ದಿಲ್ಲಿಯಲ್ಲಿ ಸಾಹುಕಾರ, RSS ಮುಖಂಡರೊಬ್ಬರ ಮನೆಯಲ್ಲಿ ಮಹತ್ವದ ಚರ್ಚೆ

By Suvarna NewsFirst Published Jun 29, 2021, 7:15 PM IST
Highlights

*  ರಾಜಧಾನಿ ದೆಹಲಿ ತಲುಪಿದ ಮಾಜಿ ಸಚಿವ, ರಮೇಶ್ ಜಾರಕಿಹೊಳಿ
* ಮಹಾರಾಷ್ಟ್ರದ  ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ
* ಆರ್‌ಎಸ್‌ಎಸ್ ಮುಖಂಡರೊಬ್ಬರ‌ ಮನೆಯಲ್ಲಿ 45 ನಿಮಿಷಗಳ ಕಾಲ ಚರ್ಚೆ

ಬೆಂಗಳೂರು/ನವದೆಹಲಿ, (ಜೂನ್.29):  ರಾತ್ರಿ 2ಗಂಟೆ ಬಂದ ಕರೆ ಮೇರೆಗೆ ದೆಹಲಿಗೆ ಬಂದಿದ್ದೇನೆ ಎಂದಿರುವ ಮಾಜಿ ಸಚಿವ, ರಮೇಶ್ ಜಾರಕಿಹೊಳಿ ಅವರು  ಆರ್ ಎಸ್ ಎಸ್ ಮುಖಂಡರೊಬ್ಬರ ನಿವಾಸದಲ್ಲಿ ಸಭೆ ಮಾಡಿದ್ದಾರೆ.

ಹೌದು...ರಮೇಶ್ ಜಾರಕಿಹೊಳಿ ಇಂದು (ಮಂಗಳವಾರ)  ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಅಲ್ಲಿ  ಮಹಾರಾಷ್ಟ್ರದ  ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ.  

ಬಿಜೆಪಿಯ ಮೂವರಿಗೆ ಪಾಠ ಕಲಿಸುತ್ತೇನೆ: ದಿಲ್ಲಿಯಲ್ಲಿ ರಮೇಶ್ ಜಾರಕಿಹೊಳಿ ಹೊಸ ಬಾಂಬ್

ಆರ್‌ಎಸ್‌ಎಸ್ ಮುಖಂಡರೊಬ್ಬರ‌ ಮನೆಯಲ್ಲಿ ಭೇಟಿಯಾಗಿ ಸುಮಾರು  45 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ ದೆಹಲಿ ಭೇಟಿಯ ವೇಳೆ ಇನ್ನು ಹಲವು ಬಿಜೆಪಿಯ  ಮುಖಂಡರನ್ನು ಭೇಟಿ ಮಾಡುವ ಸಾಧ್ಯತೆ ಎಂದು ತಿಳಿದುಬಂದಿದೆ.

ಈ ಮೊದಲು ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಾಹುಕಾರ, ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ. ಮೂವರ ಹೆಸರನ್ನು ಬಹಿರಂಗ ಮಾಡುವ ಸಮಯ ಬರುತ್ತದೆ. ಜೊತೆಯಲ್ಲಿದ್ದೇ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಬಿದ್ದವನ ಮೇಲೆ ಆಳಿಗೊಂದು ಕಲ್ಲು ಹೊಡೆಯುತ್ತಿದ್ದಾರೆ. ಎಲ್ಲರ ಷಡ್ಯಂತ ಬಯಲಿಗೆಳೆಯುವ ಕಾಲ ಬಂದೆ ಬರಲಿದೆ ಎಂದು ಸ್ವಪಕ್ಷಿಯ ವಿರುದ್ದವೇ ಹೆಚ್ಚು ಅಸಮಧಾನ ವ್ಯಕ್ತಪಡಿಸಿದ್ದರು.

ಹೊಸ ಆಟ ಶುರು ಮಾಡಿದ ಸಾಹುಕಾರ್, ಮಂತ್ರಿ ಸ್ಥಾನ ಮರು ಪಡೆಯಲು ಕಸರತ್ತು..? 

ಇದೀಗ  ತಮ್ಮ ಮೇಲೆ ದ್ವೇಷ ಸಾಧಿಸುತ್ತಿರುವವರಿಗೆ ರಮೇಶ್ ಜಾಕಿಹೊಳಿ ಹೈಕಮಾಂಡ್ ಮೂಲಕ ತಿರುಗೇಟು ನೀಡಲು ತೊಡೆತಟ್ಟಿ ನಿಂತಿರುವುದು ಮೇಲ್ನೋಟಕ್ಕೆ ಕಂಡುಬಂರುತ್ತಿದೆ.

ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನ ಭೇಟಿ ಮಾಡಿದ್ದು, ಅವರ  ಸಲಹೆಯಂತೆ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. 

ಒಟ್ಟಿನಲ್ಲಿ ಸದ್ಯ ರಮೇಶ್ ಜಾರಕಿಹೊಳಿ ರಾಜಕೀಯ ನಡೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. 

click me!