ಬಿಜೆಪಿ-ಜೆಡಿಎಸ್‌ನಲ್ಲಿ ಯಾರಿಗೆ ಕಷ್ಟ ಆಗಿದೆ ಎಂದು ಇಬ್ಬರು ಮೈತ್ರಿ ಮಾಡಿಕೊಂಡರು ತಿಳಿಯದು. ಇಲ್ಲವೇ ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದೆ ಎಂದು ಭಯಗೊಂಡರೂ ಗೊತ್ತಿಲ್ಲ. ಆದರೆ, ಇವರ ಮೈತ್ರಿಯಿಂದ ಲೋಕಸಭೆ ಚುನಾಣೆಯಲ್ಲಿ ನಮಗೆ ಹಿನ್ನಡೆಯಾಗುವುದಿಲ್ಲ.
ಹೊನ್ನಾವರ (ಅ.01): ಬಿಜೆಪಿ-ಜೆಡಿಎಸ್‌ನಲ್ಲಿ ಯಾರಿಗೆ ಕಷ್ಟ ಆಗಿದೆ ಎಂದು ಇಬ್ಬರು ಮೈತ್ರಿ ಮಾಡಿಕೊಂಡರು ತಿಳಿಯದು. ಇಲ್ಲವೇ ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದೆ ಎಂದು ಭಯಗೊಂಡರೂ ಗೊತ್ತಿಲ್ಲ. ಆದರೆ, ಇವರ ಮೈತ್ರಿಯಿಂದ ಲೋಕಸಭೆ ಚುನಾಣೆಯಲ್ಲಿ ನಮಗೆ ಹಿನ್ನಡೆಯಾಗುವುದಿಲ್ಲ. ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಕಷ್ಟಕ್ಕೆ ಸ್ಪಂದಿಸುವುದೇ ನನ್ನ ಕೆಲಸ. ಬೆಂಗಳೂರು, ಕಾರವಾರ, ಹೊನ್ನಾವರ, ಭಟ್ಕಳದಲ್ಲಿ ಕಚೇರಿ ದೂರವಾಣಿ ಸಂಖ್ಯೆ ಕೊಟ್ಟಿದ್ದೇನೆ.
ಕೆಲವರು ರಾತ್ರಿ ಕರೆ ಮಾಡಿ ಬೇಡಲ್ಲದ ವಿಷಯ ಮಾತನಾಡುತ್ತಾರೆ. ಅಂತಹದನ್ನು ಬಂದ್ ಮಾಡುವ ಕೆಲಸ ಮಾಡುತ್ತೇನೆ. ಆಗದಿರುವುದನ್ನು ಆಗುವುದಿಲ್ಲ ಎಂದು ನೆರವಾಗಿಯೇ ಹೇಳುತ್ತೇನೆ. ಆಗುವ ಕೆಲಸ ಖಂಡಿತಾ ಮಾಡಿಕೊಡುತ್ತೇನೆ ಎಂದರು 2005ರ ಪೂರ್ವದ ಅರಣ್ಯ ವಾಸಿಗಳ ಮೇಲೆ ಇಲಾಖಾ ಅಧಿಕಾರಿಗಳಿಂದ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿ, 2013ರಲ್ಲಿ 25000 ಜನರಿಗೆ ಜಿಪಿಎಸ್ ಆಗಿ, ಕೆಲವರಿಗೆ ಹಕ್ಕುಪತ್ರ ಕೊಟ್ಟು ನ್ಯಾಯ ಕೊಡಿಸಿದ್ದೆ. ಅಂಗನವಾಡಿ, ಶಾಲೆ, ಆಸ್ಪತ್ರೆ, ರುದ್ರಭೂಮಿ, ಕ್ರೀಡಾಂಗಣ ಎಲ್ಲದಕ್ಕೂ ಮಂಜೂರು ಮಾಡಿಸಿಕೊಟ್ಟಿದ್ದೆ.
undefined
ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವ: ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ರವಿಶಂಕರ್ ಗುರೂಜಿ
ನನ್ನ ಅಧಿಕಾರವಧಿ ನಂತರದಲ್ಲಿ ಏನಾಯ್ತು ಗೊತ್ತಿಲ್ಲ. ಆದರೆ ಈಗ ನಾನು ಅಧಿಕಾರಿಗಳಿಗೆ ಜಿಪಿಎಸ್ ಆದವರಿಗೆ ತೊಂದರೆ ಕೊಡಬೇಡಿ ಎಂದಿದ್ದೇನೆ. ಬದುಕುವುದುಕ್ಕೊಸ್ಕರ ಮನೆಕಟ್ಟಿಕೊಂಡಿದ್ದಾರೆ. 2018ರ ನಂತರ ಒಂದೇ ಒಂದು ಹಕ್ಕುಪತ್ರ ಆಗಿಲ್ಲ. ಈಗ ಏನಾದರು ರಾಜಕಾರಣ ಶುರು ಮಾಡಿದರೆ ಮಾಡಬಹುದು ಎಂದು ವಿರೋಧಿಗಳನ್ನು ಕುಟುಕಿದರು. ಹೊಸ ಅಭಿವೃದ್ಧಿ ಕಾಮಗಾರಿ ಆರಂಭಿಸದೆ ಇರುವುದಕ್ಕೆ ಜನತೆ ಪ್ರಶ್ನಿಸುತ್ತಾರೆ ಎಂಬುದಕ್ಕೆ, ಅಭಿವೃದ್ಧಿ ಕಾಮಗಾರಿ ಆರಂಭಿಸದೆ ಇದ್ದರೂ ಜನಸಾಮಾನ್ಯರ, ಬಡವರ ತಲುಪುವ ಕೆಲಸ ಆಗಿದೆ.
ಪ್ರತಿ ತಾಲೂಕಿನಲ್ಲಿ ತಿಂಗಳಿಗೆ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ₹ 25 ಕೋಟಿ ನೀಡುತ್ತಿದ್ದೇವೆ. ನಾವು ಹಣ ಕೊಡುತ್ತೇವೆ ಅಕ್ಕಿ ಕೊಡಿ ಎಂದರು ಬಿಜೆಪಿಗರು ಇರುವ ರಾಜ್ಯದಿಂದ ಅಕ್ಕಿ ಕೊಟ್ಟಿಲ್ಲ. ಬಿಜೆಪಿಗರು ಮಾಡಿದ ಸಾಲ ತೀರಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು. ಟನಲ್ ವಿಚಾರಕ್ಕೆ ಸಂಬಂಧಿಸಿದಂತೆ, ಎಂಎಲ್‌ಸಿ ಗಣಪತಿ ಉಳ್ವೇಕರ್ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಕಾರವಾರದಿಂದ ಭಟ್ಕಳ ವರೆಗೆ ಇನ್ನು ಚತುಷ್ಪಥ ರಸ್ತೆ ಪೂರ್ಣಗೊಂಡಿಲ್ಲ.
ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು: ಸಿ.ಎಸ್.ಪುಟ್ಟರಾಜು
ಅವರದೆ ಪಕ್ಷದ ಕೇಂದ್ರ ಸಚಿವ ಐಆರ್‌ಬಿ ಕಂಪನಿ ಮುಖ್ಯಸ್ಥರಾಗಿದ್ದಾರೆ. ಎಷ್ಟು ದಿನದೊಳಗೆ ಕಾಮಗಾರಿ ಮುಗಿಸಿಕೊಡ್ತಿರಿ ಎಂದು ಅವರನ್ನೇ ಪ್ರಶ್ನೆ ಮಾಡಿದ್ದೇನೆ. ಅದಕ್ಕೆ ಉತ್ತರ ಇಲ್ಲ. ನಮಗೆ ಉತ್ತರ ಕೊಡಿ ಎಂದು ಸವಾಲು ಎಸೆದರು. ಈ ವೇಳೆ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಚಂದ್ರಕಾಂತ ಕೊಚರೇಕರ, ಕೃಷ್ಣ ಗೌಡ, ಅಣ್ಣಪ್ಪ ನಾಯ್ಕ, ಬಾಲಚಂದ್ರ ಗೌಡ, ಮಂಜುನಾಥ ಗೌಡ, ರಾಜು ತಾಂಡೇಲ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.