* ಬಿಜೆಪಿ ಸರ್ಕಾರದ ಸಾಧನೆ ಶೂನ್ಯ
* ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಯಾವುದೇ ರೀತಿಯ ಗಮನಾರ್ಹ ಸಾಧನೆ ಮಾಡಿಲ್ಲ
* ಕಾಂಗ್ರೆಸ್‌ನಿಂದ ಮಾತ್ರ ದೇಶದಲ್ಲಿ ಅಭಿವೃದ್ಧಿ ಮತ್ತು ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ
ಭಟ್ಕಳ(ಜ.06): ಕೇಂದ್ರದ ಬಿಜೆಪಿ ಸರ್ಕಾರದ(BJP Government) ಸಾಧನೆ ಶೂನ್ಯವಾಗಿದ್ದು, 70 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ್ದನ್ನು ಬಿಜೆಪಿ(BJP) ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್(Congress) ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಜಬ್ಬಾರ್ ಖಾನ್(Jabbar Khan) ಆರೋಪಿಸಿದರು. ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸಂಜೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಖಾಸಗೀಕರಣಕ್ಕೆ(Privatization) ಹೆಚ್ಚು ಒತ್ತು ನೀಡುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಯಾವುದೇ ರೀತಿಯ ಗಮನಾರ್ಹ ಸಾಧನೆ ಮಾಡಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಜತೆಗೆ ದೇಶವನ್ನೇ ಮಾರಾಟ ಮಾಡಬಹುದು ಎಂದು ದೂರಿದರು.
ಬಿಜೆಪಿ ಸರ್ಕಾರಕ್ಕೆ ಜನಪರ ಚಿಂತನೆ ಇಲ್ಲ. ಕಾಂಗ್ರೆಸ್‌ನಿಂದ ಮಾತ್ರ ದೇಶದಲ್ಲಿ ಅಭಿವೃದ್ಧಿ ಮತ್ತು ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
undefined
MLC Election: ಬಿಜೆಪಿ ಬ್ಯುಸಿನೆಸ್ ಜನತಾ ಪಾರ್ಟಿಯಾಗಿದೆ: ಮಧು ಬಂಗಾರಪ್ಪ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ, ಮುಖಂಡರಾದ ಅಜೀಂ ಅಂಬಾರಿ, ವಿಠಲ ನಾಯ್ಕ, ಟಿ.ಡಿ. ನಾಯ್ಕ, ವಿಷ್ಣು ದೇವಡಿಗ, ನಾರಾಯಣ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ನಾರಾಯಣ ಬಿ. ನಾಯ್ಕ, ಮಹೇಶ ನಾಯ್ಕ, ಎಂ.ಪಿ. ಶೈಲೇಂದ್ರ ಗೌಡ, ಅಬ್ದುರ್ ರಹೀಂ ಮುಂತಾದವರಿದ್ದರು.
ಡೋಂಗಿ ದೇಶಭಕ್ತರಿಗೆ ಮತ ಹಾಕದಿರಿ: ಶ್ರೀನಿವಾಸ ಮಾನೆ
ಮುಂಡಗೋಡ: ಡೋಂಗಿ ಧರ್ಮ ಹಾಗೂ ದೇಶ ಭಕ್ತಿಯಿಂದ ಜನರ ಕಣ್ಣಿಗೆ ಮಣ್ಣೆರಚಿ ಆಳ್ವಿಕೆ ನಡೆಸುತ್ತಿರುವವರ ಮಾತಿಗೆ ಮಣೆ ಹಾಕದೆ ಕಾಂಗ್ರೆಸ್(Congress) ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ(Srinivas Mane) ಹೇಳಿದರು.
Karnataka Politics: ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್
ಡಿ.07 ರಂದು ತಾಲೂಕಿನ ನ್ಯಾಸರ್ಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತರಕನ್ನಡ(Uttara Kananda) ವಿಧಾನಪರಿಷತ್ ಚುನಾವಣೆಯ(Vidhan Parishat Election) ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ(Bheemanna Naik) ಪರ ಪ್ರಚಾರ(Campaign) ಸಭೆಯಲ್ಲಿ ಮಾತನಾಡಿದ್ದ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಜಾತಿ ಧರ್ಮ ಎಂಬುವುದಿಲ್ಲ. ಎಲ್ಲರಿಗೂ ಸಮಾನವಾದ ಹಕ್ಕು ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಸಾಕಷ್ಟು ಜನ ನಮ್ಮ ಪಕ್ಷ ಸೇರುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election) ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು.
ಮಾಡಬಾರದ್ದನ್ನು ಮಾಡುತ್ತಿರುವುದರಿಂದ ನೋಡಬಾರದನ್ನು ನೋಡುವ ಸ್ಥಿತಿ ನೋಡುತ್ತಿದ್ದೇವೆ. ಕೊರೋನಾ(Coronavirus), ಬರಗಾಲ(Drought), ಮಳೆ ಪ್ರವಾಹ(Flood) ಒಂದಿಲ್ಲ ಒಂದು ತೊಂದರೆ ಅನುಭವುಸುತ್ತಿದ್ದು, ಸೃಷ್ಟಿ ನಮಗೆ ಬುದ್ಧಿ ಕಲಿಸುತ್ತಿದೆ. ಈಗಲಾದರೂ ನಾವು ಎಚ್ಚೆಎತ್ತುಕೊಂಡು ಮಾನವೀಯ ತಳಹದಿಯ ಮೇಲೆ ಜೀವನ ಮಾಡಲು ಮುಂದಾಗಬೇಕಿದ್ದು, ದೇವರಿಗೆ ಎಷ್ಟು ಪೂಜೆ ಪುನಸ್ಕಾರ ಮಾಡುತ್ತೇವೆ ಎಂಬುವುದು ಮುಖ್ಯವಲ್ಲ. ಬದಲಾಗಿ ಮಾನವಿಯತೆಗೆ ಎಷ್ಟು ಬೆಲೆ ಕೊಡುತ್ತೇವೆಯೊ ಅದರ ಮೇಲೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ತಿಳಿಸಿದ್ದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ತಾಪಂ ಮಾಜಿ ಸದಸ್ಯ ಜ್ಞಾನದೇವ ಗುಡಿಯಾಳ, ರಾಜ್ಯ ಅಲ್ಪಸಂಖ್ಯಾತ ವಿಭಾಗ ಸಂಚಾಲಕ ಎಮ್.ಎನ್. ದುಂಡಸಿ, ಎಚ್.ಎಮ್. ನಾಯ್ಕ, ವೆಂಕಟೇಶ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.