Karnataka election 2023: ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ: ಸುರ್ಜೇವಾಲ ವಾಗ್ದಾಳಿ

By Ravi Janekal  |  First Published Mar 6, 2023, 2:53 PM IST

ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ; ಭ್ರಷ್ಟ ಜನತಾ ಪಾರ್ಟಿ. ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ


ಹಾವೇರಿ (ಮಾ.6) : ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ; ಭ್ರಷ್ಟ ಜನತಾ ಪಾರ್ಟಿ. ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep singh surjewala) ವಾಗ್ದಾಳಿ

ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರವನ್ನು ಬೊಮ್ಮಾಯಿ(CM Basavaraj bommai) ಸರ್ಕಾರ ಅನ್ನುವುದಕ್ಕಿಂತ ಭ್ರಷ್ಟಾಸುರ ಸರ್ಕಾರ ಅನ್ನಬೇಕು. ಬೊಮ್ಮಾಯಿ ಸರ್ಕಾರ(Curruption govt )ಅಪರಾಧಿಗಳು, ಭ್ರಷ್ಟರ ಜತೆ ಶಾಮೀಲಾಗಿದೆ ಎಂದರು.

Tap to resize

Latest Videos

undefined

ಮೈಸೂರು ಸೋಪಿನ ಸುಗಂಧವನ್ನೂ ಮಾರಿದ ಬಿಜೆಪಿ: ಸುರ್ಜೇವಾಲಾ ಕಿಡಿ

ಬಿಜೆಪಿಯವರು 40% ಸರ್ಕಾರ ಎಂಬ ಆರೋಪಕ್ಕೆ ಸಾಕ್ಷಿ ತಗೊಂಡು ಬನ್ನಿ ಅಂತಿದ್ರು. ಈಗ ಬಿಜೆಪಿ ಶಾಸಕ(Madalu virupakakshappa)ನ ಮನೆಯಲ್ಲಿ 8 ಕೋಟಿ ರೂ. ಸಿಕ್ಕಿದೆ. ವಿರೂಪಾಕ್ಷಪ್ಪ ಅವರನ್ನು ಯಾವಾಗ ಹಿಡಿಯುತ್ತೀರಿ? ಕಳೆದ ನಾಲ್ಕು ದಿನಗಳಿಂದ ಸಿಕ್ಕಿಲ್ಲ. ಬಿಜೆಪಿ ಭ್ರಷ್ಟ, ಕಮಿಷನ್ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

ನಾವು ಹಲವು ಭರವಸೆಗಳನ್ನು ನೀಡಿದ್ದೇವೆ. ಇಂದು ಆ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್(Congress Guarantee card) ನೀಡ್ತಾ ಇದ್ದೇವೆ. 200 ಯುನಿಟ್ ವಿದ್ಯುತ್ ಫ್ರೀ   ಕೊಡಲು ನಿರ್ಧರಿಸಿದ್ದೇವೆ. ಕಾಂಗ್ರೆಸ್ ಪಕ್ಷ ಜಾತಿ, ಧರ್ಮದ ಬಂಧನ , ಭೇಧ ಭಾವ ಇಲ್ಲದೇ ಎಲ್ಲರಿಗೂ ಯೋಜನೆಗಳನ್ನು ರೂಪಿಸಿದೆ. ಮಹಿಳಾ ಯಜಮಾನಿಗೆ 2000 ರೂಪಾಯಿ ಸಹಾಯ ಧನ ನೀಡುವ ಭರವಸೆ ನೀಡಿದ್ದೇವೆ ಮುಂದಿನ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಜನರು ಕಿತ್ತೆಸೆಯಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಭರವಸೆ ವ್ಯಕ್ತಪಡಿಸಿದರು.

 

ಕರ್ನಾಟಕ 40 ಪರ್ಸೆಂಟ್‌ ಕಮಿಷನ್‌ಗೆ ಹೆಸರುವಾಸಿ: ಬಿಜೆಪಿ ವಿರುದ್ದ ಸುರ್ಜೆವಾಲಾ ವಾಗ್ದಾಳಿ

click me!