* ಜಿನ್ನಾ ಮಾನಸಿಕತೆಯನ್ನು ನಾವು ಸಾರ್ವಕರ್ ಮಾನಸಿಕತೆಯಿಂದ ಎದುರಿಸಬೇಕು
* ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತರ ನಡೆದಿದೆ
* ಚಿಕ್ಕಮಗಳೂರಿನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಹೇಳಿಕೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.23) : ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಬಗ್ಗೆ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಇದರ ನಡುವೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಗಲಾಟೆಯನ್ನು ಗಮನಿಸಿದ್ರೆ ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ್ದು, ಹಿಜಾಬ್, ಹುಬ್ಬಳ್ಳಿ ಗಲಭೆ ಹಾಗೂ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಅದು ಈ ಕೆಳಿಗಿನಂತಿದೆ ನೋಡಿ.
ಜಿನ್ನಾ ಮಾನಸಿಕತೆಯನ್ನು ನಾವು ಸಾರ್ವಕರ್ ಮಾನಸಿಕತೆಯಿಂದ ಎದುರಿಸಬೇಕು
ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು ಆಗ ಮಾತ್ರ ದೇಶ ಉಳಿಸಲು ಸಾಧ್ಯವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ..ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತರ ನಡೆದಿದೆ. ಇದನ್ನು ಗಮನಿಸಿದಾಗ ಜಿನ್ನಾ ಮಾನಸಿಕತೆ ಇರುವುದು ಸ್ಟಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ. ಜಿನ್ನಾ ಮಾನಸಿಕತೆ ಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಸಾಧ್ಯವಿಲ್ಲ, ಗಾಂಧಿ ಮಾನಸಿಕತೆಯಲ್ಲಿ ಎದುರಿಸಿದಾಗ ದೇಶವಿಭಜನೆಯಾಗಬೇಕಾಯಿತು. 46 ಲಕ್ಷ ಜನರ ಮಾರಣಹೋಮ ನಡೆಯಿತು. ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು ಆಗ ಮಾತ್ರ ದೇಶ ಉಳಿಸಲು ಸಾಧ್ಯವೆಂದರು.
PSI Scam: ಇಷ್ಟು ದಿನಗಳಾದ್ರೂ ದಿವ್ಯಾ ಹಾಗರಗಿ ಅರೆಸ್ಟ್ ಯಾಕಿಲ್ಲ? ಶಾಸಕ ಪ್ರಶ್ನೆ
ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಆಚಾನಕ್ಕಾಗಿ ನಡೆದ ಘಟನೆ ಅಲ್ಲ
ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಅಚಾನಕ್ಕಾಗಿ ನಡೆದಿರುವ ಸಂಗತಿಗಳಲ್ಲ, ಡಿಜೆಹಳ್ಳಿ ಮತ್ತು ಕೆಜೆಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ. ದುರುದ್ದೇಶದಿಂದ ಗಲಭೆ ಹುಟ್ಟು ಹಾಕುತ್ತಿದ್ದು, ಗಲಭೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಮತ್ತೊಂದು ಡಿಜೆಹಳ್ಳಿ, ಕೆಜೆಹಳ್ಳಿ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮಗೆ ಯಾವ್ದು ದೊಡ್ದು, ಪರೀಕ್ಷೆಯೋ... ಹಿಜಾಬ್ಬೋ..
ಉಡುಪಿಯಲ್ಲಿ ಆರು ಜನ ವಿದ್ಯಾರ್ಥಿಗಳು ನಡೆದುಕೊಳ್ಳುತ್ತಿರುವ ಬಗ್ಗೆ ಸಿ.ಟಿ ರವಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಕಾಲೇಜ್ ಗಳಲ್ಲಿ ಸಮವಸ್ತ್ರವನ್ನು ಹಾಕಿ ಹೋಗಿದ್ದಾರೆ. ಶೇ 99ರಷ್ಟು ವಿದ್ಯಾರ್ಥಿಗಳು ನ್ಯಾಯಾಲಯದ ಆದೇಶ ಪಾಲಿಸಿ ಪರೀಕ್ಷೆ ಬರೆದಿದ್ದಾರೆ. ಶೇ.1ರಷ್ಟು ವಿದ್ಯಾರ್ಥಿಗಳು ವಿಷಯವನ್ನು ಜೀವಂತವಿಡಲು ನಾಟಕ ಮಾಡುತ್ತಿದ್ದಾರೆ. ಕೆಲವರು ಅವರನ್ನು ಹೀರೋ, ಹೀರೋಯಿನ್ ರೀತಿ ಬಿಂಬಿಸುತ್ತಿದ್ದಾರೆಂದರು. ಅವರ ನಾಟಕ ಕ್ಯಾಮರಾ ಆ ಕಡೆ ತಿರುಗಲಿ ಎನ್ನುವುದು ವಿದ್ಯಾರ್ಥಿಗಳಿಗೆ ಯಾವ್ದು ದೊಡ್ದು, ಪರೀಕ್ಷೆಯೋ... ಹಿಜಾಬ್ಬೋ ಎನ್ನುವುದರಲ್ಲಿ ಪರೀಕ್ಷೆ ದೊಡ್ದು ಅನ್ನುವ ,99% ಜನ ಪರೀಕ್ಷೆ ಬರೆದಿದ್ದಾರೆ .ಹಿಜಾಬ್ ದೊಡ್ದು ಅನ್ನುವವರು ಕ್ಯಾಮರಾ ಮುಂದೆ ನಾಟಕ ಆಡ್ತಿದ್ದಾರೆ ಎಂದು ಲೇವಡಿ ಮಾಡಿದ್ರು. 99% ಜನ ಸರ್ಕಾರದ ನಿಲುವು, ಕೊರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ, ಅವರಿಗೆ ಸ್ವಾಗತವಿದ್ದು ಹಿಜಾಬ್ ವಿವಾದವನ್ನು ಜೀವಂತವಾಗಿಡಲು ಷಡ್ಯಂತ ನಡೆಸಿದ್ದಾರೆ ಅದರ ಮಾನಸೀಕತೆ ಇದು .ಕಳೆದ 1983 ರಿಂದ ಇಲ್ಲದ ಚಳುವಳಿ ಈಗ ಏಕೆ ಶುರುವಾಗಿದೆ. ಇವತ್ತು ಹಿಜಾಬ್ ದೊಡ್ಡದು ಎನ್ನುತ್ತಾರೆ ನಾಳೆ ಸಂವಿಧಾನವೇ ಬೇಡ ಎನ್ನುತ್ತಾರೆ. ನಮಗೆ ಷರಿಯತ್ ಬೇಕೆನ್ನುತ್ತಾರೆ. ಮತಾಂಧತೆಯ ಮೂಲಕ ದೇಶ ಒಡೆಯುವುದು ಅವರ ಸಂಚು ಎಂದು ದೂರಿದರು.
PSI ನೇಮಕಾತಿ ಅಕ್ರಮದಲ್ಲಿ ಯಾರೇ ಇದ್ರೂ ಕ್ರಮಕ್ಕೆ ಒತ್ತಾಯ
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಯಾರು ಭಾಗಿದಾರರು ಅವರ ವಿರುದ್ಧ ನಿರ್ಧಾಕ್ಷ್ಯಿಣ್ಯಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಆಗ್ರಹಿಸಿದ್ದೇನೆ. ಅಕ್ರಮ ನಡೆಸಿದವರು ಬಿಜೆಪಿಯವರೇ ಇರಲಿ, ಕಾಂಗ್ರೆಸ್ನವರೇ ಇರಲಿ ಕಳ್ಳರು ಕಳ್ಳರೇ ಅಕ್ರಮ ನಡೆಸುವವರು ಕಾಂಗ್ರೆಸ್ ಮುಖವಾಡ, ಬಿಜೆಪಿ ಮುಖವಾಡ ಹಾಕುತ್ತಾನೆ. ಪ್ರಕರಣವನ್ನು ಸರ್ಕಾರ ಸಿಓಡಿಗೆ ವಹಿಸಿದ್ದು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದರು.