ಗದಗ ನಗರಸಭೆ ಕಚೇರಿಯಲ್ಲೇ ಬಿಜೆಪಿ ಸದಸ್ಯರ ಕಿತ್ತಾಟ: ಏಕವಚನದಲ್ಲಿ ಕಚ್ವಾಟ!

By Govindaraj SFirst Published Feb 9, 2024, 11:11 AM IST
Highlights

ಗದಗ ನಗರಸಭೆ ಕಚೇರಿಯಲ್ಲೇ ಬಿಜೆಪಿ ಸದಸ್ಯರು ಕಿತ್ತಾಡಿದ್ದಾರೆ. ಬಿಜೆಪಿ ಸ್ಥಾಯಿ ಸಮಿತಿ ಅಧಕ್ಷ ಅನಿಲ್ ಅಬ್ಬಿಗೇರಿ ಮತ್ತು ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಪತಿ ಶಶಿಧರ ದಿಂಡೂರ ನಡುವೆ ಭಾರಿ ಜಗಳ ನಡೆದಿದೆ.

ಗದಗ (ಫೆ.09): ಗದಗ ನಗರಸಭೆ ಕಚೇರಿಯಲ್ಲೇ ಬಿಜೆಪಿ ಸದಸ್ಯರು ಕಿತ್ತಾಡಿದ್ದಾರೆ. ಬಿಜೆಪಿ ಸ್ಥಾಯಿ ಸಮಿತಿ ಅಧಕ್ಷ ಅನಿಲ್ ಅಬ್ಬಿಗೇರಿ ಮತ್ತು ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಪತಿ ಶಶಿಧರ ದಿಂಡೂರ ನಡುವೆ ಭಾರಿ ಜಗಳ ನಡೆದಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಅವರ ಚೇಂಬರ್ ನಲ್ಲೇ ಏಕವಚನದಲ್ಲಿ ಜಗಳ ನಡೆದಿದೆ. ಗಲಾಟೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಕ್ಷುಲಕ ಕಾರಣಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಹಾಘೂ ಸದಸ್ಯೆ ಪತಿ ಶಶಿಧರ್ ಕಿತ್ತಾಡಿಕೊಂಡು ಬೀದಿರಂಪ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಎದುರಲ್ಲೇ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಅಭಿವೃದ್ಧಿ ಮಾಡಲು ಮತ ಹಾಕಿದ್ರೆ ಬರೀ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿರೋ ಬಿಜೆಪಿ ಆಡಳಿತ ಅಂತ ಕೆಲವರು ಕಿಡಿಕಾರಿದ್ದಾರೆ. ಬಿಜೆಪಿ ನಗರಸಭೆ ಆಡಳಿತದ ವಿರುದ್ಧ ಅವಳಿ ನಗರದ ಜನರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಮುದ್ರಾಂಕ ಶುಲ್ಕ ಐದು ಪಟ್ಟು ಭಾರಿ ಹೆಚ್ಚಳ: ಸರ್ಕಾರದ ಆದಾಯ 2000 ಕೋಟಿ ರು.ವರೆಗೂ ಹೆಚ್ಚಳ ನಿರೀಕ್ಷೆ!

ನಗರಸಭೆ ಅವ್ಯವಹಾರದ ತನಿಖೆಗೆ ಡಿಸಿ ಆದೇಶ: ಇಲ್ಲಿನ ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಾತೆ ಹಾಗೂ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ಅವನಾಶ್ ಮನೆನ್ ರಾಜೇಂದ್ರನ್ 7 ಅಧಿಕಾರಿಗಳ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ.

ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವನಂಕಾರಿಗೌಡ ನೇತೃತ್ವದಲ್ಲಿ 7 ಅಧಿಕಾರಿಗಳು ಸಮಿತಿಯಲ್ಲಿದ್ದು, ಚನ್ನಪಟ್ಟಣ ನಗರಸಭೆಯಲ್ಲಿ ಅಕ್ರಮ ಖಾತೆ, ಮತ್ತು ಅಧಿಕಾರಿ ಹಾಗೂ ನೌಕರರ ವಿರುದ್ಧ ಸ್ವೀಕೃತವಾಗಿರುವ ದೂರುಗಳ ಕುರಿತು ತನಿಖೆ ನಡೆಸಿ ಒಂದು ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ನಗರಸಭೆಯಲ್ಲಿ ಅಕ್ರಮ ಖಾತೆಗಳನ್ನು ಮಾಡಿಕೊಡಲಾಗುತ್ತಿದ್ದು, ಈ ವಿಚಾರದಲ್ಲಿ ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಲ್ಲದೇ ನಗರಸಭೆಯಲ್ಲಿ ನಕಲಿ ಖಾತೆ ಮಾಡಿಕೊಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಪ್ರಶಾಂತ್ ಗಂಭೀರ ಆರೋಪ ಮಾಡಿದ್ದರು.

ಕಾಂಗ್ರೆಸ್‌ ಸರ್ಕಾರದಲ್ಲೂ 40% ಕಮಿಷನ್: ಕೆಂಪಣ್ಣ ಗಂಭೀರ ಆರೋಪ

ಜತೆಗೆ ನಗರಸಭೆಯಲ್ಲಿ ಖಾತೆ ಅವ್ಯವಾರಕ್ಕೆ ಸಂಬಂಧಿಸಿದಂತೆ ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಹಾಗೂ ಕೆಲ ನಗರಸಭೆ ಸದಸ್ಯರು ಹಾಗೂ ಸಾರ್ವಜಿಕನರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ೭ ಮಂದಿಯ ಸಮಿತಿ ರಚಿಸಿರುವ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ತನಿಖಾ ಸಮಿತಿ ಕೋರುವ ಎಲ್ಲ ದಾಖಲೆ ಹಾಗೂ ಕಡತಗಳನ್ನು ತನಿಖೆಯ ಸಮಯದಲ್ಲಿ ಹಾಜರುಪಡಿಸುವಂತೆ ಚನ್ನಪಟ್ಟಣ ಪೌರಾಯುಕ್ತರಿಗೂ ಸೂಚಿಸಿದ್ದಾರೆ.

click me!