ನಮ್ಮ ಸರ್ಕಾರ ಜನಪರ ಆಡಳಿತ ನೀಡಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತ ಕಾಯುವ ಕೆಲಸ ಮಾಡಿದೆ. ಪಂಚ ಗ್ಯಾರಂಟಿಗಳ ಮೂಲಕ ಜನಕಲ್ಯಾಣಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಷ್ಟೆಲ್ಲ ಯೋಜನೆಗಳ ಜಾರಿಯ ನಡುವೆ ನಾವು ಆರ್ಥಿಕವಾಗಿಬಲಿಷ್ಠವಾಗಿದ್ದೇವೆಯೇ ವಿನಃ ಬಿಜೆಪಿಯವರು ಹೇಳುವಂತೆ ನಾವೇನು ದಿವಾಳಿಯಾಗಿಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬಳ್ಳಾರಿ(ಅ.15): ಬಿಜೆಪಿ ನಾಯಕರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, ಷಡ೦ತ್ರ ರೂಪಿಸಿದ್ದಾರೆ. ಆದರೆ, ಬಿಜೆಪಿ ನಾಯಕರ ಷಡ್ಯಂತ್ರವನ್ನು ಸಮರ್ಥವಾಗಿ ಎದುರಿಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾವ ಅಪರಾಧವನ್ನೂ ಎಸಗಿಲ್ಲ. ಹೀಗಾಗಿ, ಯಾರಿಗೂ ಜಗ್ಗಲ್ಲ-ಬಗ್ಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೇ ಪುನರುಚ್ಚರಿಸಿದ್ದಾರೆ.
ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಸೋಮವಾರ ಜರುಗಿದ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಭಾಷಣದುದಕ್ಕೂ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿ ರಾಜ್ಯಕ್ಕೆ ತೆರಿಗೆ ಹಣ ನೀಡದೆ ವಂಚಿಸುತ್ತಿದೆ. ರಾಜ್ಯ ಅಭಿವೃದ್ಧಿಗೆ ಕೇಂದ್ರ ಕಂಟಕವಾಗಿ ಪರಿಣಮಿಸಿದೆ ಎಂದು ಕಿಡಿ ಕಾರಿದರು.
ಉಪಕದನಕ್ಕೆ ಕಾಂಗ್ರೆಸ್ ರಣಕಹಳೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ನಮ್ಮ ಸರ್ಕಾರ ಜನಪರ ಆಡಳಿತ ನೀಡಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತ ಕಾಯುವ ಕೆಲಸ ಮಾಡಿದೆ. ಪಂಚ ಗ್ಯಾರಂಟಿಗಳ ಮೂಲಕ ಜನಕಲ್ಯಾಣಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಷ್ಟೆಲ್ಲ ಯೋಜನೆಗಳ ಜಾರಿಯ ನಡುವೆ ನಾವು ಆರ್ಥಿಕವಾಗಿಬಲಿಷ್ಠವಾಗಿದ್ದೇವೆಯೇ ವಿನಃ ಬಿಜೆಪಿಯವರು ಹೇಳುವಂತೆ ನಾವೇನು ದಿವಾಳಿಯಾಗಿಲ್ಲ ಎಂದರು.
ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಹಣ ನೀಡದೇ ಕೇಂದ್ರ ಸರ್ಕಾರ ವಂಚಿಸುತ್ತಿದೆ. ಕರ್ನಾಟಕದ ಜನರ ತೆರಿಗೆ ಹಣ ನೀಡುವಂತೆ ಧ್ವನಿ ಎತ್ತಬೇಕಾದ ಬಿಜೆಪಿ ಸಂಸದರು ಹಾಗೂ ನಾಯಕರು ಮೌನ ವಹಿಸಿದ್ದಾರೆ. ನಾಡಿನ ಪ್ರತಿಯೊಬ್ಬರೂ ಕೇಂದ್ರದ ನಡೆ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಸಂಡೂರಿಗೆ ₹1200 ಕೋಟಿ: ಸಂಡೂರು ಕ್ಷೇತ್ರದ ಅಭಿವೃದಿಗೆ ಈವರೆಗೆ 1200 ಕೋಟಿ ನೀಡಲಾಗಿದೆ. ತುಕಾರಾಂ ಹಾಗೂ ಸಂತೋಷ್ ಲಾಡ್ ಸೇರಿ ಸಂಡೂರು ಪ್ರಗತಿಗೆ ಶ್ರಮಿಸುತ್ತಿದ್ದಾರೆ. ತುಕಾರಾಂ ಈ ಕ್ಷೇತ್ರದ ಸಮ ಗ್ರ ಅಭಿವೃದ್ಧಿಗೆ ಸಾಕ ಷ್ಟು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಬಳ್ಳಾರಿಯಲ್ಲಿ ಲೂಟಿ ಆಗ್ತಿತ್ತು, ನಾವು ಪಾದಯಾತ್ರೆ ಮಾಡಿದ ಬಳಿಕ ಈಗ ಎಲ್ಲವೂ ಶಾಂತಿ ಇದೆ: ಡಿಕೆ ಶಿವಕುಮಾರ
ಈ ಹಿಂದೆ 2013-18ರಲ್ಲಿ ನಮ್ಮ ಸರ್ಕಾರದಿಂದ 15 ಲಕ್ಷ ಮನೆಗಳನ್ನು ಕಟ್ಟಿದೆವು, ಸಂಡೂರಿನಲ್ಲಿಯೇ ಸುಮಾರು 12 ಸಾವಿರ ಮನೆಗಳನ್ನು ಕಟ್ಟಿದ್ದೇವೆ. ಇದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಆಗ ಸಂಡೂರಿನ ಶಾಸಕರಾಗಿದ್ದ, ಈಗಿನ ಸಂಸದ ಈ. ತುಕಾರಾಂ ಅವರೇ ಕಾರಣ. ಇದರ ಕೀರ್ತಿ ಇವರಿಗೆ ಸಲ್ಲಬೇಕು. ಆದರೆ, ಕಳೆದ ಬಾರಿ ಇದ್ದ ಸರ್ಕಾರ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ರಾಜ್ಯದ ಪ್ರಗತಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಚುನಾವಣೆಗೂ ಮುನ್ನ ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಯವರು ಬಡವರ ಪರ ಮೊಸಳೆ ಕಣ್ಣೀರು ಸುರಿಸುತ್ತಾರೆ. ಅವರ ಮಾತು ಗಳನ್ನು ನಂಬಬೇಡಿ. ನನ್ನ ವಿರುದ್ಧ ಷಡ್ಯಂ ತ್ರ ರೂಪಿಸಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ, ಪಾಠ ಕಲಿಸಿ ಎಂದು ಸಿದ್ದರಾಮಯ್ಯ ಹೇಳಿದರು.