ಮೈಸೂರು (ಜು.14): ರಾಜೀನಾಮೆ ವಿಚಾರ ಪಕ್ಷದ ಅಧ್ಯಕ್ಷರ ತೀರ್ಮಾನ. ಕೆಲ ರಾಜ್ಯಗಳಲ್ಲಿ ಬರಲಿರುವ ಮುಂದಿನ ಚುನಾವಣೆಗಾಗಿ ಸಂಘಟನಾ ದೃಷ್ಟಿಯಿಂದ ರಾಜೀನಾಮೆ ಕೇಳಿದರು. ತಕ್ಷಣವೇ ರಾಜೀನಾಮೆ ನೀಡಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ತಮ್ಮ ಅವರು ರಾಜೀನಾಮೆಗೆ ಕಾರಣವೇನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವುದು ಸಂಘಟನೆಗೆ ಸಂಬಂಧಪಟ್ಟವಿಚಾರ ಎಂದರು.
undefined
ರಾಜೀನಾಮೆ ನೀಡಿ ಬೆಂಗ್ಳೂರಿಗೆ ಬಂದ ಸದಾನಂದಗೌಡ, ಮುಂದಿನ ಸಿಎಂ ಎಂದು ಘೋಷಣೆ
ರಾಜೀನಾಮೆ ವಿಚಾರವಾಗಿ ವಿರೋಧ ಪಕ್ಷಗಳ ಟೀಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ರಾಜಕೀಯ ಅಂದ್ರೆ ದೊಡ್ಡ ಸಮುದ್ರ ಇದ್ದಂತೆ. ಸಮುದ್ರ ಸ್ನಾನಕ್ಕೆ ಇಳಿದರು ಅಲೆಗಳಿಗೆ ಕಾಯಬಾರದು. ಇಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಎಲ್ಲದಕ್ಕೂ ನಮ್ಮ ಕಾರ್ಯಾಚರಣೆ, ಕಮಿಟ್ಮೆಂಟ್ ಮೂಲಕವೇ ಉತ್ತರ ಕೊಡಬೇಕು. ನಾನು ಏರ್‌ಪೋರ್ಟ್‌ಗೆ ಬಂದಾಗ ಸ್ವಾಗತ ಮಾಡೋಕೆ ನಾಲ್ಕು ಸಾವಿರ ಜನ ಬಂದಿದ್ರು. ಇದಕ್ಕಿಂತ ದೊಡ್ಡ ಸಂಪಾದನೆ ಏನಿದೆ? ಎಲ್ಲ ಟೀಕೆಗಳಿಗೂ ಇದೇ ಉತ್ತರ ಎಂದರು.
ನಾನು ಸುಸಂಸ್ಕೃತ ರಾಜಕಾರಣಿ: ಕೇಂದ್ರದ ನಾಯಕರು ಮತ್ತೆ ಸಿಎಂ ಆಗುವಂತೆ ಸೂಚಿಸಿದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಪಕ್ಷ ಕೊಟ್ಟಂತಹ ಅವಕಾಶಗಳು ಬಹುಶಃ ರಾಜ್ಯದಲ್ಲಿ ಯಾರಿಗೂ ಸಿಕ್ಕಿಲ್ಲ. ನಾನೊಬ್ಬ ಸುಸಂಸ್ಕೃತ ರಾಜಕಾರಣಿ. ಅಧಿಕಾರ ಕೊಟ್ಟಾಗ ಎತ್ತರಕ್ಕೆ ಏರುವುದು, ಕೊಡದಿದ್ದಾಗ ಕೆಳಕ್ಕೆ ಇಳಿಯುವುದನ್ನು ಮಾಡಬಾರದು. ಎಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಮುಂದೆ ನಡೆಯಬೇಕು ಎಂದು ತಿಳಿಸಿದರು.
'ಸದಾನಂದ ಗೌಡ ರಾಜೀನಾಮೆ : ಮುಂದೆ ಕಾದಿದೆ ದೊಡ್ಡ ಹುದ್ದೆ' .
ನನ್ನ ಸ್ವಾಗತಕ್ಕೆ 4 ಸಾವಿರ ಜನ ಬಂದಿದ್ದರು
ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಎಲ್ಲದಕ್ಕೂ ನಮ್ಮ ಕೆಲಸದ ಮೂಲಕವೇ ಉತ್ತರ ಕೊಡಬೇಕು. ನಾನು ಏರ್‌ಪೋರ್ಟ್‌ಗೆ ಬಂದಾಗ ಸ್ವಾಗತ ಮಾಡೋಕೆ ನಾಲ್ಕು ಸಾವಿರ ಜನ ಬಂದಿದ್ರು. ಇದಕ್ಕಿಂತ ದೊಡ್ಡ ಸಂಪಾದನೆ ಏನಿದೆ? ಎಲ್ಲ ಟೀಕೆಗಳಿಗೂ ಇದೇ ಉತ್ತರ.
- ಡಿ.ವಿ.ಸದಾನಂದಗೌಡ, ಮಾಜಿ ಕೇಂದ್ರ ಸಚಿವ