ರಾಜ್ಯದ ಜನರಿಗೆ ಬಿಟ್ಟಿ ಭಾಗ್ಯಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಜನರಿಗೆ ವಿದ್ಯುತ್ ಬರೆ ಎಳೆದಿದೆ. ಕಾಂಗ್ರೆಸ್ ಸರ್ಕಾರ ಬಡವರ ರೈತರ ರಕ್ತಹಿರುತ್ತಿದೆ. ರಾಜ್ಯದ ಜನರ ನೀರಿಕ್ಷೆಯನ್ನು ಹುಸಿಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನರು ಉತ್ತರಿಸಲಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿಗಳ ನಿಜಬಣ್ಣ ಬಯಲಾಗಲಿದೆ ಎಂದ ಪ್ರತಾಪಗೌಡ ಪಾಟೀಲ್
ಮಸ್ಕಿ(ಅ.19): ಕಾಂಗ್ರೆಸ್ ಸರ್ಕಾರ ರೈತ ವಿರೋದಿ ನೀತಿ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಮಸ್ಕಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ ಶಿರಸ್ತೆದಾರ ಸಯ್ಯದ್ ಅಕ್ತರ್ ಅಲಿಗೆ ಮನವಿ ಪತ್ರವನ್ನು ಸಲ್ಲಿಸಿದರು. ನಂತರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ರಾಜ್ಯದ ಜನರಿಗೆ ಬಿಟ್ಟಿ ಭಾಗ್ಯಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಜನರಿಗೆ ವಿದ್ಯುತ್ ಬರೆ ಎಳೆದಿದೆ. ಕಾಂಗ್ರೆಸ್ ಸರ್ಕಾರ ಬಡವರ ರೈತರ ರಕ್ತಹಿರುತ್ತಿದೆ. ರಾಜ್ಯದ ಜನರ ನೀರಿಕ್ಷೆಯನ್ನು ಹುಸಿಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನರು ಉತ್ತರಿಸಲಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿಗಳ ನಿಜಬಣ್ಣ ಬಯಲಾಗಲಿದೆ ಎಂದರು.
ನಂತರ ಮುಖಂಡ ಬಸವಂತರಾಯ ಕುರಿ ಮಾತನಾಡಿ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದಿರುವುದೇ ಲೂಟಿ ಹೊಡೆಯುದಕ್ಕಾಗಿ, ಉದಾರಹಣೆ ಎಂಬಂತೆ ಇತ್ತಿಚಿಗೆ ಐಟಿ ದಾಳಿಯಲ್ಲಿ ಸಿಕ್ಕ 100 ರು. ಕೋಟಿ ಹಣ. ಆದ್ದರಿಂದ ರಾಜ್ಯದ ಜನರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಿ ಎಂದರು.
undefined
ಮಾನ್ವಿ: ಕೌಟುಂಬಿಕ ಕಲಹಕ್ಕೆ ಮನನೊಂದು ಮೊಬೈಲ್ ಟವರ್ ಏರಿ ಕುಳಿತ ಯುವಕ!
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ್, ಮೌನೇಶ ಮುರಾರಿ, ಮೌನೇಶ ನಾಯಕ, ಚೇತನ್ ಪಾಟೀಲ್, ಶರಣಯ್ಯ ಸೊಪ್ಪಿಮಠ, ಸೂಗಣ್ಣ ಬಾಳೆಕಾಯಿ, ನಾಗರಾಜ ಸೇರಿದಂತೆ ಇತರರಿದ್ದರು.
ಬೈಕ್ ರ್‍ಯಾಲಿ:
ಮಸ್ಕಿ ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಿಂದ ಹಳೆಬಸ್ ನಿಲ್ದಾಣದವರೆಗೆ ಬೈಕ್ ರ್‍ಯಾಲಿ ನಡೆಸಿದರು. ನಂತರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ಮುಖಂಡರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ನಡೆಸಿದರು.