ರಾಜಕೀಯ ಲಾಭಕ್ಕಾಗಿ ದಲಿತರ ಮೇಲೆ ಬಿಜೆಪಿಗೆ ಪ್ರೀತಿ: ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Jun 1, 2022, 11:01 AM IST

*  ಸಾವಿನ ಮನೆಯಲ್ಲಿ ಬಿಜೆಪಿ ಸಂತಸ ಪ್ರಿಯಾಂಕ್‌ ಖರ್ಗೆ ಟೀಕೆ
*  ಕಲಬುರಗಿ ಜಿಲ್ಲೆಯನ್ನು ತಮ್ಮ ಪ್ರಯೊಗ ಶಾಲೆ ಮಾಡಿಕೊಳ್ಳಲು ಮುಂದಾದ ಬಿಜೆಪಿ ನಾಯಕರು
*  ಚಿತ್ತಾಪುರ ಜನತೆ ಈ ಬಣ್ಣ ಬದಲಾಯಿಸುವ ನಾಯಕರ ಕುರಿತು ಎಚ್ಚರದಿಂದರಬೇಕು 


ಚಿತ್ತಾಪುರ(ಜೂ.01): ಬಿಜೆಪಿಗರಿಗೆ ದಲಿತರ ಮೇಲಿನ ಪ್ರೀತಿ ಕೇವಲ ತಮ್ಮ ರಾಜಕೀಯ ಲಾಭವ ಲೆಕ್ಕಚಾರದ ಮೇಲೆ ನಿಂತಿದೆ ಅನ್ನೊದಕ್ಕೆ ಬಿಜೆಪಿ ನಿನ್ನೆ ಎಸ್‌ಪಿಗೆ ಸಲ್ಲಿಸಿರುವ ಮನವಿ ಸಾಕ್ಷಿಯಾಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ತಮ್ಮ ರಾಜಕೀಯ ಲಾಭಕ್ಕಾಗಿ ದುರದೃಷ್ಟಕರ ಘಟನೆಯೊಂದನ್ನು ಕೊಮು ದಳ್ಳುರಿಯಾಗಿ ಬದಲಾಯಿಸಿ ಬಡ ಜನರ ಬಾಳಲ್ಲಿ ಬೆಂಕಿ ಹೊತ್ತಿಸುವ ಕೆಲಸಕ್ಕೆ ಕೈ ಹಾಕಿರುವುದು ಇಢೀ ರಾಜ್ಯಕ್ಕೆ ಸೌಹಾರ್ದತೆಯ ಪ್ರತಿಕವಾಗಿರುವ ನಮ್ಮ ತಾಲೂಕಿಗೆ ಅವಮಾನಕರವಾಗಿದೆ.

Latest Videos

undefined

ಮೋದಿ ಮನಸೆಳೆದ ಕಲಬುರಗಿ ಸಂತೋಷಿ ಮಾತು

ಬಿಜೆಪಿ ಸರ್ಕಾರ ಬಂದಾಗಿನಿಂದ ತಾಲೂಕಿನ ಇಡೀ ಆಡಳಿತ ವ್ಯವಸ್ಥೆಯ ನಿಯಂತ್ರಣ, ಪೊಲೀಸ್‌, ಆರೋಗ್ಯ, ಶಿಕ್ಷಣ ಇಲಾಖೆಯ ವರ್ಗಾವಣೆ ಎಲ್ಲವನ್ನು ಡೀಲ್‌ಗಳ ಮೂಲಕ ನಿರ್ವಹಿಸಿಕೊಂಡು ಒಂದು ತಾಲೂಕಿನ ಆಡಳಿತವನ್ನು ಈ ಮಟ್ಟಕ್ಕೆ ಬಿಜೆಪಿ ಕೊಂಡೊಯ್ದಿದೆ. ಇವರ ವರ್ಗಾವಣೆ ಮಾಡೆಲ್‌ ಆಡಳಿತ ಹೇಗಿದೆ ಎಂದರೆ ಸ್ವಲ್ಪ ದಿನದ ಹಿಂದಯಷ್ಟೆಒಂದೇ ಸಿಪಿಐ ಹುದ್ದೇಗೆ ಒಬ್ಬರು ಅಧಿಕಾರಿಗಳು ನೇಮಕವಾಗಿ ಒಂದೇ ಹುದ್ದೇಗೆ 2 ಸಂಬಳ ಪಡೆಯಲಾಗಿತ್ತು. ಡಿಜಿಪಿ ಕಚೇರಿ ಆದೇಶ ಉಲ್ಲಂಘಿಸಿ ಎಸ್ಪಿ ಕಚೇರಿ ಆದೇಶ ಉಲ್ಲಂಘಿಸಲು ಪ್ರಚೊದಿಸಿದ್ದ ಚಿತ್ತಾಪುರದಲ್ಲಿ ಇದ್ದ ಅತೀ ಭ್ರಷ್ಟಸಿಪಿಐ ಅವರನ್ನು ಇಲ್ಲೆ ಮುಂದುವರೆಸಲು ಕಸರತ್ತುಗಳ ಮಾಡಿಸಿದ್ದ ಇವರದೇ ಸರ್ಕಾರ, ಇವರದ್ದೇ ಪೊಲೀಸ್‌ ಇಲಾಖೆ ಎಲ್ಲ ಇಟ್ಟುಕೊಂಡ ಬಿಜೆಪಿ ನಾಯಕರು ಈಗ ತಾಲೂಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಆರೊಪಿಸಿ ಎಸ್ಪಿಗೆ ದೂರು ನೀಡಿರುವುದು ಕುಚೋದ್ಯವೇ ಸರಿ ಎಂದು ಅವರು ಚಾಟಿ ಬಿಸಿದ್ದಾರೆ.

ಕರ್ನಾಟಕದಲ್ಲಿ ಮುಸಲ್ಮಾನರ ಅಟ್ಟಹಾಸ ಹೆಚ್ಚಾಗಿದೆ: ಸಿದ್ಧಲಿಂಗ ಶ್ರೀ

ವಿಜಯ್‌ ಕಾಂಬಳೆ ಅವರ ಸಾವು ಚಿತ್ತಾಪುರದ ಪ್ರತಿಯೊಬ್ಬ ನಾಗರಿಕರಿಗೂ ನೊವು ತಂದಿದೆ. ಕಷ್ಟದಲ್ಲಿ ಜೀವನ ಸಾಗಿಸಿ ತಾಯಿ ಮತ್ತು ಸಹೊದರಿಯರ ಹೊಣೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ. ಬದುಕು ಬಾಳಬೇಕಿದ್ದ ಯುವಕನ ಹತ್ಯೆ ನನ್ನನ್ನೂ ಸೇರಿದಂತೆ ಎಲ್ಲರ ಮನಸಿನಲ್ಲೂ ದುಖ: ತರಿಸಿದೆ. ಈ ಕೊಲೆ ಮಾಡಿದವರ ಕೊಮು ಹಿಡಿದು ಬಿಜೆಪಿ ಸಾವಿನ ಮನೆಯಲ್ಲಿ ತನಗೆ ಬರಬೇಕಾದ ರೊಟ್ಟಿಯ ಲೆಕ್ಕ ಹಾಕತೊಡಗಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಕೊಲೆಗಾರರನ್ನು ಈಗಾಗಲೇ ಜೈಲಿಗೆ ಅಟ್ಟಲಾಗಿದೆ. ಈ ಹೀನ ಕೃತ್ಯ ಎಸಗಿದ ಇವರನ್ನ ನ್ಯಾಯಾಂಗ ವ್ಯವಸ್ಥೆ ಚಿತ್ತಾಪುರ ಮತ್ತು ವಾಡಿಯ ಜನ ಹಾಗೂ ಭಗವಂತೆ ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ತಾಲೂಕು ಹಾಗೂ ಜಿಲ್ಲೆಯಲ್ಲಿ ಕೊಮು ದ್ವೇಷಕ್ಕೆ ಜಾಗ ಹಿಂದೆಂದೂ ಸಿಕ್ಕಿಲ್ಲ. ಇನ್ನು ಮುಂದೆಯೂ ಸಿಗುವುದಿಲ್ಲಾ ಅದು ಓವೈಸಿಯಾದರೂ ಸರಿ ಬಿಜೆಪಿ ಯಾವುದೇ ನಾಯಕರಾದರೂ ಸರಿ ಎಂದು ಹೇಳಿದರು.

ಬಿಜೆಪಿ ನಾಯಕರು ಕಲಬುರಗಿ ಜಿಲ್ಲೆಯನ್ನು ತಮ್ಮ ಪ್ರಯೊಗ ಶಾಲೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಚಿತ್ತಾಪುರ ಜನತೆ ಈ ಬಣ್ಣ ಬದಲಾಯಿಸುವ ನಾಯಕರ ಕುರಿತು ಎಚ್ಚರದಿಂದರಬೇಕು. ಇವರ ಸುಳ್ಮ್ಳಗಳಿಗೆ ಆಸ್ಪದ ನೀಡಬಾರದೆಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.
 

click me!