ಬಿಜೆಪಿಯವ್ರು ಬ್ರಿಟಿಷರಿಗಿಂತ ಡೇಂಜರ್; ಮಾಗಡಿ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ!

By Ravi Janekal  |  First Published Nov 27, 2023, 10:01 AM IST

ದೇಶದಲ್ಲಿ ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಬ್ರಿಟಿಷರಿಗಿಂತ ಬಿಜೆಪಿ ಡೇಂಜರ್ ಎಂದು ಮಾಗಡಿ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಮಾಗಡಿ (ನ.27): ದೇಶದಲ್ಲಿ ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಬ್ರಿಟಿಷರಿಗಿಂತ ಬಿಜೆಪಿ ಡೇಂಜರ್ ಎಂದು ಮಾಗಡಿ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಗಡಿ ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ಬಾಲಕೃಷ್ಣ, ಬಿಜೆಪಿಯವರು ಬ್ರಿಟಿಷರಿದ್ದಂಗೆ ಯಾರು ಪ್ರಬಲರಾಗಿರುತ್ತಾರೆ. ಅವರ ಮಧ್ಯೆ ಗುಂಪು ಕಟ್ಟಿ ಎತ್ತಿಕಟ್ಟುವ ಕೆಲಸ ಬಿಜೆಪಿ ಮಾಡ್ತಿದೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಗೆ ಬಂದಿರುವ ಸ್ಥಿತಿ ಕರ್ನಾಟಕದಲ್ಲಿ ಜೆಡಿಎಸ್ ಗೆ ಬರುತ್ತದೆ. ಈಗಲೇ ಜೆಡಿಎಸ್ ಪಕ್ಷದವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಸ್ಥಿತ್ವವನ್ನು ಸಂಪೂರ್ಣ ಮುಗಿಸುವ ಕೆಲಸ ಬಿಜೆಪಿ ಮಾಡುತ್ತದೆ ಎನ್ನುವ ಮೂಲಕ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದಕ್ಕೆ ಕಿಡಿಕಾರಿದರು.

Tap to resize

Latest Videos

undefined

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ: ಶಾಸಕ ಬಾಲಕೃಷ್ಣ

ಮಾಯಾವತಿ ಮುಂದಿನ ಪ್ರಧಾನಿ ಎಂದು ಹೇಳ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಮಾಯಾವತಿ ಅವರ ಹೆಸರಿಲ್ಲದಂತೆ ಮಾಡಿಬಿಟ್ಟರು. ಇನ್ನು ಕರ್ನಾಟಕದಲ್ಲಿ ಕುಮಾರಣ್ಣ ಯಾವ ಲೆಕ್ಕ. ನಮ್ಮನ್ನು ನೋಡಿದ ತಕ್ಷಣ ಕುಮಾರಣ್ಣ ಬಿಜೆಪಿಯವರನ್ನು ತಬ್ಬಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ನಾವು ಜಾತ್ಯಾತೀತ, ಜಾತ್ಯಾತೀತ ಎಂದು ಹೇಳ್ತಿದ್ದ ಜನತಾದಳ ಮತ್ತು ದೇವೇಗೌಡರು ಇಳಿವಯಸ್ಸಿನಲ್ಲಿ ಅದು ಸಾಯುವ ಕಾಲದಲ್ಲಿ ಕುಮಾರಣ್ಣ ದೇವೇಗೌಡರನ್ನು ಕೋಮುವಾದಿ ಮಾಡಿಬಿಟ್ರು ಎಂದು ಛೇಡಿಸಿದರು.

ಡಿಕೆಶಿ ವೈಯಕ್ತಿಕ ವಿಚಾರಕ್ಕೆ ಯಾಕೆ ಹೋಗ್ತೀರಿ? : ಎಚ್‌ಡಿಕೆಗೆ ಮಾಗಡಿ ಶಾಸಕ ತಿರುಗೇಟು

ಕಳೆದ ಭಾರಿ ಪುಲ್ವಾಮ ದಾಳಿಯಾಗದಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗ್ತಿರಲಿಲ್ಲ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಸೈನಿಕರನ್ನು ಬಲಿ ಕೊಟ್ಟು ಮೋದಿ ಅಧಿಕಾರಕ್ಕೆ ಬರ್ತಾರೆ ಎಂದು ಲೇವಡಿ ಮಾಡಿದರು.

click me!