
ಮಂಗಳೂರು (ಜು.14): ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ನಾನು ಮತ್ತು ಮಹಮ್ಮದ್ ಹ್ಯಾರಿಸ್ ನಲಪಾಡ್ ಎಂಬ ಯಾವುದೇ ಬಣಗಳಿಲ್ಲ. ಹಿರಿಯ ನಾಯಕರು ಒಂದು ತಿಂಗಳ ಮಟ್ಟಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಅದೇ ರೀತಿ 3 ತಿಂಗಳು, ಆರು ತಿಂಗಳು, 2 ವರ್ಷ ನೀಡಿದರೂ ಸೇವೆಗೆ ಸಿದ್ಧ ಎಂದು ಯುವ ಕಾಂಗ್ರೆಸ್‌ನ ನೂತನ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಲಪಾಡ್ ಅವರೊಂದಿಗೆ ನನ್ನ ಸ್ನೇಹ 12 ವರ್ಷಗಳಷ್ಟು ಹಳೆಯದು. ಇನ್ನೂ 20 ವರ್ಷ ಹೋದರೂ ಆ ಸ್ನೇಹ ಮುಂದುವರಿಯಲಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದ ತೀರ್ಮಾನ ಆಗುವವರೆಗೂ ಸ್ವಲ್ಪ ಗೊಂದಲ ಇದ್ದದ್ದು ನಿಜ. ಆದರೆ ಹಿರಿಯ ನಾಯಕರು ನಿರ್ಧಾರ ಪ್ರಕಟಿಸಿದ ಬಳಿಕ ಈಗ ಯಾವ ಗೊಂದಲವೂ ಇಲ್ಲ. ಜನವರಿ ನಂತರ ನಳಪಾಡ್ ಯುವ ಕಾಂಗ್ರೆಸ್ ಉಸ್ತುವಾರಿ ವಹಿಸಲಿದ್ದಾರೆ ಎಂದರು.
ನಲಪಾಡ್ ಹೇಳಿಕೆಗೆ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ತಿರುಗೇಟು ...
ಇತ್ತೀಚೆಗೆ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಬಾಯಿ ತಪ್ಪಿ ಹೇಳಿರಬೇಕು. ಯುವ ಕಾಂಗ್ರೆಸ್‌ನ ಕೆಲಸ ಅದಲ್ಲ. ಪಕ್ಷವನ್ನು ಸಂಘಟಿಸುವುದಷ್ಟೇ ಯುವ ಕಾಂಗ್ರೆಸ್‌ನ ಮುಖ್ಯ ಉದ್ದೇಶ. ಸಿಎಂ ಯಾರೆಂದು ನಾವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.