ಮೋದಿ, ಬೊಮ್ಮಾಯಿ ಆಡಳಿತದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಖಚಿತ: ಸಚಿವ ಹಾಲಪ್ಪ ಆಚಾರ್‌

By Kannadaprabha News  |  First Published Mar 19, 2023, 10:41 PM IST

ಪ್ರಧಾನಿ ನರೇಂದ್ರ ಮೋದಿ ಹಾಗು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತದಿಂದ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಹಾಲಪ್ಪ ಆಚಾರ್‌ ವಿಶ್ವಾಸ ವ್ಯಕ್ತಪಡಿಸಿದರು. 


ಕುಕನೂರು (ಮಾ.19): ಪ್ರಧಾನಿ ನರೇಂದ್ರ ಮೋದಿ ಹಾಗು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತದಿಂದ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಹಾಲಪ್ಪ ಆಚಾರ್‌ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತಕ್ಕೆ ಬೇಸತ್ತು ಬಿಜೆಪಿ ಪಕ್ಷದ ಜನಪರ ಆಡಳಿತ ಕಂಡು ಹಲವಾರು ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಮೇಲು-ಕೀಳು ಎಂಬ ಬೇಧವಿಲ್ಲ.

ಇಲ್ಲಿ ಪ್ರತಿಯೊಬ್ಬರು ಕಾರ್ಯಕರ್ತರು ಸಹ ಮುಖಂಡರು ಇದ್ದಂತೆ. ಕಾರ್ಯಕರ್ತರಿಗೆ ಬೆಂಬಲ ನೀಡುವ ಗೌರವ ನೀಡುವ ಹಿರಿಯ ಪಕ್ಷ ಬಿಜೆಪಿ ಆಗಿದೆ.ಬಿಜೆಪಿ ತತ್ವ ಸಿದ್ಧಾಂತ ರಾಷ್ಟ್ರೀಯತೆ ಹಾಗೂ ರಾಷ್ಟಾ್ರಭಿವೃದ್ಧಿ ಆಗಿದೆ. ಆ ನಿಟ್ಟಿನಲ್ಲಿ ಪಕ್ಷ ಹಾಗು ಪಕ್ಷದ ಪ್ರತಿಯೊಬ್ಬರು ಕಾರ್ಯ ಮಾಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಯನೆಂದೆ ಖ್ಯಾತಿ ಹೊಂದಿದ್ದಾರೆ ಹಾಗು ಭಾರತದ ಹಿರಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ಲಸಿಕೆಗಳಿಗಾಗಿ ವಿದೇಶಗಳಿಗೆ ಭಾರತ ಕೈಯೊಡ್ಡುವ ಸ್ಥಿತಿಯಲ್ಲಿತ್ತು. ಆದರೆ ಇಂದು ಹಲವಾರು ರಾಷ್ಟ್ರಗಳಿಗೆ ಭಾರತ ಆತ್ಮ ನಿರ್ಭರ ಭಾರತದಲ್ಲಿ ಲಸಿಕೆ ನೀಡುತ್ತಿದೆ. 

Latest Videos

undefined

ಡಬಲ್‌ ಎಂಜಿನ್‌ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್

ಕೊರೋನಾ ವೇಳೆಯಲ್ಲಿ ಭಾರತೀಯರಿಗೆ ಮಾತ್ರವಲ್ಲದೆ ವಿದೇಶಗಳಿಗೂ ಲಸಿಕೆ ನೀಡಿ ಮಾನವೀಯತೆ ಮರೆದಿದೆ. ಸೈನಿಕರಿಗೆ ವಿಶೇಷ ಸವಲತ್ತು ನೀಡಲಾಗಿದೆ. ರೈತರ ಸ್ವಾಭಿಮಾನಕ್ಕೆ ಪಿಎಂ ಕಿಸಾನ್‌ ಹಣ ನೀಡುತ್ತಿದ್ದಾರೆ. ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಭಿವೃದ್ಧಿಯತ್ತ ಸಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾಸಿರಿ ಯೋಜನೆ ಅನುಕೂಲ ಆಗಿದೆ.ಅಂಜನಾದ್ರಿ ಅಭಿವೃದ್ಧಿಗೆ .120 ಕೋಟಿ ಹಣದಲ್ಲಿ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ ಮಂಜೂರು ಮಾಡಿದ್ದಾರೆ. 

ಶೀಘ್ರವೇ ಯಲಬುರ್ಗಾ ಕ್ಷೇತ್ರದ ಕೆರೆಗಳಿಗೆ ನೀರು ಹಾಕಲಾಗುವುದು. ಈಗಾಗಲೇ ಕೃಷ್ಣೆ ನೀರು ಯಲಬುರ್ಗಾದ ಭೂರಮೆಯನ್ನು ಸ್ಪರ್ಶಿಸಿದ್ದಾಳೆ. ಹಲವಾರು ಜನಪರ ಕಾರ್ಯದಿಂದ ಮತ್ತೆ ಮತದಾರ ನೂರಕ್ಕೆ ನೂರು ಬಿಜೆಪಿ ಪಕ್ಷಕ್ಕೆ ಶ್ರೀರಕ್ಷೆ ಆಗಲಿದ್ದಾನೆ. ಮತ್ತೆ ಜನತೆ ಶಕ್ತಿ ತುಂಬಲಿದ್ದಾರೆ. ಬಿಜೆಪಿ ಅಭಿವೃದ್ಧಿ ಧ್ಯೇಯದೊಂದಿಗೆ ಕೆಲಸ ಮಾಡಲಿದೆ ಎಂದರು. ಮುಖಂಡರಾದ ಗದ್ದೆಪ್ಪ ಕುಡಗುಂಟಿ, ಯಲ್ಲಪ್ಪ ಹಳ್ಳಿಗುಡಿ, ಮಂಗಳೂರಿನ ಮಂಗಳೇಶಪ್ಪ ಹೊಸಮನಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು. ಸಚಿವ ಹಾಲಪ್ಪ ಆಚಾರ ಅವರು ಬಿಜೆಪಿ ಶಾಲು ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಕರ್ನಾಟಕ ಸಂಘ ಕತಾರ್ ವತಿಯಿಂದ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ

ಈ ವೇಳೆ ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಮಾತನಾಡಿ,ಸಚಿವ ಹಾಲಪ್ಪ ಆಚಾರ ಅವರು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದಾರೆ.ಗ್ರಾಮೀಣ ಒಳಭಾಗದ ರಸ್ತೆಗಳು, ಕೆರೆಗಳ ಅಭಿವೃದ್ಧಿ, ಶಾಲಾ ಕೊಠಡಿ ಹಾಗು ಅವರ ರಾಜಕೀಯ ಧ್ಯೇಯವಾದ ಶೈಕ್ಷಣೀಕ ಅಭಿವೃದ್ಧಿ ಹಾಗು ನೀರಾವರಿ ಯೋಜನೆ ಸಾಕಾರ ಪಡೆದಿವೆ. ಕೊಟ್ಟಮಾತಿನಂತೆ ಕೆಲಸ ಮಾಡಿದ್ದಾರೆ. ಅಲ್ಲದೆ ಜನತೆ ಸಹ ಅವರ ಮೇಲಿಟ್ಟವಿಶ್ವಾಸ ಉಳಿಸಿಕೊಂಡಿದ್ದಾರೆ. ಮತ್ತೊಮ್ಮೆ ಜನತೆಯ ಆಶೀರ್ವಾದ ಅವರಿಗೆ ಸಿಗಲಿದೆ ಎಂದರು. ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಮಲ್ಲಿಕಾರ್ಜುನ ಹುಲ್ಲೂರು, ಪಪಂ ಸದಸ್ಯ ಬಾಲರಾಜ ಗಾಳಿ, ಪ್ರಭುಗೌಡ ಪಾಟೀಲ್‌ ಇತರರಿದ್ದರು.

click me!