ಇತಿಹಾಸ ತಿರುಚಿತ್ತಿರುವ ಬಿಜೆಪಿ: ಅರವಿಂದ ದಳವಾಯಿ

By Kannadaprabha News  |  First Published Feb 1, 2023, 8:00 PM IST

ಗಾಂಧೀಜಿ ದೇಶದ ಸಮಗ್ರತೆ, ಭಾವೈಕ್ಯ ಉಳಿಸಲಿಕ್ಕೆ, ಕೋಮು ಸೌರ್ಹಾದ ಕಾಪಾಡಲಿಕ್ಕೆ ಹಾಗೂ ದೇಶವನ್ನು ಒಂದಾಗಿ ನಿಲ್ಲಿಸಲಿಕ್ಕೆ ಶ್ರಮಿಸಿದವರು. ಬಿಜೆಪಿಯವರು ಇಂದು ಇತಿಹಾಸ ತಿರುಚುತ್ತಿದ್ದಾರೆ. ಯುವಕರು ಸತ್ಯವನ್ನು ಅರಿಯಲು ಇತಿಹಾಸವನ್ನು ಅಭ್ಯಸಿಸಬೇಕು ಎಂದ ಅರವಿಂದ ದಳವಾಯಿ


ಮೂಡಲಗಿ(ಫೆ.01): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ ಜೋಡೋ ಪಾದಯಾತ್ರೆ ಎಲ್ಲರನ್ನೂ ಜೋಡಿಸುವ ಯಾತ್ರೆ ಇಂದಿಗೆ ಯಶಸ್ವಿಗೊಂಡು ಸ್ವಂಪನ್ನಗೊಂಡಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಕಾಂಕ್ಷಿ ಅರವಿಂದ ದಳವಾಯಿ ಹೇಳಿದರು.

ಅವರು ಸೋಮವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಗಾಂಧೀಜಿ ದೇಶದ ಸಮಗ್ರತೆ, ಭಾವೈಕ್ಯ ಉಳಿಸಲಿಕ್ಕೆ, ಕೋಮು ಸೌರ್ಹಾದ ಕಾಪಾಡಲಿಕ್ಕೆ ಹಾಗೂ ದೇಶವನ್ನು ಒಂದಾಗಿ ನಿಲ್ಲಿಸಲಿಕ್ಕೆ ಶ್ರಮಿಸಿದವರು. ಬಿಜೆಪಿಯವರು ಇಂದು ಇತಿಹಾಸ ತಿರುಚುತ್ತಿದ್ದಾರೆ. ಯುವಕರು ಸತ್ಯವನ್ನು ಅರಿಯಲು ಇತಿಹಾಸವನ್ನು ಅಭ್ಯಸಿಸಬೇಕು ಎಂದರು.

Tap to resize

Latest Videos

ನನ್ನನ್ನು ಸೋಲಿಸುತ್ತೇವೆ ಎಂಬುದು ಬಿಜೆಪಿ ಭ್ರಮೆ: ಸತೀಶ ಜಾರಕಿಹೊಳಿ

ಕಾಂಗ್ರೆಸ್‌ ಮುಖಂಡರಾದ ಭೀಮಪ್ಪ ಹಂದಿಗುಂದ, ವಿ.ಪಿ.ನಾಯಕ ಮಾತನಾಡಿದರು. ಈ ಸಮಯದಲ್ಲಿ ಕೌಜಲಗಿ ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಅಧ್ಯಕ್ಷ ಪ್ರಕಾಶ ಅರಳಿ, ಅರಬಾವಿ ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಅಧ್ಯಕ್ಷ ಸುರೇಶ ಮಗದುಮ್ಮ, ರೈತ ಮುಖಂಡ ಗುಂಡಪ್ಪ ಕಮತೆ, ಮಲಿಕ್‌ ಕಳ್ಳಿಮನಿ, ಮಹಾಲಿಂಗಯ್ಯ ನಂದಗಾವಿಮಠ, ಬಸಗೌಡಾ ಪಾಟೀಲ, ಶಾಬನ್ನವರ, ವೆಂಕನಗೌಡಾ ಪಾಟೀಲ, ಮಲಿಕ್‌ ಲಾಡಖಾನ್‌, ಮಹಾದೇವ ಸಮಗಾರ, ಶೌಕತ್‌ ಮುಲ್ತಾನಿ, ಇರ್ಷಾದ್‌ ಪೈಲವಾನ, ರವಿ ಮೂಡಲಗಿ, ಇಮಾಂ ಹುನ್ನೂರ, ಕಲ್ಲಪ್ಪ ಸೋಲಾಪೂರ, ಮದಾರ ಜಕಾತಿ ಮತ್ತಿತರರು ಉಪಸ್ಥಿತರಿದ್ದರು.

click me!