Karnataka Politics : ನಾನು ಮಾಡುವ ಕೆಲಸಕ್ಕೆ ಕೂಲಿ ಕೇಳಿದ್ದೇನೆ - ರೇಣುಕಾಚಾರ್ಯ

By Suvarna News  |  First Published Jan 7, 2022, 2:12 PM IST
  • ಆಗ ನನಗೆ ಮತ ಕೊಡಿ, ಕೈ ಎತ್ತಿ ಎಂದು ಕೇಳಿದ್ದೇನೆ, ಇದು ತಪ್ಪಾ..?
  • ಆರೋಪ ಮಾಡುವವರು ಕೊವೀಡ್ ಬಂದಾಗ ಜನ ಸೇವೆ ಮಾಡುವ ಬದಲು ಎಲ್ಲಿ ಮಾಯವಾಗಿದ್ದರು 

ದಾವಣಗೆರೆ (ಜ.07):   ಮೋದಿಯವರು (Prime Minister Narendra Modi) ತಂದ ಯೋಜನೆ, ಸಾಧನೆ ಜನರ ಮುಂದೆ ಇಟ್ಟಿದ್ದೇನೆ. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಕೆಲಸ ಕಾರ್ಯಗಳನ್ನ ಜನರಿಗೆ ತಿಳಿಸಿದ್ದೇನೆ. ಬೊಮ್ಮಯಿ ರವರ (CM Basavaraj Bommai) ಕೆಲಸ ಕಾರ್ಯಗಳನ್ನ ಜನರಿಗೆ ತಿಳಿಸಿದ್ದೇನೆ. ನಾನು ಹೊನ್ನಾಳಿ- ನ್ಯಾಮತಿ ಕ್ಷೇತ್ರದಲ್ಲಿ  ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಆರೋಪಕ್ಕೆ ಎಂ ಪಿ ರೇಣುಕಾಚಾರ್ಯ (MP Renukacharya) ತಿರುಗೇಟು ನೀಡಿದ್ದಾರೆ. 

ವಿವಿಧ ಯೋಜನೆಗಳ ಆದೇಶ ಪತ್ರ ಕೊಡುವ ಕಾರ್ಯಕ್ರಮ ಮಾಡಿದ್ದೆ. ಆಗ ನನಗೆ ಮತ ಕೊಡಿ, ಕೈ ಎತ್ತಿ ಎಂದು ಕೇಳಿದ್ದೇನೆ, ಇದು ತಪ್ಪಾ..? ಎಳೆಯುವ ಎತ್ತಿಗೆ ಮೇವು ಹಾಕಿ ಅಂತ ಕೇಳಿದ್ದೇನೆ. ಕೊರೊನಾದಿಂದ (Corona) ಮೃತ ಪಟ್ಟವರಿಗೆ ತಲಾ 10 ಸಾವಿರ ಕೊಟ್ಟಿದ್ದೆ. 10 ಸಾವಿರ ಕೊಡುವ ವಿಡಿಯೋ ವೈರಲ್ ಆಗಿದೆ ಎನ್ನುವವರು ಕೊವೀಡ್ ಬಂದಾಗ ಜನ ಸೇವೆ ಮಾಡುವ ಬದಲು ಎಲ್ಲಿ ಮಾಯವಾಗಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

ಜಾತಿ ರಾಜಕಾರಣ ಮಾಡಬೇಡಿ. ಹಣ ಕೊಡುತ್ತೇನೆ ಎಂದು ಹೇಳಿದ್ದೆ. ಅದರಂತೆ ನಡೆದುಕೊಂಡು ಹಣ ಕೊಟ್ಟಿದ್ದೇನೆ. ಮನೆ ಬಿದ್ದವರಿಗೂ ಹಣ ಕೊಟ್ಟಿದ್ದೇನೆ. ನನ್ನ ಕೈಯಲಾದ ಸಹಾಯ ಮಾಡಿದ್ದೇನೆ. ಇಂತಹ ಆರೋಪಕ್ಕೆ ನಾನು ಜಗ್ಗಲ್ಲ.  ಯಡಿಯೂರಪ್ಪ , ಮೋದಿ ಹಾಗೂ ಬಸವರಾಜ್ ಬೊಮ್ಮಯಿ ಸಾಧನೆ ಜನರಿಗೆ ಹೇಳಿದ್ದೇನೆ. ನಾನು ಮಾಡುವ ಕೆಲಸಕ್ಕೆ ಜನರಿಂದ ಕೂಲಿ ಕೇಳಿದ್ದೇನೆ. ಅದು  ಜನರು ನನಗೆ ನೀಡುವ ಆಶೀರ್ವಾದ. ನನ್ನ ಮೇಲೆ ಆರೋಪ ಮಾಡುವವರಿಗೆ  ಜನರೇ ಉತ್ತರ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು. 

ರೇಣುಕಾಚಾರ್ಯ ಮೇಲೆ ಆರೋಪ : 2023 ರ ಚುನಾವಣೆಗೆ ಸಚಿವ ರೇಣುಕಾಚಾರ್ಯ (Renukacharya) ತಯಾರಿ ನಡೆಸುತ್ತಿದ್ದು,  ಕೊರೋನಾ ಸೋಂಕಿತರಿಗೆ 10 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ದರು.  ಅಲ್ಲದೆ ಬೊಮ್ಮಾಯಿ (CM Bommai) ಸರ್ಕಾರ 1 ಲಕ್ಷ ಪರಿಹಾರ ಹಣ ನೀಡುತ್ತಿದೆ. ನಾನು ನಿಮಗೆ 10 ಸಾವಿರ ಹಣವನ್ನು ವೈಯಕ್ತಿಕವಾಗಿ ನೀಡುತ್ತೇನೆ. ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕು' ಎಂದು ಷರತ್ತು ಹಾಕಿದ್ದರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಮನೆ ಬಳಿ ಜನರನ್ನು ಕರೆಸಿಕೊಂಡು ಆಣೆ ಮಾಡಿಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾಜಿ ಶಾಸಕ ಶಾಂತನಗೌಡ  ರೇಣುಕಾಚಾರ್ಯ ಜನರಿಗೆ ಹಣದ ಆಮಿಷ ಒಡ್ಡಿ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. 

ಕೋವಿಡ್ ಮೃತರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ :  

ಕೋವಿಡ್‌ನಿಂದ (Covid 19) ಮೃತಪಟ್ಟಕುಟುಂಬಕ್ಕೆ ಕೇಂದ್ರ ಸರ್ಕಾರ 50 ಸಾವಿರ ರು., ರಾಜ್ಯ ಸರ್ಕಾರ (Karnataka Govt) ಒಂದು ಲಕ್ಷ ಪರಿಹಾರ ನೀಡುತ್ತಿದ್ದು, ತಾನೂ ವೈಯಕ್ತಿಕವಾಗಿ ಹತ್ತು ಸಾವಿರ ಪರಿಹಾರ ನೀಡುತ್ತಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಘೋಷಿಸಿದ್ದಾರೆ.  ನ್ಯಾಮತಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ನಂತರ ಕೋವಿಡ್‌ನಿಂದ (Covid) ಮೃತಪಟ್ಟನಾಲ್ಕು ಕುಟುಂಬಕ್ಕೆ ರಾಜ್ಯ ಸರ್ಕಾರ (Karnataka Govt) ನೀಡುವ ಒಂದು ಲಕ್ಷದ ಪರಿಹಾರದ ಚೆಕ್‌ ವಿತರಿಸಿ ಮಾತನಾಡಿದರು.

ಕೋವಿಡ್‌ನಿಂದ ಮೃತಪಟ್ಟಸುಮಾರು 20 ಕ್ಕೂ ಹೆಚ್ಚು ಕುಟುಂಬಳಿಗೆ ಈಗಾಗಲೇ ವೈಯಕ್ತಿಕವಾಗಿ ಹತ್ತು ಸಾವಿರ ಧನ ಸಹಾಯ ಮಾಡಿದ್ದು, ಅಧಿವೇಶನ ಮುಗಿದನಂತರ ಉಳಿದ ಕುಟುಂಬಗಳಿಗೆ (Family) ವಿತರಿಸುವುದಾಗಿ ಹೇಳಿದರು.

ಹೊನ್ನಾಳಿ ತಾಲೂಕಿನಲ್ಲಿ ಕೋವಿಡ್‌ನಿಂದ (Covid) ಮೃತಪಟ್ಟ37 ಜನರಿಗೆ ಪರಿಹಾರ ಚೆಕ್‌ಗಳನ್ನು ನೀಡಿದ್ದು, ನ್ಯಾಮತಿ ತಾಲೂಕಿನಲ್ಲಿ 126 ಅರ್ಜಿಗಳು ಬಂದಿವೆ, ಅದರಲ್ಲಿ ನಾಲ್ಕು ಜನರಿಗೆ ಇಂದು ಪರಿಹಾರದ ಚೆಕ್‌ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಪರಿಹಾರದ ಚೆಕ್‌ ನೀಡಲಾಗುವುದು ಎಂದರು.

ನ್ಯಾಮತಿ ಪಪಂ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕರಿಂದ (Publics) ಸಾಕಷ್ಟುದೂರು ಕೇಳಿ ಬರುತ್ತಿದ್ದು ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ ರೇಣುಕಾ, ಉಪತಹಸೀಲ್ದಾರ್‌ ನಾಗರಾಜ್‌, ಪಪಂ ಮುಖ್ಯಾಧಿಕಾರಿ ಕೋಟ್ರೇಶ್‌, ಎಂಜಿನಿಯರ್‌ ಶಶಿಧರ್‌, ಜಿಪಂ ಮಾಜಿ ಸದಸ್ಯೆ ಉಮಾ ರಮೇಶ್‌, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಪಿ.ರವಿಕುಮಾರ್‌ ಮೊದಲಾದವರಿದ್ದರು.

click me!