ನನ್ನ ಸಾಮರ್ಥ್ಯ ಏನೆಂದು ಚುನಾವಣೆಯಲ್ಲಿ ತೋರಿಸುತ್ತೇನೆ: ಬಿಜೆಪಿ ವಿರುದ್ಧ ತೊಡೆ ತಟ್ಟಿದ ಬಾಬುರಾವ್ ಚಿಂಚನಸೂರು

By Ravi Janekal  |  First Published Mar 23, 2023, 6:32 PM IST

ಖರ್ಗೆಯವರ ಭದ್ರಕೋಟೆಯನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಗೆ ಬಂದಿದ್ದಕ್ಕೆ ಚಿತ್ತಾಪೂರದಲ್ಲಿ ಬಿಜೆಪಿ ಜಿರೋ ಆಗಿದೆ. ಪ್ರಿಯಾಂಕ್ ಖರ್ಗೆ ನಾಮಿನೇಶನ್ ಹಾಕಿದ್ರೆ ಸಾಕು ರಾಜ್ಯದಲ್ಲೇ ಹೈಯೆಸ್ಟ್ ಲೀಡ್‌ನಿಂದ ಗೆಲ್ಲುತ್ತಾರೆ ಎಂದು ಬಾಬುರಾವ್ ಚಿಂಚನಸೂರು ವಿಶ್ವಾಸ ವ್ಯಕ್ತಪಡಿಸಿದರು.


ಕಲಬುರಗಿ (ಮಾ.23) : ಕಳೆದ ವಾರ ಬಿಜೆಪಿಗೆ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಇಂದು ಕಲಬುರಗಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಬಾಬುರಾವ್ ಚಿಂಚನಸೂರ(Baburao Chinchansur)ರನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್(Congress) ಕಾರ್ಯಕರ್ತರು. ಸ್ವಾಗತದ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಾಬುರಾವ್ ಚಿಂಚನಸೂರ, ಮಲ್ಲಿಕಾರ್ಜುನ ಖರ್ಗೆ(Mallikarjun kharge) ದೇಶ ಗುರುತಿಸುವ ಮಟ್ಟಿಗೆ ಬೆಳೆದಿದ್ದಾರೆ. ಖರ್ಗೆ ಭದ್ರ ಕೋಟೆ ಛಿದ್ರ ಛಿದ್ರ ಮಾಡುವುದು ಬಿಜೆಪಿ(BJP) ಗುರಿ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Tap to resize

Latest Videos

undefined

ಕಲ್ಯಾಣ ಕರ್ನಾಟಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಗಾಳ: ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?

 

ಖರ್ಗೆಯವರ ಭದ್ರಕೋಟೆಯನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಗೆ ಬಂದಿದ್ದಕ್ಕೆ ಚಿತ್ತಾಪೂರದಲ್ಲಿ ಬಿಜೆಪಿ ಜಿರೋ ಆಗಿದೆ. ಪ್ರಿಯಾಂಕ್ ಖರ್ಗೆ(Priyank kharge) ನಾಮಿನೇಶನ್ ಹಾಕಿದ್ರೆ ಸಾಕು ರಾಜ್ಯದಲ್ಲೇ ಹೈಯೆಸ್ಟ್ ಲೀಡ್‌ನಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಂಚನಸೂರ ಶಕ್ತಿ ಸಾಮರ್ಥ್ಯ ಏನು ಅನ್ನೋದು ಈ ಚುನಾವಣೆಯಲ್ಲಿ ತೋರಿಸುವೆ ಎಂದು ಬಿಜೆಪಿಗೆ ಸವಾಲು ಹಾಕಿದರು ಇದೇ ವೇಳೆ ಕೋಲಿ ಸಮಾಜ(Koli community)ಎಸ್ಟಿ ಮಾಡುತ್ತೇವೆಂದು ಭರವಸೆ ಕೊಟ್ಟು ಬಿಜೆಪಿಯವರು ಮೋಸ ಮಾಡಿದ್ರು. ನೊಂದು ಕಣ್ಣಿರು ಹಾಕಿ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದೇನೆ ಎಂದರು. 

ಕೋಲಿ ಸಮಾಜ ಎಸ್ಟಿಗೆ ಸೇರಿಸುವ ಸಾಮರ್ಥ್ಯ ಖರ್ಗೆಯವರಿಗಿದೆ:

ಬಿಜೆಪಿ ಪಕ್ಷ ಮಾತು ಕೊಟ್ಟು ಮೋಸ ಮಾಡಿದೆ ಆದರೆ ಕೋಲಿ ಸಮಾಜವನ್ನು ಎಸ್‌ಟಿ ಗೆ ಸೇರಿಸುವ ಸಾಮರ್ಥ್ಯ ಮಲ್ಲಿಕಾರ್ಜುನ ಅವರಿಗೆ ಮಾತ್ರ ಇದೆ ಎಂದರು. ಹೀಗಾಗಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದೊಂದೆ ನನ್ನ ಮುಂದಿನ ಗುರಿ  ಎಂದರು.

ಮಲ್ಲಿಕಾರ್ಜುನ ಖರ್ಗೆಯವರ ಕೈ ಬಲಪಡಿಸಬೇಕು ಖರ್ಗೆ ಭದ್ರಕೋಟೆ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂಬ ಕಾರಣಕ್ಕೆ ನಾನು ಕಾಂಗ್ರೆಸ್ ಸೇರಿರುವೆ ಎಂದ ಅವರು, ನನ್ನದು ತೆರೆದ ಪುಸ್ತಕ. ಅಧಿಕಾರಕ್ಕಾಗಿ ನಾನು ಆಸೆ ಪಟ್ಟವನಲ್ಲ.  ನಾನು ಅವಕಾಶವಾದಿ ಅಲ್ಲ. ನಾನು ಹೋರಾಟಗಾರ ಎಂದರು.

ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ್ದ ಚಿಂಚನಸೂರು ಮತ್ತೆ ಕಾಂಗ್ರೆಸ್ ಸೇರ್ಪಡೆ!

ಈ ವೇಳೆ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದರು. ಬಾಬುರಾವ್ ಚಿಂಚನಸೂರು ಉತ್ತರಿಸಲಾಗದೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ಅರ್ಧಕ್ಕೆ ಎದ್ದು ಹೋದ ಘಟನೆ ನಡೆಯಿತು.

click me!