ರಾಜ್ಯ ರಾಜಕಾರಣದಲ್ಲಿ ಪ್ರತಿ ಚುನಾವಣೆ ವೇಳೆ ಬಳ್ಳಾರಿ ಜಿಲ್ಲೆ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಕಾಕತಾಳೀಯವೋ, ನಂಬಿಕೆಯೋ ಗೊತ್ತಿಲ್ಲ ಇಲ್ಲಿಂದ ಚುನಾವಣೆ ಪ್ರಚಾರ ಆರಂಭಿಸಿದ್ರೇ, ಅಥವಾ ಚುನಾವಣೆ ಪೂರ್ವ ಬಳ್ಳಾರಿಯಲ್ಲಿ ಕಾರ್ಯಕ್ರಮ ಮಾಡಿದ್ರೇ ಆ ಪಕ್ಷ ಆಡಳಿತಕ್ಕೆ ಬರುತ್ತದೆ ಎನ್ನುವ ನಂಬಿಕೆ ಇದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಳ್ಳಾರಿ
ಬಳ್ಳಾರಿ (ಅ.10): ರಾಜ್ಯ ರಾಜಕಾರಣದಲ್ಲಿ ಪ್ರತಿ ಚುನಾವಣೆ ವೇಳೆ ಬಳ್ಳಾರಿ ಜಿಲ್ಲೆ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಕಾಕತಾಳೀಯವೋ, ನಂಬಿಕೆಯೋ ಗೊತ್ತಿಲ್ಲ ಇಲ್ಲಿಂದ ಚುನಾವಣೆ ಪ್ರಚಾರ ಆರಂಭಿಸಿದ್ರೇ, ಅಥವಾ ಚುನಾವಣೆ ಪೂರ್ವ ಬಳ್ಳಾರಿಯಲ್ಲಿ ಕಾರ್ಯಕ್ರಮ ಮಾಡಿದ್ರೇ ಆ ಪಕ್ಷ ಆಡಳಿತಕ್ಕೆ ಬರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳು ಸದಾ ಬಳ್ಳಾರಿ ಮೇಲೆ ಕಣ್ಣಿಟ್ಟಿರುತ್ತಾರೆ. ರಾಜ್ಯ ಮತ್ತು ರಾಷ್ಟೀಯ ಮಟ್ಟದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಬಳ್ಳಾರಿ ಯನ್ನು ಕೇಂದ್ರ ಬಿಂದುವನ್ನಾಗಿ ಮಾಡಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಇಪ್ಪತ್ತು ವರ್ಷದಿಂದ ನಡೆದ ಪ್ರತಿ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆ ಸಾಕಷ್ಟು ಮಹತ್ವದ ಪಾತ್ರ ವಹಿಸಿದೆ.
undefined
ಬಳ್ಳಾರಿಯಲ್ಲಿ ಸಾಲು ಸಾಲು ಸಮಾವೇಶದ ಅಬ್ಬರ: ಸದಾ ಒಂದಿಲ್ಲೊಂದು ಚುನಾವಣೆಯಲ್ಲಿ ಅದರಲ್ಲೂ ಬಿಜೆಪಿಗೆ ಸಾಕಷ್ಟು ಪ್ಲಸ್ ಆಗಿರೋ ಅವಳಿ ಜಿಲ್ಲೆಯಿಂದಲೇ ಈ ಬಾರಿ ಬಿಜೆಪಿ ಬೃಹತ್ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡ್ತಿದೆ. ಇದನ್ನು ಚುನಾವಣೆ ಪ್ರಚಾರದ ಭಾಗವಾಗಿ ಮಾಡ್ತಿರೋ ಕಾರ್ಯಕ್ರಮ ಎನ್ನಲಾಗ್ತಿದೆ. ಅಕ್ಟೋಬರ್ 12 ರಿಂದ ಎರಡು ದಿನಗಳ ಕಾಲ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಿಂದಲೇ ಮುಖ್ಯಮಂತ್ರಿ ಬೊಮ್ಮಯಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಮೂರು ಸಮಾವೇಶ ಮಾಡಲಿದ್ದಾರೆ. 12ನೇ ತಾರೀಖು ಹೊಸಪೇಟೆಯಲ್ಲಿ 13ನೇ ತಾರೀಖು ಹಡಗಲಿ ಮತ್ತು ಸಿರಗುಪ್ಪದಲ್ಲಿ ಬಿಜೆಪಿ ಸಾಧನಾ ಸಮಾವೇಶ ಮಾಡಲಿದೆ. ಈ ಮೂಲಕ ಕಳೆದ ಮೂರು ವರ್ಷದಲ್ಲಿ ಸರ್ಕಾರ ಮಾಡಿರೋ ಸಾಧನೆ ಜನರಿಗೆ ವಿವರಣೆ ನೀಡೋ ಮೂಲಕ ಅನಧಿಕೃತವಾಗಿಯೇ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ.
ಬಿಜೆಪಿಯೆಂದರೆ ಅಭಿವೃದ್ಧಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ: ಸಚಿವ ಶ್ರೀರಾಮುಲು
ಬಿಜೆಪಿ ಬಳಿಕ ಕಾಂಗ್ರೆಸ್ ಸಮಾವೇಶ: ಇನ್ನೂ ಬಿಜೆಪಿಯ ಎರಡು ದಿನದ ಸಮಾವೇಶದ ಅಬ್ಬರದ ಬಳಿಕ ಮಾರನೇ ದಿನವೇ ರಾಹುಲ್ ಪಾದಯಾತ್ರೆ ಬಳ್ಳಾರಿಗೆ ಆಗಮಿಸಲಿದ್ದು, 15ನೇ ತಾರೀಖು ರಾಹುಲ್ ಗಾಂಧಿ ನೇತೃತ್ವದಲ್ಲಿ ದೊಡ್ಡ ಸಮಾವೇಶ ನಡೆಯುತ್ತಿದೆ. ಈ ಹಿಂದೆಯೂ ಅಂದ್ರೇ 2010ರಲ್ಲಿ ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡೋ ಮೂಲಕ 2013ರಲ್ಲಿ ಕಾಂಗ್ರೆಸ್ ಪ್ಲಸ್ ಪಾಯಿಂಟ್ ಮಾಡಿಕೊಂಡಿತ್ತು. ಇದೀಗ ರಾಹುಲ್ ಪಾದಯಾತ್ರೆ ಮೂಲಕ 2023ರ ಚುನಾವಣೆಗೆ ಕಾಂಗ್ರೆಸ್ ವೇದಿಕೆ ಮಾಡಿಕೊಳ್ಳುತ್ತಿದೆ
ಬಳ್ಳಾರಿ ಚುನಾವಣೆ ವೇಳೆ ಏಕೆ ಕೇಂದ್ರ ಬಿಂದುವಾಗ್ತಿದೆ: 1999ರಿಂದಲೂ ಬಳ್ಳಾರಿ ರಾಜ್ಯರಾಜಕಾರಣದ ಚುನಾವಣೆ ದಿಕ್ಸೂಚಿಯಾಗಿದೆ. ಹೌದು, ರಾಷ್ಟ್ರ ರಾಜಕಾರಣದಲ್ಲಿ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ನ ಅದಿನಾಯಕಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿದ್ರು. ಅವರು ಕರ್ನಾಟಕಕ್ಕೆ ಬಂದ ಕೂಡಲೇ ಅವರನ್ನು ಕಟ್ಟಿ ಹಾಕಬೇಕೆಂದು ಬಿಜೆಪಿಯ ಸುಷ್ಮ ಸ್ವರಾಜ್ ಕೂಡ ಬಳ್ಳಾರಿಗೆ ಕಾಲಿಟ್ಟರು. ಇದರಿಂದ ಇಡೀ ದೇಶದ ಗಮನ ಸೆಳೆದ ಬಳ್ಳಾರಿ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿತ್ತು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. 1999 ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದ್ರು, 2004ರಲ್ಲಿ ಪುಟಿದೆದ್ದಿತ್ತು. 2004-2008ರವರೆಗೂ ಇದ್ದ ಎರಡು ಸಮ್ಮಿಶ್ರ ಸರ್ಕಾರದಲ್ಲಿ ಬಳ್ಳಾರಿಯ ರೆಡ್ಡಿಗಳು ಮಹತ್ವದ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಮೇಲೆ ನೂರೈವತ್ತು ಕೋಟಿ ಹಗರದ ಆರೋಪ ಮಾಡೋ ಮೂಲಕ ಮತ್ತೊಮ್ಮೆ ಬಳ್ಳಾರಿ ರಾಜಕಾರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು.
2008, 2013, 2018 ಮತ್ತು 2019ರಲ್ಲಿ ಬಳ್ಳಾರಿ ಚುನಾವಣೆ ಸದ್ದು ಮಾಡಿತ್ತು: ಇನ್ನೂ 2009ರ ಫಲಿತಾಂಶ ಬಿಜೆಪಿ ಪರವಾಗಿ ಬಂದಿದ್ರು ಸಂಪೂರ್ಣ ಬಹುಮತ ಇರಲಿಲ್ಲ. ಹೀಗಾಗಿ 2008 ಅತಂತ್ರ ಸರ್ಕಾರದ ರಚನೆಗೆ ಬಳ್ಳಾರಿ ಮತ್ತದೇ ರೆಡ್ಡಿಗಳು ಪ್ರಮುಖ ಪಾತ್ರ ವಹಿಸಿ ಸರ್ಕಾರ ರಚನೆ ಮಾಡಿದರು. ಆಗ ಬಳ್ಳಾರಿ- ವಿಜಯನಗರದ ಹತ್ತು ಕ್ಷೇತ್ರದ ಪೈಕಿ 9 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರೋದು ಇತಿಹಾಸವಾಗಿತ್ತು. ಇದಾದ ಬಳಿಕ ಅಕ್ರಮ ಗಣಿಗಾರಿಕೆ ಹೆಸರಲ್ಲಿ 2010ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೆಂಗಳೂರಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿತ್ತು. ಇದರ ಇಂಪ್ಯಾಕ್ಟ್ 2013 ಕಾಂಗ್ರೆಸ್ ಸರ್ಕಾರ ಬಂತು ಎನ್ನುವದು ರಾಜಕೀಯ ಲೆಕ್ಕಾಚಾರ.
ನಾನು ಬಳ್ಳಾರಿಯಲ್ಲಿರಲು ಸುಪ್ರೀಂಕೋರ್ಟ್ ಒಪ್ಪಿದೆ: ಜನಾರ್ದನ ರೆಡ್ಡಿ
ಇನ್ನೂ 2013ರಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ 2018 ಚುನಾವಣೆ ವೇಳೆ ಬಳ್ಳಾರಿಯ ಆನಂದ ಸಿಂಗ್, ನಾಗೇಂದ್ರ, ಭೀಮಾನಾಯ್ಕ್ ( ಜೆಡಿಎಸ್) ಸೇರಿದಂತೆ ಹಲವು ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ರು. ಇದರಿಂದ ರಾಜ್ಯದಲ್ಲಿ ಕಾರಣ ಅತಂತ್ರ ಫಲಿತಾಂಶ ಬಂತು. ಜೆಡಿಎಸ್ ಜೊತೆಗೆ ಹೊಂದಾಣಿಕೆ ಸರ್ಕಾರ ರಚನೆ ಮಾಡಿದ್ರು ಅದು ಹೆಚ್ಚು ದಿನ ಉಳಿಯಲಿಲ್ಲ. ಆಗ ಮತ್ತದೆ ಬಳ್ಳಾರಿಯ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಕೈಕೊಟ್ಟರು. 2019ರಲ್ಲಿ ಶಾಸಕ ಆನಂದ ಸಿಂಗ್ (ಹೊಸಪೇಟೆ ಕ್ಷೇತ್ರ) ರಾಜೀನಾಮೆ ನೀಡೋ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿ ಹಾಡಿದ್ರು. ಆಗ 2019ರಲ್ಲಿ ನಡೆದ ಉಪಚುನಾವಣೆ ವೇಳೆ ಆನಂದ ಸಿಂಗ್ ಗೆಲ್ಲೋ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಹೀಗೆ ಪ್ರತಿ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆ ಮಹತ್ವದ ಪಾತ್ರ ವಹಿಸಿದೆ.