ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ..!

By Girish Goudar  |  First Published Apr 23, 2022, 11:59 AM IST

*  ಇದು 40 ಪರ್ಸೆಂಟ್ ಸರ್ಕಾರ ಅಲ್ಲ, 65 ಪರ್ಸೆಂಟ್ ಸರ್ಕಾರ 
*  ಒಂದು ಯೋಜನೆಯಿಂದ 65 ಪರ್ಸೆಂಟ್ ಹಣ ಸೋರಿಕೆ
*  ಕೇವಲ 35% ಹಣದಲ್ಲಿ ಮಾತ್ರ ಕೆಲಸ ಆಗ್ತಿದೆ 


ಬೀದರ್(ಏ.23):  ಭಾರತದಲ್ಲೂ(India) ಶ್ರೀಲಂಕಾ(Sri Lanka) ಪರಿಸ್ಥಿತಿ ಬಂದರೇ ಅಚ್ಚರಿ ಇಲ್ಲ. ಸರ್ಕಾರದಲ್ಲಿ ಯಾರೂ ಹೇಳೋರು ಕೇಳೋರು ಇಲ್ಲ, ಹಿಡಿತ ಇಲ್ಲ. ಹೈಕಮಾಂಡ್‌ ಮುಂದೆ ಹೇಗೆ ಗೆಲ್ಲಬೇಕು, ಬೆಂಕಿ ಹೇಗೆ ಹಚ್ಚಬೇಕು ಎನ್ನುವುದು ಮಾತ್ರ ಗೊತ್ತು. ಕೆಲವೇ ಕೆಲವು ವ್ಯಕ್ತಿಗಳು ಒಂದು ಗಂಟೆಯಲ್ಲಿ 52 ಕೋಟಿ ಸಂಪಾದನೆ ಮಾಡುತ್ತಾರೆ ಎಂದ್ರೆ ಬಡವರ ಪರಿಸ್ಥಿತಿ ಏನಾಗಬೇಕು. ಇಲ್ಲಿ ಯಾರಿಗೂ ದೇಶ ಉಳಿಬೇಕು ಅಂತಿಲ್ಲ ಅಂತ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು(Congress) ಇಂದು ಭ್ರಷ್ಟಾಚಾರದ(Corruption) ಬಗ್ಗೆ ಮಾತಾಡುತ್ತಾರೆ. ಲೋಕಾಯುಕ್ತ(Lokayukta) ಕಂಪ್ಲೀಟ್ ಆಗಿ ಕ್ಲೋಸ್ ಮಾಡಿದವರು ಕಾಂಗ್ರೆಸ್‌ನವರು. ಕಾಂಗ್ರೆಸ್ ಸರ್ಕಾರದ ಕೇಸ್‌ಗಳನ್ನ ಮುಚ್ಚಿ ಹಾಕಲು ಲೋಕಾಯುಕ್ತ ಕ್ಲೋಸ್ ಮಾಡಿದ್ದರು. ಕಾಂಗ್ರೆಸ್ ಜೊತೆಗಿನ ಮೈತ್ರಿ ವೇಳೆ ನಾನು ಗುತ್ತಿಗೆ ಪರೇಡ್‌ನಲ್ಲಿ ಸಿಎಂ ಆಗಿದ್ದೇ ಅದಕ್ಕೆ ಏನು ಮಾಡಲು ಆಗಿಲ್ಲ. 2006ರಲ್ಲಿ ಲೋಕಾಯುಕ್ತರಿಗೆ ಸಂಪೂರ್ಣ ಪವರ್ ಕೊಟ್ಟಿದ್ದೆ, ಈ ಎರಡೂ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ನಿಲ್ಲಿಸುತ್ತೇವೆಂದು ಹೇಳೋದು ಒಂದು ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂಬುದು ಬರೀ ನಾಟಕಕ್ಕೆ ಅಷ್ಟೇ, ಮುಂದೆ ಸಂಪೂರ್ಣ ಬಹುಕತದೊಂದಿದೆ ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಬಲಪಡಿಸುತ್ತೇನೆ ಅಂತ ಹೇಳಿದ್ದಾರೆ. 

Tap to resize

Latest Videos

ಸಿದ್ದರಾಮಯ್ಯರನ್ನು ಸುಳ್ಳಿನ ರಾಮಯ್ಯ ಎಂದ HD Kumaraswamy

ಇದು 40 ಪರ್ಸೆಂಟ್ ಸರ್ಕಾರ ಅಲ್ಲ, 65 ಪರ್ಸೆಂಟ್ ಸರ್ಕಾರವಾಗಿದೆ(65% Government) ಅಂತ ಹೇಳುವ ಮೂಲಕ ಬಿಜೆಪಿ ಸರ್ಕಾರದ(BJP Government) ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಒಂದು ಯೋಜನೆಯಿಂದ 65 ಪರ್ಸೆಂಟ್ ಹಣ ಸೋರಿಕೆಯಾಗುತ್ತಿದೆ. 40 ಪರ್ಸೆಂಟ್ ಸರ್ಕಾರ ಕಮಿಷನ್ ತೆಗೆದುಕೊಂಡರೇ, 25 ಪರ್ಸೆಂಟ್ ಗುತ್ತಿಗೆದಾರ ತೆಗದುಕೊಳ್ಳುತ್ತಾನೆ. ಕಾಂಟ್ರ್ಯಾಕ್ಟರ್ ತನ್ನ ಲಾಭ ನೋಡಿಕೊಳ್ಳಬೇಕಲ್ಲ, ಎಲ್ಲಾ ಕಮಿಷನ್ ತೆಗೆದರೇ 65% ಹಣ ಸೋರಿಕೆಯಾಗುತ್ತಿದೆ. ಕೇವಲ 35% ಹಣದಲ್ಲಿ ಮಾತ್ರ ಕೆಲಸ ಆಗುತ್ತಿದೆ ಅಂತ ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ(PSI Recruitment Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಎಲ್ಲ ಡಿಪಾರ್ಟ್ಮೆಂಟ್‌ನಲ್ಲೂ ಅಕ್ರಮ ನಡೆಯುತ್ತಿದೆ. ನನಗಷ್ಟೇ ಅಲ್ಲದೇ ಆಡಳಿತ ನಡೆಸುತ್ತಿರುವ ಎಲ್ಲರಿಗೂ ಗೊತ್ತಿದೆ. ಸಹಕಾರ ಕ್ಷೇತ್ರದಲ್ಲಿ ಅಪಾರ್ಟ್ಮೆಂಟ್ ನೀಡಲು ಇದೆ ಕಥೆ ನಡೆಯುತ್ತಿದೆ. ರಾಜ್ಯದಲ್ಲಿ ದೊಡ್ಡ ಕರ್ಮಕಾಂಡಗಳು ಇವೆ. ರಿಟರ್ನ್ ಟೆಸ್ಟ್‌ನಲ್ಲಿ ಇದೆ ನಡೆಯುತ್ತಿದೆ.

ಆಣೆ ಮಾಡು ಎನ್ನೋಕೆ ಅವನು ಯಾವೂರ ದಾಸಯ್ಯ?: ಸಿದ್ದು ವಿರುದ್ಧ ಎಚ್‌ಡಿಕೆ ಕಿಡಿ

ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ ಅಪಾರ್ಟ್ಮೆಂಟ್ ಮಾಡಿಕೊಳ್ಳಲು 25 ಲಕ್ಷದಿಂದ 50 ಲಕ್ಷ ನಿಗದಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಕೆಪಿಎಸ್ಸಿ(KPSC) ಸುದ್ದ ಮಾಡುತ್ತೇವೆಂದು ಕಾಂಗ್ರೆಸ್ ಸರ್ಕಾರ ಶಾಮಭಟ್ಟರನ್ನ ಕುಡಿಸಿದ್ದರು. ಒಂದೊಂದು ಅಪಾರ್ಟ್ಮೆಂಟ್‌ಗೆ 1 ಕೋಟಿ ತೆಗೆದುಕೊಂಡಿದ್ದಾರೆ. ಕೆಲಸವೂ ಸಿಗದೇ ದುಡ್ಡು ಕಳೆದುಕೊಂಡವರು ಇವತ್ತಿಗೂ ಅಲೆದಾಡುತ್ತಿದ್ದಾರೆ. ನಾಡಿನ ಬಡ ಮಕ್ಕಳು ಕೆಲಸ ಸಿಗದೇ ದುಡ್ಡು ಕಳೆದುಕೊಂಡಿದ್ದಾರೆ. ಇದನ್ನ ಸರಿಪಡಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಸಿದ್ಧರಿಲ್ಲ ಇವತ್ತು. ಪಿಎಸ್ಐ ಒಂದು ಹೊರಗಡೆ ಬಂದಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ಈ ರೀತಿ ಅಕ್ರಮ ನಡೆಯುತ್ತಿದೆ ಅಂತ ಆರೋಪಿಸಿದ್ದಾರೆ. 

ಮನೆ ಮಠ ಮಾರಿ 25, 30 ಲಕ್ಷ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಲ್ಲಿ ದೊಡ್ಡವರು ಯಾರು ಸಿಕ್ಕಿಹಾಕಿಕೊಳ್ಳಲ್ಲ. ಇದರಲ್ಲಿ ದೊಡ್ಡ ರಾಜಕಾರಣಿಗಳು ಇದಾರೆ ಅಂತ ಹೇಳಲು ಹೋಗಲ್ಲ. ಈ ಅಕ್ರಮದಿಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ನಾಯವಾಗಿದೆ. ನಿಜವಾದ ಆರೋಪಿಗಳನ್ನ ಬಂಧಿಸಬೇಕು ಅಂತ ಎಚ್‌ಡಿಕೆ ಆಗ್ರಹಿಸಿದ್ದಾರೆ. 
 

click me!