ ವಿರುದ್ಧ ಬಂಡೆಳಲು ವೀರಶೈವ ಮಠಗಳು ಕೋಟಿ-ಕೋಟಿ ಪಡೆದಿವೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಬಿಎಸ್‌ವೈ ವಿರುದ್ಧ CD ಬಾಂಬ್ ಸಿಡಿಸಿದ ಯತ್ನಾಳ್: ರಾಜಕಾರಣಲ್ಲಿ ಶುರುವಾಯ್ತು ಸಿಡಿ ಚರ್ಚೆ
2 ತಿಂಗಳ ಹಿಂದೆ ವೀರಶೈವ ಮಠಗಳಿಗೆ 83 ಕೋಟಿ ಹಂಚಲಾಗಿದೆ. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಬಂಡೆಳಲು ಸ್ವಾಮೀಜಿಗಳಿಗೆ ಈ ಹಣ ಸಂದಾಯವಾಗಿದೆ ಎಂದು ಹೊಸ ಬಾಂಬ್ ಸಿಡಿಸಿದರು,
ಗುಲ್ಬರ್ಗಾದಲ್ಲಿ ಒಬ್ಬ ಸ್ವಾಮೀಜಿಯಿಂದ ಈಗಾಗಲೇ ಯಡಿಯೂರಪ್ಪರನ್ನ ಕೆಳಗಿಳಿದ್ರೆ ಬಿಜೆಪಿ ಸರ್ವನಾಶವಾಗುತ್ತೆ ಎಂದು ಹೇಳಿದ್ದಾರೆ. ಹೀಗೆ ಹೇಳಿಕೆ ಕೊಡಿಸಲು ವೀರಶೈವ ಲಿಂಗಾಯತ ಸ್ವಾಮಿಗಳನ್ನು ಬಳಸಿಕೊಳ್ಳಲಾಗ್ತಿದೆ ಎಂದು ಯತ್ನಾಳ್ ಗುಡುಗಿದರು.
ಇನ್ನು ಪಂಚಮಸಾಲಿ ಸಮುದಾಯವನ್ನ ದುರುಪಯೋಗ ಪಡೆಸಿಕೊಳ್ಳಲಾಗ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಸಮುದಾಯವನ್ನ ಉಪಯೋಗಿಸಿಕೊಳ್ತಿದ್ದಾರೆ. ಪಂಚಮಸಾಲಿ ಸಮುದಾಯದ ಪಾದಯಾತ್ರೆ ಮೊಟಕುಗೊಳಿಸಲು ಹುನ್ನಾರ ನಡೆದಿದೆ ಎಂದು ಹೇಳಿದರು.
ಸಿಎಂ ಹಾಗೂ ಮಂತ್ರಿಯಾಗ್ತಿರೋ ನಮ್ಮ ಸಮುದಾಯದ ಇನ್ನೊಬ್ಬ ಸೇರಿ ಪಾದಯಾತ್ರೆ ರದ್ದಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಪರೋಕ್ಷವಾಗಿ ಮುರುಗೇಶ ನಿರಾಣಿ ವಿರುದ್ಧವು ವಾಗ್ದಾಳಿ ನಡೆಸಿದರು.
ಇಡೀ ವೀರಶೈವ ಸಮುದಾಯ ನನ್ನ ಬೆನ್ನಿಗಿದೆ ಎಂದು ಬಿಎಸ್‌ವೈ, ಕೇಂದ್ರ ಹೈಕಮಾಂಡ್ ನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮರಕ ಸಂಕ್ರಾಂತಿಯ ಉತ್ತರಾಯಣದಿಂದ ಯಡಿಯೂರಪ್ಪ ಅವನತಿ ಆರಂಭ ಎಂದು ಭವಿಷ್ಯ ನುಡಿದರು.