ಗಣಿನಾಡಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದ ಬಿಜೆಪಿ

By Suvarna News  |  First Published Nov 20, 2022, 6:32 PM IST

ಎಸ್ಟಿ ಸಮಾವೇಶ ಮಾಡೋ ಮತದಾರರ ಓಲೈಕೆ
ಮೀಸಲಾತಿ ಹೆಚ್ಚಳ ಮಾಡಿರೋ ಕ್ರಿಡಿಟ್ ಗಾಗಿ ಬಿಜೆಪಿ ಸಮಾವೇಶ.
ಕಾಂಗ್ರೆಸ್ ವಿರುದ್ಧ ಭರ್ಜರಿ ದಾಳಿ ಮಾಡಿದ ಬಿಜೆಪಿ ನಾಯಕರು


ವರದಿ : ನರಸಿಂಹ ಮೂರ್ತಿ ‌ಕುಲಕರ್ಣಿ
ಬಳ್ಳಾರಿ (ನ.20): ಬಿಜೆಪಿ ಮೇಲ್ವರ್ಗದ ಪಕ್ಷವಲ್ಲ. ಎಲ್ಲ‌ ಜಾತಿ ಜನಾಂಗದವರನ್ನು ಜತೆಗೆ  ಕರೆದು ಕೊಂಡು ಹೋಗ್ತದೆ. ಇದಕ್ಕೆ ಸಾಕ್ಷಿಯೇ ‌ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರೋದು. ಹೌದು ಹೀಗೊಂದು ಸಂದೇಶ ಸಾರೋ ನಿಟ್ಟಿನಲ್ಲಿ ಗಣಿ ನಾಡು ಬಳ್ಳಾರಿಯಲ್ಲಿ ಬೃಹತ್ ಎಸ್ಟಿ ಸಮಾವೇಶ ಮಾಡೋ ಮೂಲಕ ಕೇಸರಿ ಪಡೆ ಶಕ್ತಿ ಪ್ರದರ್ಶನ ಮಾಡಿತು. ಸಮಾವೇಶದಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಜನರ ಮಧ್ಯೆ ಬಿಜೆಪಿಯ ಎಲ್ಲ ನಾಯಕರು ಕಾಂಗ್ರೆಸ್ ವಿರುದ್ದ ಅಬ್ಬರಿಸಿ ಬೊಬ್ಬಿರಿದರು. ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿರೋದು ಬಿಜೆಪಿ ಎನ್ನುವುದನ್ನು ಮನವರಿಕೆ ಮಾಡೋದರ ಜೊತೆಗೆ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ನೀಡುವಂತೆ ಬಿಜೆಪಿ ನಾಯಕರು ಮನವಿ ಮಾಡಿದರು

ಕೈ ವಿರುದ್ದ ಅಬ್ಬರಿಸಿ ಬೊಬ್ಬಿರಿದ ಕಮಲ ಕಲಿಗಳು: ಗಣಿನಾಡು ಬಳ್ಳಾರಿ ಇಂದು ಅಕ್ಷರಶಃ ಕೇಸರಿ ಮಯವಾಗಿತ್ತು.  ಕಮಲ ಕಲಿಗಳಂತೂ ಕಾಂಗ್ರೆಸ್ (Congress) ವಿರುದ್ದ ವಾಗ್ಬಾಣಗಳನ್ನು ಬಿಟ್ಟರು. ಸಮಾವೇಶದಲ್ಲಿ ನೆರೆದಿದ್ದ ಲಕ್ಷಾಂತರ ಜನ (Lakhs of people) ಶಿಳ್ಳೆ, ಚಪ್ಪಾಳೆ ಹೊಡೆದು ನಾಯಕರ ಮಾತನ್ನ ಕೇಳಿದರು. ಇವತ್ತು ಬಳ್ಳಾರಿ ನಗರದಲ್ಲಿ ಬಿಜೆಪಿ ಎಸ್ಟಿ‌ ಮೋರ್ಚಾದ ನವಶಕ್ತಿ ಸಮಾವೇಶ (Navashakti Convention) ಚುನಾವಣೆ ಪ್ರಚಾರ ಸಭೆಯ ಭಾಗವಾಗಿತ್ತು. ಬಳ್ಳಾರಿಯ ಜಿ ಸ್ಕೈರ್ ಟೌನ್ ನಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (Nadda), ಸಿಎಂ ಬಸವರಾಜ ಬೊಮ್ಮಾಯಿ (Bommai), ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಎಸ್ಸಿ- ಎಸ್ಟಿಗೆ ಮೀಸಲಾತಿ ಹೆಚ್ಚಿಸಿದ ಬಳಿಕ ನಡೆದ ಬೃಹತ್ ಸಮಾವೇಶ ಇದಾಗಿತ್ತು. ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಎಲ್ಲ ನಾಯಕರು ಸರ್ಕಾರದ ಸಾಧನೆಗಳನ್ನ ಹೇಳುವುದರ ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. 

Tap to resize

Latest Videos

undefined

Ballari ST Convention: ನಮ್ಮ ಜನಾಂಗದ ಋಣ ತೀರಿಸಿದ್ದೇನೆ- ಸಚಿವ ಶ್ರೀರಾಮುಲು

ಹಾಲಿ ಮಾಜಿ ಸಿಎಂಗಳು ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಇನ್ನೂ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ (Reservation) ಹೆಚ್ಚಿಸಿದ ಬಗ್ಗೆ ಹಾಗೂ ಮುಂದೆಯೂ ಎಸ್ಸಿ ಎಸ್ಟಿ ಸಮುದಾಯಗಳ (Communities) ಅಭಿವೃದ್ದಿಗೆ ಬಿಜೆಪಿ‌ ಕಟಿ ಬದ್ದವಾಗಿರುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.  ಕಾಂಗ್ರೆಸ್ ನಾಯಕರ ನಿಲುವುಗಳನ್ನ‌ ಪ್ರಶ್ನೆ ಮಾಡಿದ ಬೊಮ್ಮಯಿ ಅವರು,  ಎಸ್ಸಿ, ಎಸ್ಟಿ, ಒಬಿಸಿ, ಮೈನಾರಿಟಿ ಸಮುದಾಯಗಳಿಗೆ ಕಾಂಗ್ರೆಸ್ 60 ವರ್ಷ ನಿರಂತರ ಬಳಸಿಕೊಂಡು ಅನ್ಯಾಯ ಮಾಡಿದೆ ಇದರ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ ಎಂದರು. ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ,  ಕಾಂಗ್ರೆಸ್ ಎಸ್ಟಿ ಜನಾಂಗಗಕ್ಕೆ ಏನು ಮಾಡಿಲ್ಲ, ಬಿಜೆಪಿ ಮಾತ್ರ ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ದಿಗೆ ಮಾಡ್ತಿದೆ. ಈ ಬಾರಿ ನೂರಕ್ಕೆ ನೂರರಷ್ಟು ಎಸ್ಸಿ ಎಸ್ಟಿ ಜನ ನಮ್ಮ ಜೊತೆ ಬರುವ ವಿಶ್ವಾಸವಿದೆ. ಹೀಗಾಗಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ  ಬಿಜೆಪಿ ಗೆಲ್ಲಬೇಕು ಎಂದರು.

ಅಬ್ಬರಿಸಿದ ಶ್ರೀರಾಮುಲು:  ಸಮಾವೇಶದ ಕೇಂದ್ರ ಬಿಂದುವಾಗಿದ್ದ ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಎಸ್ಸಿ ಎಸ್ಟಿ ಮೀಸಲಾತಿ ವಿಚಾರದಲ್ಲಿ ನನ್ನನ್ನು ವ್ಯಂಗ್ಯ (sarcasm) ಮಾಡಿದ್ದೀರಲ್ಲ. ಈಗ ಬನ್ನಿ ನಿಮ್ಮ ತಾಕತ್ತು ಏನಿದೆ ಅನ್ನೋದು ತೋರಿಸಿ ಎಂದು ಭಾಷಣದೂದಕ್ಕೂ  ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಜೊತೆಗೆ ಮೀಸಲಾತಿ ಹೆಚ್ಚಳ ಮಾಡೋ ಮೂಲಕ ಜನಾಂಗದ ಋಣ (Debt) ತಿರಿಸಿರೋದಾಗಿ ಹೇಳಿದರು.

ಚುನಾವಣೆ ರಣಕಹಳೆ ಮೊಳಗಿಸಿದ ಬಿಜೆಪಿ: 
ಕಲ್ಯಾಣ ಕರ್ನಾಕಟದ ಹೆಬ್ಬಾಗಿಲು ಗಣಿ ನಾಡು ಬಳ್ಳಾರಿಯಲ್ಲಿ‌ ನಡೆದ‌ ಬಿಜೆಪಿ ಎಸ್ಟಿ ಸಮಾವೇಶ ಯಶಸ್ವಿಯಾಗಿ ನಡೆದಿದೆ. ರಾಹುಲ್ ಜೋಡೋ ಯಾತ್ರೆಯ ಸಕ್ಸಸ್ ನ ಖುಷಿಯಲ್ಲಿದ್ದ  ಕೈ ನಾಯಕರಿಗೆ ಬಿಜೆಪಿ ಭರ್ಜರಿ ಶಕ್ತಿ ಪ್ರದರ್ಶನ‌ಮಾಡಿ ಟಕ್ಕರ್ ಕೊಟ್ಟಿರೋದಂತು ಸುಳ್ಳಲ್ಲ.

click me!