ವೀರ ಸಾವರ್ಕರ್ ಅವರಲ್ಲಿದ್ದ ದೇಶಭಕ್ತಿ, ಬುದ್ಧಿ ಶಕ್ತಿಯ ಗುಲಗಂಜಿಯಷ್ಟಾದರು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಬಳಿ ಇಲ್ಲ ಎಂದು ಎಂಎಲ್ಸಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ರಾಯಚೂರು (ಅ.10): ವೀರ ಸಾವರ್ಕರ್ ಅವರಲ್ಲಿದ್ದ ದೇಶಭಕ್ತಿ, ಬುದ್ಧಿ ಶಕ್ತಿಯ ಗುಲಗಂಜಿಯಷ್ಟಾದರು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಬಳಿ ಇಲ್ಲ ಎಂದು ಎಂಎಲ್ಸಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು. ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸಾವರ್ಕರ್ ಬ್ರಿಟೀಷರಿಂದ ಸ್ಟೇಫಂಡ್ ಪಡೆದಿದ್ದಾರೆ ಎಂದು ರಾಗಾ ಹೇಳಿಕೆಗೆ ತಿರುಗೇಟು ನೀಡಿದರು. ವೀರ್ ಸಾರ್ವಕರ್ ಕುರಿತು ರಾಗಾ ಪೂರ್ತಿಯಾಗಿ ತಿಳಿದುಕೊಂಡಿಲ್ಲ. ಒಮ್ಮೆ ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ಕಾಂಗ್ರೆಸ್ಸಿಗರು ಮತ್ತೊಮ್ಮೆ ಅವರು ವೀರರಲ್ಲ ಎಂದು ಹೇಳುತ್ತಾರೆ.
ಇಂದಿರಾ ಗಾಂಧಿ ಸೇರಿ ಹಲವಾರು ಪ್ರಧಾನಿಗಳು ಸಾರ್ವಕರ್ ಅವರನ್ನು ಒಪ್ಪಿಕೊಂಡಿದ್ದಾರೆ. ಜೈಲಿನಿಂದ ಹೌಸ್‌ಹರೆಸ್ಟ್‌ನಲ್ಲಿದ್ದ ಸಾರ್ವಕರ್ ಅವರು ಜೀವನಾಂಶಕ್ಕಾಗಿ ಹಣ ಪಡೆದಿದ್ದಾರೆ ಅದು ಅಂದಿನ ಕಾನೂನಾಗಿತ್ತು ಇದನ್ನರಿಯದ ರಾಗಾ ಇಂತಹ ಹೇಳಿಕೆ ನೀಡುತ್ತಿದ್ದಾರೆ. ದೇಶದಲ್ಲಿ ಈಸ್ಟ್ ಇಂಡಿಯಾ ಕಂಪನಿ ರೀತಿ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ವಿನಃ ಬಿಜೆಪಿಯಲ್ಲ. ಈಗ ದೇಶದಲ್ಲಿ ಇಟಲಿ ಸರ್ಕಾರ ತರಲು ಯತ್ನಿಸುತ್ತಿದ್ದಾರೆ. ರಾಹುಲ್‌ಗಾಂಧಿ ಭಾರತವನ್ನು ಭಾರತವಾಗಿ ಇಡಲು ಯತ್ನಿಸಲಿ ಎಂದರು. ಯತ್ನಾಳ ಹೇಳಿಕೆಗಳಿಗೆ ಮಾನ್ಯತೆ ನೀಡುವ ಅಗತ್ಯವಿಲ್ಲ. ಬಿಎಸ್‌ವೈ ಹೋದಲ್ಲೆಲ್ಲ ಪಕ್ಷ ಗೆದ್ದ ಇತಿಹಾಸವಿದೆ ಎಂದು ಹೇಳಿದರು.
ಕಾಂಗ್ರೆಸ್ ಹಗರಣ ಬಯಲು ಮಾಡ್ತೇವೆ: ವಿಧಾನಪರಿಷತ್ ಸದಸ್ಯ ರವಿಕುಮಾರ್
ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪನೆ: ಶೋಷಿತ ಸಮುದಾಯಗಳಾದ ಎಸ್ಸಿ-ಎಸ್ಟಿಜನರ ಬಹುದಿನಗಳ ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಅದೇ ರೀತಿ ಅಲೆಮಾರಿ ಜನಾಂಗದ ಬೇಡಿಕೆಯಂತೆ ಅಭಿವೃದ್ಧಿ ನಿಗಮವನ್ನು ಸಹ ಶೀಘ್ರದಲ್ಲಿ ಘೋಷಿಸಲಾಗುವುದು ಎಂದರು. ಟಿಪ್ಪು ಹೆಸರನ್ನು ಬಳಸದಿರಲು ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕೆ ಟಿಪ್ಪು ಎಕ್ಸಪ್ರೆಸ್ ಹೆಸರು ಬದಲಿಗೆ ಒಡೆಯರ್ ಎಕ್ಸಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ. ತಾಳಗುಪ್ಪ ಎಕ್ಸಪ್ರೆಸ್‌ಗೆ ಕುವೆಂಪು ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ. ಟಿಪ್ಪು ಸಲ್ತಾನ್ ಮತಾಂಧ. ಹಿಂದು ದೇಗುಲಗಳನ್ನು ಚರ್ಚ್‌ಗಳನ್ನು ಧ್ವಂಸಗೊಳಿಸಿದ್ದಾರೆ ಅಂತವರ ಹೆಸರನ್ನು ಸರ್ಕಾರ ಬಳಸುವುದಿಲ್ಲ ಎಂದು ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು,ಜನಸಂಕಲ್ಪ ಯಾತ್ರೆ ಜೊತೆಗೆ ಅ.30 ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ ನಡೆಸಲಾಗುತ್ತದೆ. ಇದೇ ನ.10ರಂದು ಬೆಂಗಳೂರಿಗೆ ನರೇಂದ್ರ ಮೋದಿಯವರು ಆಗಮಿಸಲಿದ್ದು ಕೆಂಪೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ತಿಪ್ಪರಾಜ್ ಹವಲ್ದಾರ್, ಬಸವನಗೌಡ ಬ್ಯಾಗವಾಟ್, ಮುಖಂಡರಾದ ತ್ರಿವಿಕ್ರಮ ಜೋಶಿ, ಬಸನಗೌಡ ಬ್ಯಾಗವಾಟ್, ಎನ್.ಶಂಕರಪ್ಪ, ಅಚ್ಯುತರೆಡ್ಡಿ, ಶಂಕರಗೌಡ ಮಿರ್ಜಾಪುರ, ಶಂಕರ ರೆಡ್ಡಿ ಇದ್ದರು.
ಮುಸ್ಲಿಂರ 2ಬಿ ಮೀಸಲಾತಿ ತೆಗೆದುಹಾಕಬೇಕು: ಸಂಚಲನ ಸೃಷ್ಟಿಸಿದ ಯತ್ನಾಳ್ ಹೇಳಿಕೆ
ನಾಳೆ ಯಾತ್ರೆಗೆ ಚಾಲನೆ: ರಾಯಚೂರು ತಾಲೂಕಿನ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಿಲ್ಲೆಸುಗೂರು ಗ್ರಾಮದಲ್ಲಿ ಅ.11 ರಂದು ಬಿಜೆಪಿ ಜಲಸಂಕಲ್ಪ ಯಾತ್ರೆಯನ್ನು ಆಯೋಜಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ ಅವರು ಭಾಗವಹಿಸಿ ಮೊದಲ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದುಹಿಂದೆಯೂ ರಾಯಚೂರು ಜಿಲ್ಲೆಯಿಂದಲೆಯೇ ಪಕ್ಷವು ಯಾತ್ರೆಯನ್ನು ಆರಂಭೀಸಿದ್ದು ಅದೇ ರೀತಿ ಇದೀಗ ಗಿಲ್ಲೇಸುಗೂರಿನಿಂದ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಡಿ.25 ವರೆಗೆ ನಡೆಯಲಿರುವ ಯಾತ್ರೆಯಲ್ಲಿ ಸಿಎಂ, ಮಾಜಿ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿನ ತಂಡವು 150 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ನಂತರ ಉಳಿದಂತೆ ಕ್ಷೇತ್ರಗಳಲ್ಲಿ ಯಾತ್ರೆಯನ್ನು ಮಾಡಲಾಗುವುದು.