‘ಭಾರತ್‌ ಜೋಡೋ’ ಮಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ: ಸಿ.ಟಿ.ರವಿ

By Govindaraj S  |  First Published Sep 4, 2022, 5:16 AM IST

ಭಾರತ್‌ ಜೋಡೋ ಅಂತಾ ಈಗ ಹೇಳುತ್ತಿರುವ ದೇಶವನ್ನೇ ಒಡೆದು, ವಿಭಜನೆ ಮಾಡಿದ ಕಾಂಗ್ರೆಸ್ಸಿಗೆ ಇಂತಹ ಕಾರ್ಯಕ್ರಮ ಮಾಡುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.


ದಾವಣಗೆರೆ (ಸೆ.04): ಭಾರತ್‌ ಜೋಡೋ ಅಂತಾ ಈಗ ಹೇಳುತ್ತಿರುವ ದೇಶವನ್ನೇ ಒಡೆದು, ವಿಭಜನೆ ಮಾಡಿದ ಕಾಂಗ್ರೆಸ್ಸಿಗೆ ಇಂತಹ ಕಾರ್ಯಕ್ರಮ ಮಾಡುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಶನಿವಾರ ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ, 3 ದಿನದ ಪ್ರಶಿಕ್ಷಣ ವರ್ಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿನ ನಾಯಕರೇ ಈಗ ಕಾಂಗ್ರೆಸ್‌ ಚೋಡೋ ಕಾರ್ಯಕ್ರಮ ಮಾಡುತ್ತಿದ್ದು, ಇಂತಹ ಕಾಂಗ್ರೆಸ್‌ ಈಗ ಭಾರತ್‌ ಜೋಡೋ ಎನ್ನುತ್ತಿದೆ ಎಂದರು.

ಕಾಂಗ್ರೆಸ್ಸಿನ ಅತ್ಯಂತ ಹಿರಿಯರು, ನಾಲ್ಕೈದು ದಶಕದಿಂದ ಆ ಪಕ್ಷಕ್ಕಾಗಿ ಕೆಲಸ ಮಾಡಿದ ಹಿರಿಯ ನಾಯಕರೇ ಈಗ ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಎನ್ನುತ್ತಿದ್ದರೆ, ಅದೇ ಪಕ್ಷದ ನಾಯಕರು ಕಾಂಗ್ರೆಸ್‌ ಚೋಡೋ ಎಂಬ ಕಾರ್ಯಕ್ರಮ ಮಾಡುತ್ತಾ, ಪಕ್ಷ ಬಿಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಭಾರತ್‌ ಜೋಡೋ ಅನ್ನುವ ಕಾರ್ಯಕ್ರಮ ಹಮ್ಮಿಕೊಳ್ಳುವಷ್ಟುನೈತಿಕತೆಯೇ ಉಳಿದಿಲ್ಲ ಎಂದು ಟೀಕಿಸಿದರು.

Tap to resize

Latest Videos

ನಿಷ್ಪಕ್ಷಪಾತ ತನಿಖೆ, ಎಲ್ಲರಿಗೂ ಒಂದೇ ಕಾನೂನು: ಸಿ.ಟಿ.ರವಿ

ನಮ್ಮ ಕೆಲಸವಲ್ಲ: ಕಾಂಗ್ರೆಸ್‌ ಚೋಡೋ ಕಾರ್ಯಕ್ರಮವನ್ನು ಕಾಂಗ್ರೆಸ್ಸಿನವರೇ ಮಾಡುತ್ತಿದ್ದಾರೆ? ಅದರ ಬಗ್ಗೆ ಕಾಂಗ್ರೆಸ್‌ ಮುಖಂಡರು ಒಮ್ಮೆ ಆಲೋಚಿಸಲಿ. ಕಾಂಗ್ರೆಸ್ಸಿನ ನಾಯಕರು ಚೋಡೋ ಕಾರ್ಯಕ್ರಮ ಯಾಕೆ ನಡೆಸಿದ್ದಾರೆಂಬುದನ್ನು ನೋಡಿಕೊಳ್ಳಬೇಕಾದದ್ದು ಅದೇ ಪಕ್ಷದ ಕೆಲಸ, ನಮ್ಮ ಪಕ್ಷದ ಕೆಲಸವಲ್ಲ ಎಂದು ಭಾರತ್‌ ಜೋಡೋ ಕಾರ್ಯಕ್ರಮಕ್ಕೆ ಕರೆ ನೀಡಿದ ಕಾಂಗ್ರೆಸ್ಸಿಗೆ ಸಿ.ಟಿ.ರವಿ ಟಾಂಗ್‌ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ಎನ್‌.ರಾಜಶೇಖರ ಇತರರು ಇದ್ದರು.

ಬಹುಮತದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ: ವಿಧಾನಸಭೆ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯಾಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನಮ್ಮ ಸಮೀಕ್ಷೆಯಲ್ಲೂ ಹೆಚ್ಚು ಸ್ಥಾನದೊಂದಿಗೆ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸ್ಪಷ್ಟ. ನಮ್ಮದು ಸತ್ಯಕ್ಕೆ ಹತ್ತಿರವಾದಂತಹ ಸಮೀಕ್ಷೆ. ಕಾಂಗ್ರೆಸ್ಸಿನವರದ್ದು ಸತ್ಯಕ್ಕಿಂತಲೂ ದೂರವಾಗಿರುವಂತಹ ಸಮೀಕ್ಷೆಯಾಗಿದೆ ಎಂದರು. 

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಸ್ಪಷ್ಟವಾಗಿ, ಮುಂಚೆಯೇ ಸಮೀಕ್ಷೆಗಳ ಆಧಾರದಲ್ಲಿ ಹೇಳಿದ್ದೆವು. ಅದರಂತೆ ಅಧಿಕಾರಕ್ಕೂ ಬಂದೆವು. ಬಿಜೆಪಿಗೂ, ಕಾಂಗ್ರೆಸ್‌ಗೂ ಇರುವ ವ್ಯತ್ಯಾಸವೇ ಇದು. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇನ್ನೂ ಹೆಚ್ಚು ಸಂಖ್ಯಾ ಬಲದೊಂದಿಗೆ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಬುಲ್‌ ಬುಲ್ ಪಕ್ಷಿ ಮೇಲೆ ಸಾವರ್ಕರ್ ಸವಾರಿ: ಸ್ಪಷ್ಟನೆ ಕೊಟ್ಟ ಸಿಟಿ ರವಿ

ದೇಶ ವಿಭಜನೆಯಾಗಿದ್ದು, ಭಾರತ ವಿಭಜನೆಗೆ ಸಹಿ ಹಾಕಿದ್ದೇ ಕಾಂಗ್ರೆಸ್‌. ಜಾತಿ, ಪ್ರಾದೇಶಿಕತೆ ಆಧಾರದಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ, ಮತ ಬ್ಯಾಂಕ್‌ ಗಟ್ಟಿಗೊಳಿಸಲು ದೇಶ ಒಡೆಯುವ ಕೆಲಸ ಮಾಡಿದ ಕಾಂಗ್ರೆಸ್‌ ಈಗ ಜೋಡೋ ಎನ್ನುತ್ತಿದ್ದು, ಆ ಮಾತನ್ನು ಆಡುವ ನೈತಿಕತೆಯೇ ಇಲ್ಲದ ಪಕ್ಷವಾಗಿದೆ. ಸಾಲು ಸಾಲಾಗಿ ಕಾಂಗ್ರೆಸ್ಸಿನ ನಾಯಕರು ಯಾಕೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

click me!