ಬಿಜೆಪಿ ಜೋಡೆತ್ತು ಯಾತ್ರೆ 2.0; ನಾಳೆಯಿಂದ ಸಿಎಂ- ಬಿಎಸ್‌ವೈ 2ನೇ ಹಂತದ ರಾಜ್ಯ ಪ್ರವಾಸ

Published : Oct 17, 2022, 07:03 AM ISTUpdated : Oct 17, 2022, 07:10 AM IST
ಬಿಜೆಪಿ ಜೋಡೆತ್ತು ಯಾತ್ರೆ 2.0;  ನಾಳೆಯಿಂದ ಸಿಎಂ- ಬಿಎಸ್‌ವೈ 2ನೇ ಹಂತದ ರಾಜ್ಯ ಪ್ರವಾಸ

ಸಾರಾಂಶ

ಬಿಜೆಪಿ ಜೋಡೆತ್ತು ಯಾತ್ರೆ 2.0  ಸಿಎಂ- ಬಿಎಸ್‌ವೈ 2ನೇ ಹಂತದ ರಾಜ್ಯ ಪ್ರವಾಸ ನಾಳೆಯಿಂದ ನಾಳೆ ಬೀದರ್‌, ನಾಡಿದ್ದು ಯಾದಗಿರಿ, ಕಲಬುರಗಿ ಜಿಲ್ಲೆ ಭೇಟಿ  ವಿಧಾನಸಭೆ ಚುನಾವಣೆ ಉದ್ದೇಶದಿಂದ ಬಿಜೆಪಿಯಿಂದ ‘ಜನಸಂಕಲ್ಪ ಯಾತ್ರೆ’  

ಬೆಂಗಳೂರು .(ಅ17) : ಮುಂಬರುವ ವಿಧಾನಸಭಾ ಚುನಾವಣೆ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಆರಂಭವಾಗಿರುವ ‘ಜನಸಂಕಲ್ಪ ಯಾತ್ರೆ’ ಮಂಗಳವಾರದಿಂದ ಮತ್ತೆ ಮುಂದುವರೆಯಲಿದೆ. ಮಂಗಳವಾರ ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ಮತ್ತು ಔರಾದ್‌ ವಿಧಾನಸಭಾ ಕ್ಷೇತ್ರಗಳಲ್ಲಿ, ಬುಧವಾರ ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರಗಳಲ್ಲಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಎರಡನೇ ಹಂತದ ಪ್ರವಾಸ ಕೈಗೊಂಡು ಪಕ್ಷದ ಕಾರ್ಯಕರ್ತರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹುಬ್ಬಳ್ಳಿ, ಧಾರವಾಡಗಳಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ಅರುಣ್‌ ಸಿಂಗ್‌

ಕಳೆದ ವಾರ ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನಗಳ ಕಾಲ ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಉಭಯ ನಾಯಕರ ಪ್ರವಾಸ ಯಶಸ್ವಿಯಾಗಿದ್ದು, ಪಕ್ಷದಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ. ಜತೆಗೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆಗೆ ತುಸು ಎದಿರೇಟು ನೀಡುವಲ್ಲಿಯೂ ಈ ಪ್ರವಾಸ ಯಶಸ್ವಿಯಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ರಾಜ್ಯ ಪ್ರವಾಸ ಕೈಗೊಂಡಿರಲಿಲ್ಲ. ಹಲವಾರು ಕಾರಣಗಳಿಂದ ಅವರ ಪ್ರವಾಸ ವಿಳಂಬವಾಗುತ್ತಲೇ ಇತ್ತು. ಒಂದು ಹಂತದಲ್ಲಿ ಯಡಿಯೂರಪ್ಪ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಬೇಸರಗೊಂಡಿದ್ದರು. ಯಡಿಯೂರಪ್ಪ ಅವರು ಅಲ್ಲಲ್ಲಿ ಪಕ್ಷದ ಸಭೆ-ಸಮಾರಂಭಗಳಿಗೆ ತೆರಳಿ ಭಾಗವಹಿಸುತ್ತಿದ್ದರೆ ಹೊರತು ನಿರಂತರ ಪ್ರವಾಸ ಕೈಗೊಂಡಿರಲಿಲ್ಲ.

ಕಾಂಗ್ರೆಸ್‌ 85 ಪರ್ಸೆಂಟ್‌ ಕಮಿಷನ್‌ ಹೊಡೀತಿತ್ತು: ರಾಜೀವ್‌ ಗಾಂಧಿ ಹೇಳಿಕೆ ಪ್ರಸ್ತಾಪಿಸಿದ ಸಿಎಂ

ಇದೀಗ ಅಂತಿಮವಾಗಿ ಪಕ್ಷದಿಂದಲೇ ಜನಸಂಕಲ್ಪ ಯಾತ್ರೆ ಕೈಗೊಳ್ಳುವುದು ನಿರ್ಧಾರವಾಗಿದ್ದರಿಂದ ಬರುವ ಡಿಸೆಂಬರ್‌ 25ರವರೆಗೆ ಒಟ್ಟು 50 ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರು ಬೊಮ್ಮಾಯಿ ಅವರೊಂದಿಗೆ ಪ್ರವಾಸ ನಡೆಸಲಿದ್ದಾರೆ. ಒಂದೆಡೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮತ್ತು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ನೇತೃತ್ವದಲ್ಲಿ ಸಂಘಟನಾತ್ಮಕ ದೃಷ್ಟಿಯಿಂದ ಪ್ರವಾಸ ನಡೆಯುತ್ತಿದ್ದರೆ, ಇತ್ತ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜಕೀಯ ದೃಷ್ಟಿಯಿಂದ ಪ್ರವಾಸ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ