ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮುಸ್ಲಿಂ ವಿದ್ಯಾರ್ಥಿನಿ ಸಂಬಂಧ ಅಲ್‌ಖೈದಾ ಮುಖಂಡ ಮಾಡಿರುವ ವೀಡಿಯೋವನ್ನು ಆರ್‌ಎಸ್‌ಎಸ್‌ನವರೇ ಹುಟ್ಟುಹಾಕಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.
ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಏ.07): ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮುಸ್ಲಿಂ ವಿದ್ಯಾರ್ಥಿನಿ (Muslim Student) ಸಂಬಂಧ ಅಲ್ ಖೈದಾ ಮುಖಂಡ (Al Qaeda Leader) ಮಾಡಿರುವ ವೀಡಿಯೋವನ್ನು ಆರ್‌ಎಸ್‌ಎಸ್‌ನವರೇ (RSS) ಹುಟ್ಟುಹಾಕಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ (Siddaramaiah) ಹೇಳಿಕೆಗೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ (Arvind Bellad) ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆ ಬಾಲಿಷತನದಿಂದ ಕೂಡಿದೆ. ಅವರಂತಹ ದೊಡ್ಡ ಲೀಡರ್ ಹೀಗೆ ಮಾತನಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
undefined
ಒಂದು ಸಮಾಜ, ಒಂದು ದೇಶ ಹಾಗೂ ಒಂದು ಕುಟುಂಬ ಎಂದ ಮೇಲೆ ಬೇರೆ ಬೇರೆ ವಿಚಾರಗಳು ಇದ್ದೇ ಇರುತ್ತವೆ. ಇಂತಹ ತೊಂದರೆಗಳು ಬಂದಾಗ ಹೊರಗಿನ ಶಕ್ತಿಗಳು ಅದಕ್ಕೆ ಪ್ರಚೋದನೆ ನೀಡುವುದು ಸಹಜ. ಆದರೆ, ಇಂತಹ ಶಕ್ತಿಗಳನ್ನು ಖಂಡನೆ ಮಾಡುವುದು ಈ ದೇಶದ, ರಾಜ್ಯದ ಮುಸ್ಲಿಂ ನಾಯಕರ ಕರ್ತವ್ಯ ಎಂದಿದ್ದಾರೆ. ಅಲ್‌ಖೈದಾ ಉಗ್ರ ಮಾಡಿರುವ ವೀಡಿಯೋವನ್ನು ಮುಸ್ಲಿಂ ನಾಯಕರು ಖಂಡಿಸಿದರೆ ಉಳಿದವರೂ ಮೆಚ್ಚಿಕೊಳ್ಳುತ್ತಾರೆ. ಆದರೆ, ಅಂತಹ ಉಗ್ರರ ಪ್ರಚೋದನೆಗೆ ಒಳಗಾದರೆ ಇಡೀ ದೇಶ, ಸಮಾಜ ತೊಂದರೆಗೆ ಒಳಾಗುತ್ತದೆ.
ಸಚಿವ ಆರಗಗೆ ಅನುಭವವೂ ಇಲ್ಲ. ಇಲಾಖೆಯನ್ನೂ ನಿಭಾಯಿಸಲೂ ಬರಲ್ಲ: ಸಿದ್ದರಾಮಯ್ಯ ಆಕ್ರೋಶ
ಹೀಗಾಗಿ ಮುಸ್ಲಿಂ ಬಾಂಧವರಿಗೆ ಮನವಿ ಮಾಡುತ್ತೇನೆ, ಮುಸ್ಕಾನ್ ತಂದೆ ಈ ಅಲ್‌ಖೈದಾ ಉಗ್ರನ ವೀಡಿಯೋವನ್ನು ಖಂಡಿಸಿದಂತೆ ಮುಸ್ಲಿಂ ನಾಯಕರೂ ಖಂಡಿಸಬೇಕು. ಹೊರಗಿನವರು ಇದರಲ್ಲಿ ಎಂಟ್ರಿಯಾಗಲು ಬಿಡಬಾರದು ಎಂದರು. ಚಂದ್ರು ಹತ್ಯೆ ಸಂಬಂಧ ಪೊಲೀಸರು ಯಾವ ಮೊದಲ ಹೇಳಿಕೆ ಕೊಟ್ಟಿದ್ದಾರೋ ಅದನ್ನೇ ಗೃಹ ಸಚಿವರು ಹೇಳಿದ್ದಾರೆ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಒಟ್ಟಾರೆಯಾಗಿ ಈ ಹತ್ಯೆಯ ಸಂಪೂರ್ಣ ತನಿಖೆ ನಡೆಯಬೇಕು. ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಅಲ್ ಖೈದಾ ಮುಖ್ಯಸ್ಥನ ವಿಡಿಯೋ ಕೂಡ RSS ಅವ್ರೆ ಕಳ್ಸೋದು ಎಂದ ಸಿದ್ಧರಾಮಯ್ಯ: ರಾಜ್ಯದ ಆಂತರಿಕ ವಿಚಾರಗಳ ಮೇಲೆ ವಿಶ್ವದ ಅತ್ಯಂತ ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಕರಿನೆರಳು ಬಿದ್ದಿದೆ. ಹಿಜಾಬ್ ಗಲಾಟೆಯ ವೇಳೆ ಮಂಡ್ಯದ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಸಾರ್ವಜನಿಕವಾಗಿ "ಅಲ್ಲಾಹು ಅಕ್ಬರ್ " ಎಂದು ಕೂಗಿದ್ದು ಅಲ್ ಖೈದಾವರೆಗೂ ಮುಟ್ಟಿದೆ. ಇದಕ್ಕೆ ಪ್ರತಿಯಾಗಿ ಅಲ್ ಖೈದಾ ಸಂಘಟನೆಯ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ, ಒಂದು ಕವಿತೆಯನ್ನು ಬರೆದು ಅದನ್ನು ಮುಸ್ಕಾನ್ ಖಾನ್ ಗೆ ಅರ್ಪಿಸಿದ್ದಾನೆ.
ಇದರ ಬೆನ್ನಲ್ಲಿಯೇ ರಾಜಕೀಯ ಹೇಳಿಕೆಗಳು ಮುಂದುವರಿದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ವಿಡಿಯೋಗಳನ್ನು ಕಳಿಸೋದು ಅಲ್ ಖೈದಾ ಅಲ್ಲ, ಆರ್ ಎಸ್ ಎಸ್ ನವರೇ ಕಳಿಸೋದು ಎಂದು ಹೇಳಿದ್ದಾರೆ. ಆಲೂರು ಎಸ್ ಕೆ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧರಾಮಯ್ಯ, ಅಲ್ ಖೈದಾ ಮುಖ್ಯಸ್ಥ, ಮಂಡ್ಯ ಯುವತಿ ಅಲ್ಲಾ ಹೋ ಅಕ್ಬರ್ ಹೇಳಿಕೆಗೆ ಬೆಂಬಲ ನೀಡಿರೋ ವಿಚಾರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು. 'ಇಲ್ಲ ಇಲ್ಲ ಅದನ್ನೆಲ್ಲ ಬಿಜೆಪಿಗರೇ ಹುಟ್ಟಾಕಿರೋದು. ಎಲ್ಲಿದ್ದಾನೆ ಉಗ್ರ? ಯಾರು ಉಗ್ರ? ನೋಡಪ್ಪ ಇಂಥ ವಿಡಿಯೋಗಳನ್ನೆಲ್ಲಾ ಆರ್ ಎಸ್ಎಸ್ ನವರೇ ಕಳಿಸೋದು. ಸಮಾಜದಲ್ಲಿ ಅಶಾಂತಿ ಉಂಟುಮಾಡಲಿಕ್ಕೆ, ಸಾಮರಸ್ಯ ಹಾಳು ಮಾಡಲಿಕ್ಕೆ , ಮತಗಿಟ್ಟಿಸಿಕೊಳ್ಳೋಕೆ ಹೀಗೆ ಇಂಥ ವಿಡಿಯೋಗಳನ್ನು ಹುಟ್ಟು ಹಾಕಿರ್ತಾರೆ' ಎಂದು ಆರೋಪ ಮಾಡಿದ್ದಾರೆ.
ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ
ಈ ಬಗ್ಗೆ ಸೂಕ್ತವಾಗಿ ತನಿಖೆಯಾಗಲಿ, ತಪ್ಪು ಯಾರೇ ಮಾಡಿರಲಿ ಶಿಕ್ಷೆಯಾಗಲಿ. ಅಯ್ಮಾನ್ ಅಲ್-ಜವಾಹಿರಿ ಬಗ್ಗೆ ಇಂಟಲಿಜೆನ್ಸ್ ಬಳಿ ಕೇಳಿ ಮಾತನಾಡ್ತಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಇಂಥ ವಿಚಾರಗಳೆನೆಲ್ಲಾ ಇಂಟಲಿಜೆನ್ಸ್ ಬಳಿ ಮಾತಾಡಿ ಏನ್ ಹೇಳೋದು. ದಿನಕ್ಕೆ ಎರಡು ಬಾರಿ ಇಂಟಲಿಜೆನ್ಸ್, ಸಿಎಂಗೆ ರಿಪೋರ್ಟ್ ಮಾಡ್ತಾರೆ ಇದರ ಬಗ್ಗೆ ಗೊತ್ತಿಲ್ಲ ಅಂದ್ರೆ ನಾನೇನ್ ಹೇಳೋದು. ಯಾರೇ ತಪ್ಪು ಮಾಡಿದರು ಶಿಕ್ಷೆ ಆಗಬೇಕು. ನಾನೇ ಆಗಲಿ ಬೇರೆ ಧರ್ಮದವರೇ ಆಗಲಿ ಶಿಕ್ಷೆಯಾಗಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.