
ಬೆಂಗಳೂರು, (ಫೆ.02): ರಾಜ್ಯ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಸರ್ಕಾರ ರಚನೆಯಾಗಿನಿಂದಲೂ ರಾಜ್ಯ ಬಿಜೆಪಿ ಪದೇ-ಪದೇ ಯತ್ನಿಸಿ ವಿಫಲವಾಗುತ್ತಿದೆ.ಆದರೂ ತನ್ನ ಪಟ್ಟು ಸಡಿಸದ ಬಜೆಪಿ ಮತ್ತೆ ಶತಾಯಗತಾವಾಗಿ ಸರ್ಕಾರವನ್ನು ರಚಿಸಲು ಕಸರತ್ತು ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಇಂದು (ಶನಿವಾರ) ಆರ್.ಅಶೋಕ್ ನೀಡಿರುವ ಹೇಳಿಕೆ.
"
ಆಪರೇಷನ್ ಕಮಲದಲ್ಲಿ ಅಶ್ವಥ್ ನಾರಾಯಣ್ ಹೆಸರು : ಸಂಪರ್ಕಿಸಿದ ಶಾಸಕ ಯಾರು..?
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ 'ಅಶೋಕ್, ನಾವು ಸನ್ಯಾಸಿಗಳಲ್ಲ. ರಾಜಕೀಯ ಮಾಡಲಿಕ್ಕೆ ನಾವು ಇಲ್ಲಿರೋದು . 104 ಸ್ಥಾನಗಳನ್ನ ಜನ ನಮಗೆ ಕೊಟ್ಟಿದ್ದಾರೆ.
ಹೀಗಿರುವಾಗ 104 ಸ್ಥಾನವನ್ನ ನೀಡಿ ಜನ ಬೆಂಬಲ ಹೊಂದಿರುವ ನಾವು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದ ಅವರು ಕುಮಾರಸ್ವಾಮಿ ಬಜೆಟ್ ಮಂಡಿಸೋದು ಡೌಟ್ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.
'ಈಗ 104 ರಿಂದ 106 ಕ್ಕೆ ಪಕ್ಷೇತರರ ಬೆಂಬಲದಿಂದ ನಮ್ಮ ಬಲ ಹೆಚ್ಚಿದೆ. ಸರ್ಕಾರ ರಚಿಸಲು ನಾವು ಪ್ರಯತ್ನ ಮಾಡ್ತೇವೆ. ಜನ ಬೆಂಬಲವಿಲ್ಲದ 37 ಸ್ಥಾನ ಪಡೆದವರೇ ಸಿಎಂ ಆಗಿದ್ದಾರೆ.
ಹೀಗಿರುವಾಗ 104 ಸ್ಥಾನವನ್ನ ಹೊಂದಿರುವ ನಾವು ನಾವು ಸರ್ಕಾರ ರಚಿಸಲು ಪ್ರಯತ್ನಿಸೋದರಲ್ಲಿ ತಪ್ಪೇನಿದೆ. ಹೆಚ್ಚಿನ ಜನ ಬೆಂಬಲ ಹೊಂದಿರೋದು ಬಿಜೆಪಿ ಪಕ್ಷ.
ಹೀಗಾಗಿ ಜನಪರವಾದ ಸರ್ಕಾರ ರಚನೆಗೆ ನಾವು ಮುಂದಾಗಲಿದ್ದೇವೆ ಎಂದು ಹೇಳಿರುವುದು ಪರೋಕ್ಷವಾಗಿ ಮೈತ್ರಿ ಸರ್ಕಾರವನ್ನು ಉರುಳಿಸುವುದಾಗಿ ಹೇಳಿದಂತಿದೆ.
ಇದೇ ಫೆ.08ರಂದು ಕುಮಾರಸ್ವಾಮಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಆದ್ರೆ ಆರ್ . ಅಶೋಕ್ ಅವರು ಈ ರೀತಿ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.