ಕೊನೆಗೂ ಸಂಪುಟ ವಿಸ್ತರಣೆಗೆ ಕೂಡಿಬಂತು ಮುಹೂರ್ತ, ಇಬ್ಬರು ಸಚಿವರಿಗೆ ಕೊಕ್..!

By Suvarna NewsFirst Published Dec 24, 2020, 3:44 PM IST
Highlights

ಬ್ರಿಟನ್ ಕೊರೋನಾ ವೈರಸ್ ಭೀತಿ ನಡುವೆಯೂ ರಾಜ್ಯ ಬಿಜೆಪಿ ಸಂಪುಟ ಕಸರತ್ತು ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಆಕಾಂಕ್ಷಿಗಳು ಎದ್ದು ಕುಂತಿದ್ದಾರೆ.

ಬೆಂಗಳೂರು, (ಡಿ.24): ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಸಚಿವ ಸಂಪುಟ ಪುನಾರಚನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಂತೆ ಇದೆ.

"

ಹೌದು... ಸಂಪುಟ ಪುನರ್ ರಚನೆಗೆ  ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಸಿಎಂ ಯಡಿಯೂರಪ್ಪ ಅವರು ಹೊಸ ವರ್ಷಕ್ಕೆ ಸಚಿವಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ನಾಯಕನನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಕಾಂಗ್ರೆಸ್​! 

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಕಚೇರಿಯಿಂದ ಖಾಲಿ ಇರುವಂತ ಎಲ್ಲಾ ಸ್ಥಾನಗಳಿಗೂ ಸಚಿವರನ್ನು ಆಯ್ಕೆ ಮಾಡಿ, ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಹೊಸ ವರ್ಷಕ್ಕೆ ಸಚಿವಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಗೋ ಎಲ್ಲಾ ಸಾಧ್ಯತೆಗಳಿವೆ. ಅದ ಬಿಟ್ಟರೇ ಸಂಕ್ರಾಂತಿಗೆ ನೂತನ ಸಚಿವ ಪ್ರಮಾಣ ವಚನ ಸ್ವೀಕರ ಮಾಡುವುದು ಬಹುತೇಕ ಖಚಿತವಾಗಿದೆ.

ಒಂದು ವೇಳೆ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಕಳುಹಿಸಿಕೊಟ್ಟಿರುವಂತ ಸಚಿವರ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದೇ ಆದಲ್ಲಿ, ಸಚಿವ ಸಂಪುಟದಲ್ಲಿರುವಂತ ಹಾಲಿ ಇಬ್ಬರು ಶಾಸಕರಿಗೆ ಕೋಕ್ ನೀಡಿ, ವಲಸಿಗರಿಗೆ ಅವಕಾಶ ನೀಡಲಾಗುತ್ತದೆ.

ಒಟ್ಟಿನಲ್ಲಿ ಬ್ರಿಟನ್ ಕೊರೋನಾ ವೈರಸ್ ಭೀತಿ ಮಧ್ಯೆ ಸಂಪುಟ ಕಸರತ್ತು ಶುರುವಾಗಿದ್ದು, ಯಾರಿಗೆ ಮಂತ್ರಿ ಭಾಗ್ಯ ದೊರೆಯಲಿದೆ? ಯಾರನ್ನ ಸಂಪುಟದಿಂದ ಕೈಬಿಡಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

click me!