ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯೇ ಕಣಕ್ಕೆ: ಕೇಂದ್ರ ಸಚಿವ ಕುಮಾರಸ್ವಾಮಿ

By Kannadaprabha News  |  First Published Oct 15, 2024, 10:11 AM IST

ಚನ್ನಪಟ್ಟಣ ಹಾಗೂ ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಯಾರು ಏನೇ ಮಾಡಿದರೂ ಈ ಭದ್ರಕೋಟೆಯನ್ನು ಅಲ್ಲಾಡಿಸಲು ಆಗಲ್ಲ. ಮುಂದಿನ ದಿನಗಳಲ್ಲಿ ಭದ್ರಕೋಟೆ ಇನ್ನಷ್ಟು ಬಿಗಿಯಾಗಿ ನಿಲ್ಲಲು ಕ್ರಮ ಕೈಗೊಳ್ಳುತ್ತೀವಿ ಎಂದ ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ


ಹೊಳೆನರಸೀಪುರ(ಅ.15): ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯೇ ಕಣಕ್ಕೆ ಇಳಿಯಲಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ತಾಲೂಕಿನ ಬಿದರಕ್ಕ ಗ್ರಾಮದ ಕೊಳಲು ಗೋಪಾಲಕೃಷ್ಣ ನೂತನ ದೇವಾಲಯದ 48ನೇ ದಿನದ ಮಂಡಲ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು. 2-3 ದಿನದಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಬಹುದು. ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ ಅಭ್ಯರ್ಥಿ ಆದ ಮೇಲೆ ನಾನೂ ಜೆಡಿಎಸ್ ಅಭ್ಯರ್ಥಿ ಆಗಲೇಬೇಕಲ್ವ?. ಆದ್ದರಿಂದ ನಾನೇ ಅಭ್ಯರ್ಥಿ ಎಂದಿದ್ದೆ. ಆದರೆ, ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಯೊಂದಿಗೆ ದೆಹಲಿಯ ನಾಯಕರ ಜತೆ ಚರ್ಚೆ ಮಾಡಿ, ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದರು. 

Latest Videos

undefined

ಬಿಜೆಪಿ ಒಕ್ಕಲಿಗ ನಾಯಕರ ನಾಶಕ್ಕೆ ಎಚ್‌ಡಿಕೆಯತ್ನ: ಕಮಲಕ್ಕೆ ಜೆಡಿಎಸ್‌ ಅನಿವಾರ್ಯವೇ ಎಂದ ಯೋಗೇಶ್ವರ್

ಸ್ಪರ್ಧೆಯಲ್ಲಿ ಹಲವರ ಹೆಸರಿವೆ. ಈಗಾಗಲೇ ಕ್ಷೇತ್ರದ ಮತದಾರರು, ಕಾರ್ಯಕರ್ತರ ಭಾವನೆಗಳನ್ನು ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದರು. 

ಚನ್ನಪಟ್ಟಣ ಹಾಗೂ ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಯಾರು ಏನೇ ಮಾಡಿದರೂ ಈ ಭದ್ರಕೋಟೆಯನ್ನು ಅಲ್ಲಾಡಿಸಲು ಆಗಲ್ಲ. ಮುಂದಿನ ದಿನಗಳಲ್ಲಿ ಭದ್ರಕೋಟೆ ಇನ್ನಷ್ಟು ಬಿಗಿಯಾಗಿ ನಿಲ್ಲಲು ಕ್ರಮ ಕೈಗೊಳ್ಳುತ್ತೀವಿ ಎಂದರು.

click me!