ಪಾದಯಾತ್ರೆ ನಡೆಸುವ ನೈತಿಕತೆ ಬಿಜೆಪಿ- ಜೆಡಿಎಸ್‌ಗೆ ಇಲ್ಲ: ಕೆಪಿಸಿಸಿ ಅಧ್ಯಕ್ಷೆ ಪುಷ್ಪಾವತಿ ಅಮರನಾಥ್

By Kannadaprabha NewsFirst Published Aug 8, 2024, 11:47 PM IST
Highlights

ಹಲವು ಭ್ರಷ್ಟಾಚಾರದ ರೂವಾರಿಗಳಾದ ಬಿಜೆಪಿ- ಜೆಡಿ ಎಸ್ ನವರಿಗೆ ಪಾದಯಾತ್ರೆ ಕೈಗೊಳ್ಳಲು ಯಾವ ನೈತಿಕತೆ ಇದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್ ಪ್ರಶ್ನಿಸಿದರು. 
 

ಮೈಸೂರು (ಆ.08): ಹಲವು ಭ್ರಷ್ಟಾಚಾರದ ರೂವಾರಿಗಳಾದ ಬಿಜೆಪಿ- ಜೆಡಿ ಎಸ್ ನವರಿಗೆ ಪಾದಯಾತ್ರೆ ಕೈಗೊಳ್ಳಲು ಯಾವ ನೈತಿಕತೆ ಇದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್ ಪ್ರಶ್ನಿಸಿದರು. ಇಡೀ ದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಷಿತ ವರ್ಗದ ಧ್ವನಿಯಾಗಿದ್ದಾರೆ. ಜೊತೆಗೆ ಈಗಲೂ ಸಿಎಂ ಆಗುವ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆ ಈಡೇರಿಸಿದ್ದಾರೆ. ಹೀಗಾಗಿ ಇದು ಬಿಜೆಪಿ- ಜೆಡಿಎಸ್ ನವರಿಗೆ ನಿದ್ದೆಗೆಡಿಸಿದೆ. 

ಈ ಕಾರಣದಿಂದಾಗಿ ಹತಾಶರಾಗಿ ಅವರ ವಿರುದ್ಧ ಒಂದು ಸುಳ್ಳನ್ನೇ ನೂರು ಬಾರಿ ಹೇಳಿದರೆ ಸತ್ಯ ಆಗುತ್ತದೆ ಎಂಬ ನಂಬಿಕೆಯಿಂದ ಎಂಡಿಎ ಹಗರಣದಲ್ಲಿ ಅವರ ಪಾತ್ರ ಇಲ್ಲದಿದ್ದರೂ ಪಾದಯಾತ್ರೆ ಕೈಗೊಂಡಿರುವುದಾಗಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಬಿಜೆಪಿಯವರು ಕೋವಿಡ್ ವೇಳೆ ಶವಗಳ ಮೇಲೆ ರಾಜಕಾರಣ ಮಾಡಿ ಹಣ ಲೂಟಿ ಮಾಡಿದರು. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ವೇಳೆ ಎಪಿಎಂಸಿ ಹಗರಣ, ದೇವರಾಜ ಅರಸ್ ಟ್ರಕ್ ಟರ್ಮಿನಲ್ ಹಗರಣ, ಗಂಗಾ ಕಲ್ಯಾಣ ಹಗರಣ, ಕೋವಿಡ್ ಹೆಸರಿನಲ್ಲಿ ಹಣ ಲೂಟಿ, ಪಿಎಸ್ಐ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣ ಮೊದಲಾದವು ನಡೆದವು. 

Latest Videos

ಜೊತೆಗೆ ಚೆಕ್ ಮೂಲಕ ಲಂಚ ಸ್ವೀಕರಿಸಿದ ಕೀರ್ತಿ ಹೊಂದಿರುವ ವಿಜಯೇಂದ್ರ ಅವರೂ ಈ ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. ವಾಸ್ತವವಾಗಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದ ಬಗ್ಗೆ ಇವರು ದೆಹಲಿಗೆ ಪಾದಯಾತ್ರೆ ಕೈಗೊಳ್ಳಬೇಕಾಗಿತ್ತು ಎಂದು ಅವರು ಟೀಕಿಸಿದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬಿಜೆಪಿ ಮುಖಂಡ ಪ್ರೀತಂ ಗೌಡ ಅವರು ಪೆನ್ ಡ್ರೈವ್ ಮೂಲಕ ನಮ್ಮ ಕುಟುಂಬದ ಮಾನ ಬೀದಿಗೆ ತಂದಿದ್ದಾರೆ. 

ಮೆಜೆಸ್ಟಿಕ್ ಗೆಳತಿ ಮರೆಯಾಗಿದ್ದು ಎಲ್ಲಿ?: ಆಕೆ ಚೆಲುವಿನ ಚಿತ್ತಾರದ ಲವ್‌ ಸ್ಟೋರಿ ಹೇಳಿದ್ಯಾಕೆ?

ಹೀಗಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗ ಅದನ್ನು ಮರೆತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಪೆನ್ ಡ್ರೈವ್ ಹಗರಣದ ಮೂಲಕ ಸುಮಾರು ನಾಲ್ಕು ನೂರು ಮಂದಿ ಮಹಿಳೆಯರ ಮಾನ ಇವರ ಕುಟುಂಬದವರಿಂದ ಬೀದಿಗೆ ಬಂದಿರುವುದರ ಅರಿವು ಇವರಿಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ, ಸುಶೀಲಾ ನಂಜಪ್ಪ ಮೊದಲಾದವರು ಇದ್ದರು.

click me!