
ಬೆಂಗಳೂರು(ಅ.15): ವಿಜಯೇಂದ್ರ ಯಡಿಯೂರಪ್ಪ ಅವರೇ, ನಿಮ್ಮ ಪ್ರೇರಣಾ ಟ್ರಸ್ಟ್‌ಗೆ ಅಕ್ರಮವಾಗಿ ಮಂಜೂರು ಮಾಡಿಕೊಂಡಿದ್ದ ಭೂಮಿಯನ್ನು ಹಿಂದಿರುಗಿಸುವ ನೈತಿಕತೆ ತೋರಿಸುವಿರಾ? ಶಾಲೆ ನಿರ್ಮಿಸುವುದಾಗಿ ಅಕ್ರಮವಾಗಿ ನಿವೇಶನ ಪಡೆದು ಬಿರಿಯಾನಿ ಹೋಟೆಲ್ ಮಾಡಿರುವ ಛಲವಾದಿ ನಾರಾಯಣಸ್ವಾಮಿ ಆ ನಿವೇಶನ ಹಿಂದಿರುಗಿಸುವ ನೈತಿಕತೆ ತೋರಿಸುವರೇ? ಹೀಗಂತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಖರ್ಗೆ ಅಧ್ಯಕ್ಷತೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ನಿವೇಶನ ನೀಡಿದ್ದರಿಂದಲೇ ಅದನ್ನು ಹಿಂದಿರುಗಿಸಿದ್ದಾರೆ ಎಂದು ಬಿಜೆಪಿಯವರು ಆರಂಭಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ ಬಿಜೆಪಿಯ ಕರ್ನಾಟಕ ನಾಯಕರು. ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಮರಳಿಸಿಲ್ಲ. ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಆಯ್ಕೆ ಆಗಿತ್ತು ಅಷ್ಟೆ. ನಿವೇಶನ ಇನ್ನೂ ಮಂಜೂರಾಗದಿರುವಾಗ ಮರಳಿಸಲು ಹೇಗೆ ಸಾಧ್ಯ ? ಸಿಎ ನಿವೇಶನಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಪ್ರಶ್ನೆ ಕೇಳಿದರೆ ‘ಓ ಮೈ ಗಾಡ್’ ಎಂದು ಹೆದರುವುದಕ್ಕೆ ನಾನು ಮೋದಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿಯವರು ಬಟ್ಟೆ ಹರಿದುಕೊಂಡ್ರ ಹೆದರಲ್ಲ:
ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟಾದ್ರೂ ಕೂಗಾಡಲಿ, ಎಗರಾಡಲಿ, ಬಟ್ಟೆ ಹರಿದುಕೊಂಡರೂ ನಾನು ಹೆದರುವುದಿಲ್ಲ. ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆಯಾಗಿಲ್ಲ ಅಂತ ಮೊದಲು ದೂರು ಕೊಟ್ಟರು. ಈಗೇನು ಹೇಳುತ್ತಾರೆ? ರಾಜ್ಯಪಾಲರ ಬದಲು ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೆ ದೂರು ಕೊಡಲಿ. ನಿಜವಾಗಿಯೂ ನನಗೂ ಕುತೂಹಲ ಇದೆ. ಇವರು ಹೇಗೆ ಕಾನೂನು ಬಾಹಿರ ಅಂತ ಸಾಬೀತು ಮಾಡುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.