ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು

By Suvarna NewsFirst Published Jul 16, 2021, 4:06 PM IST
Highlights

* ಸಿಎಂ ದೆಹಲಿ ಭೇಟಿ ಹಿಂದೆಯೇ ಗರಿಗೆದರಿದ ರಾಜಕೀಯ ಚಟುವಟಿಕೆ ಗಳು
* ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ ಅರವಿಂದ ಬೆಲ್ಲದ್ 
* ಬೆಲ್ಲದ್ ಭೇಟಿ ಬಳಿಕ ಕಂದಾಯ ಸಚಿವ ಅಶೋಕ್ ಭೇಟಿ

ಬೆಂಗಳೂರು, (ಜುಲೈ.16): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸ ಪುಷ್ಠಿ ನೀಡಿದೆ.

ಹೌದು... ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಭೇಟಿ ಬೆನ್ನಲ್ಲೇ ಇತ್ತ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಿಎಸ್‌ವೈ ಆಪ್ತ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನ ಬಿಜೆಪಿ ರೆಬೆಲ್ ಶಾಸಕ ಅರವಿಂದ ಬೆಲ್ಲದ್ ಭೇಟಿ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಸದಾನಂದಗೌಡ್ರನ್ನ ಭೇಟಿಯಾದ ಶ್ರೀರಾಮುಲು, ಜನಾರ್ದನ ರೆಡ್ಡಿ
 

ಸಿಎಂ ದೆಹಲಿಗೆ ಹೋಗುತ್ತಿದ್ದಂತೆ ಇಂದು (ಶುಕ್ರವಾರ) ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಅರವಿಂದ್ ಬೆಲ್ಲದ್ ಭೇಟಿ ನೀಡಿ ಸುಮಾರು ಹದಿನೈದು ನಿಮಿಷ ಮಾತುಕತೆ ನಡೆಸಿದ್ದಾರೆ.

ಬೆಲ್ಲದ್ ಅಲ್ಲಿಂದ ತೆರಳಿದ ಬಳಿಕ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ರಹಸ್ಯ ಮಾತುಕತೆ ಮಾಡಿದ್ದು, ಹಲ್ ಚಲ್ ಎಬ್ಬಿಸಿದೆ.

 ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ ಮಟ್ಟದಲ್ಲಿ ಧ್ವನಿ ಎತ್ತಿದವರಲ್ಲಿ  ಅರವಿಂದ ಬೆಲ್ಲದ್ ಮೊದಲಿಗರು. ಇದೀಗ ದಿಢೀರ್ ಸಿಎಂ ಆಪ್ತರಾಗಿರುವ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಬೆನ್ನ ಹಿಂದೆ ದೆಹಲಿಗೆ ಹೊರಟ ರೇಣುಕಾಚಾರ್ಯ ಮತ್ತು ತಂಡ!

ಮೇಲ್ನೋಟಕ್ಕೆ  ಮೇಕೆದಾಟು ಸೇರಿದಂತೆ ಹಲವು ಕೆಲಸ ನಿಮಿತ್ತ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರನ್ನ ಭೇಟಿಯಾಗುವುದಕ್ಕೆ ಸಿಎಂ ದಿಲ್ಲಿಗೆ ಹೊಗಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಖುದ್ದು ಹೈಕಮಾಂಡ್​ ಬಿಎಸ್​ವೈರನ್ನ ದೆಹಲಿಗೆ ಕರೆಸಿಕೊಳ್ತಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಯಾಕಂದ್ರೆ ಕೆಲವು ಬಿಜೆಪಿ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಬಿಎಸ್​ವೈಗೆ ಬುಲಾವ್ ನೀಡಿರೋದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

click me!