ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗವಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಹಾವೇರಿ, (ಮಾ.27): ಬಿಜೆಪಿಯಲ್ಲೊಬ್ಬ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕ ಇಬ್ಬರೂ ಇದ್ದಾರೆಂದು ಹೇಳಿದ್ದೆ. ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ. ಕೆಲವೆ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದು ಹೊರಬರಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮೊದಲೇ ಭವಿಷ್ಯ ನುಡಿದಿದ್ದೆ. ಈಗ ಕಾಂಗ್ರೆಸ್ ಮಹಾನ್ ನಾಯಕನ ಹೆಸರು ಹೊರಬಂದಿದೆ. ಕೆಲವೇ ದಿನಗಳಲ್ಲಿ ಬಿಜೆಪಿ ಯುವರಾಜ್‌ನ ಹೆಸರು ಹೊರಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
'ಸಿಡಿ ಹಗರಣ 'ಹನಿಟ್ರ್ಯಾಪ್'ನಂತೆ ಕಾಣುತ್ತಿದೆ, ನಾಚಿಕೆ ಪಡುವಂತಾ ಸ್ಥಿತಿಯಲ್ಲಿ ರಾಜ್ಯ ನಿಂತಿದೆ'
ಈ ಸಿಡಿ ಯುವರಾಜನ ರಕ್ಷಣೆ ಮಾಡಲು ಸಿಸಿಬಿಗೆ ಕೊಟ್ಟಿದ್ದು. ಸಿಬಿಐಗೆ ಕೊಟ್ಟರೆ ಎಲ್ಲ ಕಳ್ಳರನ್ನ ಒದ್ದು ಒಳಗೆ ಹಾಕ್ತಾರೆ. ಐಪಿಎಸ್, ಐಎಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರ ಸಿಡಿಗಳಿವೆ ಎಂದು ಗಂಭೀರ ಆರೋಪ ಮಾಡಿದರು.
ಇವರಿಬ್ಬರೂ ಸಿಡಿ ಖರೀದಿದಾರರು. ಮೆಕ್ಕೆಜೋಳ, ಮೆಣಸಿನಕಾಯಿ ಖರೀದಿ ಮಾಡೋರ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೊಬ್ಬರು ಸಿಡಿ ಖರೀದಿ ಮಾಡೋರಿದ್ದಾರೆ ಎಂದರು.