Hosapete: ಆನಂದ ಸಿಂಗ್ ನಡೆಗೆ ರಾಜಕೀಯ ಅಸ್ತಿತ್ವ‌ವನ್ನೇ ಕಳೆದುಕೊಂಡ ಬಿಜೆಪಿ ನಾಯಕ..!

By Girish Goudar  |  First Published Apr 1, 2022, 12:50 PM IST

*  ಸ್ವಪಕ್ಷದಲ್ಲಿಯೇ ಹುಟ್ಟಿದ್ದಾರೆ ಸಚಿವ ಆನಂದ ಸಿಂಗ್‌ಗೆ ಎದುರಾಳಿ
*  2023 ಚುನಾವಣೆ ಸ್ಪರ್ಧೆ ಮಾಡೇ ಮಾಡ್ತೇನೆ
*  ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಗವಿಯಪ್ಪ
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ವಿಜಯನಗರ

ವಿಜಯನಗರ(ಏ.01):  ರಾಜಕೀಯವೇ(Politics) ಹಾಗೇ ಇವತ್ತು ಈ ಪಕ್ಷದಲ್ಲಿ ಇದ್ದವರು ನಾಳೆ ಮತ್ತೊಂದು ಪಕ್ಷದಲ್ಲಿ ಇರುತ್ತಾರೆ. ಹೀಗೆ ಪಕ್ಷಾಂತರ ಮಾಡೋ ನಾಯಕರಿಂದ ಕೆಲವೊಮ್ಮೆ ಎದುರಾಳಿಗಳು ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಹೊಸಪೇಟೆ ಮಾಜಿ ಶಾಸಕ ಗವಿಯಪ್ಪ. ಹೌದು, ಸಚಿವ ಆನಂದ್‌ ಸಿಂಗ್ ಅವರ ರಾಜಕೀಯ ಚದುರಂಗದಾಟಕ್ಕೆ ಗವಿಯಪ್ಪ ತಮ್ಮ ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ

Tap to resize

Latest Videos

undefined

ಆನಂದ್‌ ಸಿಂಗ್ ವಿರುದ್ಧ ಹರಿಹಾಯ್ದ ಸ್ವಪಕ್ಷೀಯ ನಾಯಕ ಗವಿಯಪ್ಪ

ಬಿಜೆಪಿ(BJP) ಪಕ್ಷ ಮತ್ತು ಸಚಿವ ಆನಂದ್‌ ಸಿಂಗ್(Anand Singh) ವಿರುದ್ಧ ಹೊಸಪೇಟೆ(Hosapete) ಮಾಜಿ ಶಾಸಕ ಗವಿಯಪ್ಪ(Gaviyappa) ಸಿಡಿದೆದ್ದಿದ್ದಾರೆ. ಕಾಂಗ್ರೆಸ್(Congress) ಪಕ್ಷದಲ್ಲಿದ್ದ ಗವಿಯಪ್ಪ 2018ರಲ್ಲಿ ಆನಂದ್‌ ಸಿಂಗ್ ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿಗೆ ಬಂದು ಆನಂದ್‌ ಸಿಂಗ್ ವಿರುದ್ಧ ಸೋತ್ರು. ಬಳಿಕ 2019ರಲ್ಲಿ‌ ಮತ್ತೆ ಆನಂದ್‌ ಸಿಂಗ್ ರಾಜೀನಾಮೆ ನೀಡಿ ಬಿಜೆಪಿ ಬಂದು ಟಿಕೆಟ್ ಪಡೆದು ಗೆದ್ರು. ಇದರಿಂದಾಗಿ ಅತ್ತ ಕಾಂಗ್ರೆಸ್ ಇತ್ತ ಬಿಜೆಪಿಯಲ್ಲಿ ಅತಂತ್ರರಾಗಿರೋ ಗವಿಯಪ್ಪ ಇದೀಗ ಸಿಡಿದೆದ್ದಿದ್ದಾರೆ.

Ankola: ಬೇಲೆಕೇರಿ ಅದಿರು ನಾಪತ್ತೆ: ಸಚಿವ ಆನಂದ್‌ಸಿಂಗ್‌, ರೆಡ್ಡಿಗೆ ಜಾಮೀನು

ನಾನು ಉಪ ಚುನಾವಣೆಯಲ್ಲಿ(Byelection) ಸ್ಪರ್ಧೆ ಮಾಡದೇ ತಪ್ಪು ಮಾಡಿರುವೆ. ಜನ ಬಯಸಿದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿದರೂ ಕಣಕ್ಕೆ ಇಳಿಯಬೇಕಿತ್ತು ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ..
2023ರಲ್ಲಿ ಚುನಾವಣೆ ಸ್ಪರ್ಧೆ ಮಾಡೋದು ಪಕ್ಕಾ ಯಾವ ಪಕ್ಷ ಅನ್ನೋದು ಗೊತ್ತಿಲ್ಲ

ರಾಜಕೀಯದಲ್ಲಿ ಕರುಣೆ ಎಂಬುದು ಇರಬಾರದು. ಬಿಜೆಪಿ ಟಿಕೆಟ್ ಬಿಟ್ಟುಕೊಟ್ಟು ತಪ್ಪು ಮಾಡಿರುವೆ ಎನ್ನುತ್ತಿರೋ ಗವಿಯಪ್ಪ ಉಪ ಚುನಾವಣೆಯಲ್ಲಿ ಆನಂದ್ ಸಿಂಗ್ ಅವರಿಗೆ ಎಂಎಲ್ಸಿ ಮಾಡಿ, ನನಗೆ ಟಿಕೆಟ್ ನೀಡಿ ಎಂದು ಕೇಳಿಕೊಂಡಿದ್ದೇ ಆದ್ರೇ, ಮುಂದಿನ ಚುನಾವಣೆಗೆ ಅಂದ್ರೇ 2023ರ ಚುನಾವಣೆಯಲ್ಲಿ(Karnataka Assembly Election 2023) ನಿಮಗೆ ಟಿಕೆಟ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದ್ರೇ ಭರವಸೆ ಇಡೇರಿಸೋ ಬಗ್ಗೆ ವಿಶ್ವಸವಿಲ್ಲದಂತಾಗಿದೆ. ರಾಜ್ಯ ಕಾರ್ಯಕಾರಿಣಿ ಸಭೆ ಹೊಸಪೇಟೆಯಲ್ಲೇ ನಡೆಯುತ್ತಿದ್ದರೂ ನನಗೆ ಇದುವರೆಗೆ ಆಹ್ವಾನ ಬಂದಿಲ್ಲ ಅಂತ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ ಗವಿಯಪ್ಪ.

Anand Singh-DKS Meeting: ಡಿಕೆಶಿ ಭೇಟಿ ಮಾಡಿದ್ಯಾಕೆ.? ಆನಂದ್‌ ಸಿಂಗ್ ಸ್ಪಷ್ಟನೆ

2023ರ ಚುನಾವಣೆಗೆ ಸ್ಪರ್ಧೆ ಖಚಿತ 

ಇನ್ನೂ ಮಾಜಿ ಶಾಸಕ ಗವಿಯಪ್ಪ ಅವರ ರಾಜಿ ಇತಿಹಾಸ ನೋಡೋದಾದ್ರೇ 2004 ರಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಗವಿಯಪ್ಪ ಪಕ್ಷೇತರರಾಗಿ ಕಣಕ್ಕಿಳಿದ್ರು ಗೆದ್ದಿದ್ರು. ಬಳಿಕ ಕಾಂಗ್ರೆಸ್ ಸೇರಿಕೊಂಡು 2008 ರಲ್ಲಿ ಆನಂದ್ ಸಿಂಗ್ ವಿರುದ್ಧ ಸೋಲನ್ನು ಒಪ್ಪಿಕೊಂಡರು.‌ ಆದ್ರೇ 2013 ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿತ್ತು.‌ 2018 ರಲ್ಲಿ ಬದಲಾದ ಸನ್ನಿವೇಶದಲ್ಲಿ ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ಸೇರಿದ ಹಿನ್ನೆಲೆ ಗವಿಯಪ್ಪ ಬಿಜೆಪಿ ಬಂದು ಸ್ಪರ್ಧೆ ಮಾಡಿ ಮತ್ತೊಮ್ಮೆ ಆನಂದ್ ಸಿಂಗ್ ವಿರುದ್ಧ ಸೋಲನ್ನು ಅನುಭವಿಸಿದ್ರು. 

ಆದ್ರೇ 2019 ರಲ್ಲಿ ಮತ್ತೊಮ್ಮೆ ಆನಂದ್ ಸಿಂಗ್ ಬಿಜೆಪಿಗೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಾಗ  ಮಾಜಿ ಶಾಸಕ ಗವಿಯಪ್ಪ ಅಕ್ಷರಶಃ ರಾಜಕೀಯ ಅಸ್ತಿತ್ವ ಕಳೆದುಕೊಂಡರು. ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿದ್ರಾಗಲಿ ಅದನ್ನು ನಯವಾಗಿ ನಿರಾಕರಿಸಿದ್ರು. ಇದೀಗ 2023 ಚುನಾವಣೆಗೆ ಸ್ಪರ್ಧಿಸಲು ಒಲವು ತೋರಿದ್ದು  ಯಾವ ಪಕ್ಷದಿಂದ ಅನ್ನೋದನ್ನು ಬಿಜೆಪಿ ನಡೆಯಿಂದ ನಿರ್ಧಾರವಾಗ್ತದೆ ಎನ್ನುತ್ತಿದ್ದಾರೆ. 
 

click me!